ಸರ್ಕಾರಿ ದಿವ್ಯಾಂಗ ನೌಕರರಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ
ಬೆಂಗಳೂರು,ಫೆಬ್ರವರಿ 05: ಸರ್ಕಾರಿ ದಿವ್ಯಾಂಗ ನೌಕರರಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಿ ಕರ್ನಾಟಕ ಸರ್ಕಾರ ಸುತ್ತೋಲೆ ಹೊರಡಿಸಿದೆ.
ಸರ್ಕಾರಿ, ಅರೆ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಕಚೇರಿಗಳಲ್ಲಿ ಕೆಲಸ ಮಾಡುವ ದಿವ್ಯಾಂಗ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡಲಾಗಿದೆ.
ಭಯ ಬಿಡಿ: ಕೊರೊನಾ ಲಸಿಕೆ ಪಡೆದ 1150 ಜನರಲ್ಲಿ ಒಬ್ಬರಿಗೆ ಅಡ್ಡಪರಿಣಾಮ!
ರಾಜ್ಯ ಮುಖ್ಯ ಕಾರ್ಯದರ್ಶಿ ಪಿ ರವಿ ಕುಮಾರ್ ಅವರು ಈ ಸಂಬಂಧ ಸುತ್ತೋಲೆ ಹೊರಡಿಸಿದ್ದು, ಅಂತಹ ಉದ್ಯೋಗಿಗಳು ತಮ್ಮ ಕೆಲಸದ ಸ್ಥಳಗಳಿಗೆ ಕೋವಿಡ್ 19 ಹಿನ್ನೆಲೆ ಪ್ರಯಾಣಿಸುವುದು ಕಷ್ಟ ಎಂದು ಉಲ್ಲೇಖಿಸಿದ್ದಾರೆ.
ಇತ್ತೀಚೆಗೆ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಓಕಾ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಮ್ ಅವರ ವಿಭಾಗೀಯ ಪೀಠವು ಜನವರಿ 5 ರ ತನ್ನ ಸುತ್ತೋಲೆಯನ್ನು ಮರುಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿರುವುದನ್ನು ನಾವಿಲ್ಲಿ ನೆನೆಯಬಹುದು, ಈ ಮೂಲಕ 50 ಶೇ. ದಷ್ಟು ವಿಶೇಷ ಸಾಮರ್ಥ್ಯದ ಉದ್ಯೋಗಿಗಳು ಪರ್ಯಾಯ ದಿನಗಳಲ್ಲಿ ಕೆಲಸ ಮಾಡಬಹುದು ಎಂದು ನಿರ್ದೇಶಿಸಿದೆ.
"ಇದು ಮನೆಯಿಂದ 100 ಪ್ರತಿಶತದಷ್ಟು ಅಥವಾ ಕಚೇರಿಯಿಂದ 100 ಪ್ರತಿಶತದಷ್ಟು ಕೆಲಸ" ಆಗಿರಬೇಕು ಎಂದು ಅದು ಹೇಳಿದೆ.
ಕೇಂದ್ರ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ, ಸರ್ಕಾರಿ, ಅರೆ ಸರ್ಕಾರಿ ನಿಗಮ ಮತ್ತು ಮಂಡಳಿ ಕಚೇರಿಗಳಲ್ಲಿ ಕೆಲಸ ಮಾಡುವ ದೃಷ್ಟಿ ವಿಶೇಷ ಚೇತನ ಮತ್ತು ದೈಹಿಕ ವಿಶೇಷ ಚೇತನ ಸಿಬ್ಬಂದಿ ಸೇರಿದಂತೆ ವಿಶೇಷ ಸಾಮರ್ಥ್ಯದ ಉದ್ಯೋಗಿಗಳುಗೆ ಮನೆಯಿಂದ ಕೆಲಸ ಮಾಡಲು ಅವಕಾಶವಿದೆ. ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಾಗ ಅವರು ತಮ್ಮ ಕೆಲಸದ ಸ್ಥಳಗಳಿಗೆ ಪ್ರಯಾಣಿಸುವುದು ಕಷ್ಟಕರವಾಗಿದೆ.