ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜದ್ರೋಹದ ಆರೋಪ, ರಮ್ಯಾ ಉತ್ತರವೇನು?

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಆಗಸ್ಟ್, 23: ಪಾಕಿಸ್ತಾನವನ್ನು ಹೊಗಳಿದ್ದ ರಮ್ಯಾ ಇದೀಗ ರಾಜದ್ರೋಹದ ಆರೋಪ ಎದುರಿಸಬೇಕಾಗಿದೆ. ಕೊಡಗು ಪ್ರಗತಿ ರಂಗದ ಜಿಲ್ಲಾಧ್ಯಕ್ಷ, ವಕೀಲ ವಿಠಲ ಗೌಡ ಎಂಬುವರು ರಮ್ಯಾ ಮೇಲೆ ರಾಜದ್ರೋಹದ ಆರೋಪದಡಿ ದೂರು ಸಲ್ಲಿಕೆ ಮಾಡಿದ್ದಾರೆ.

ಆದರೆ ಇದಕ್ಕೆಲ್ಲ ಪ್ರತ್ಯುತ್ತರ ಎಂಬಂತೆ ರಮ್ಯಾ ಟ್ವೀಟ್ ಮಾಡಿದದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖ ಮೋಹನ್ ಭಾಗವತ್ ಪಾಕಿಸ್ತಾನ ಭಾರತದ ಸಹೋದರ ಎಂದರೆ ತಪ್ಪಲ್ಲ, ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದು ಗೊತ್ತೆ ಇದೆ. ಆದರೆ ನಮಗೆ ಕಾನೂನು ಮಾತ್ರ ಬೇರೆಯೇ? ಎಂಬ ದಾಟಿಯಲ್ಲಿ ಅಭಿಪ್ರಾಯ ಹೊರಹಾಕಿದ್ದಾರೆ.[ರಮ್ಯಾಗೆ ವಿಶ್ವದ ಮಾಹಿತಿ ಅಪಾರ, ನೊಬಲ್ ಪ್ರಶಸ್ತಿ ಸಿಗಲಿ!!]

Now former Mandya MP Ramya faces sedition heat

ದೇಶದ್ರೋಹದ ಘೋಷಣೆ ಕೂಗಿದ ಆರೋಪದ ಮೇಲೆ ಆಮ್ನೆಸ್ಟಿ ಇಂಟರ್ ನ್ಯಾಶನಲ್ ಶಿಕ್ಷಣ ಸಂಸ್ಥೆ ಮೇಲೂ ರಾಷ್ಟ್ರಕ್ಕೆ ದ್ರೋಹ ಮಾಡಿದ ಆರೋಪದಡಿ ದೂರು ದಾಖಲಾಗಿದೆ. ಅಖಿಲ ಭಾರತ ವಿದ್ಯಾರ್ಥಿ ಫೆಡರೇಶನ್ ಕಾರ್ಯಕರ್ತರು ನಿರಂತರ ಪ್ರತಿಭಟನೆಯನ್ನು ನಡೆಸಿದ್ದಾರೆ.[ರಕ್ಷಣಾ ಸಚಿವರು ಹೇಳಿದಂತೆ ಪಾಕಿಸ್ತಾನವಿಲ್ಲ: ರಮ್ಯಾ]

ಕಳೆದ ಶನಿವಾರ ಮಂಡ್ಯಕ್ಕೆ ಭೇಟಿ ನೀಡದ್ದ ರಮ್ಯಾ 'ಪಾಕಿಸ್ತಾನಕ್ಕೆ ಹೋದರೆ ನರಕಕ್ಕೆ ಹೋದಂತೆ ಎಂದು ರಕ್ಷಣಾ ಸಚಿವ ಮನೋಹರ್‌ ಪರಿಕ್ಕರ್‌ ಅವರು ಹೇಳಿದ್ದಾರೆ. ಆದರೆ, ಪಾಕಿಸ್ತಾನದಲ್ಲಿ ನಡೆದ ಸಾರ್ಕ್‌ ಯುವ ಸಂಸದರ ಹಾಗೂ ತಜ್ಞರ ಸಮ್ಮೇಳನದಲ್ಲಿ ಭಾಗವಹಿಸಿದ ನನ್ನ ಅನುಭವ ಚೆನ್ನಾಗಿಯೇ ಇತ್ತು. ರಕ್ಷಣಾ ಸಚಿವರು ಹೇಳಿದಂತೆ ಪಾಕಿಸ್ತಾನ ಇಲ್ಲ. ಅಲ್ಲಿಯೂ ಒಳ್ಳೆಯವರಿದ್ದಾರೆ' ಎಂದು ಹೇಳಿದ ನಂತರ ಆಕ್ರೋಶದ ಕಿಡಿ ಹೊತ್ತಿಕೊಂಡಿತ್ತು. ನಟ, ನವರಸ ನಾಯಕ ಜಗ್ಗೇಶ್ ಸಹ ರಮ್ಯಾ ಹೇಳಿಕೆಗೆ ವ್ಯಂಗ್ಯದ ತಿರುಗೇಟು ನೀಡಿದ್ದರು.

English summary
Now it is actor-politician Ramya's turn. A case of sedition has been filed against the former Congress MP in a court following her statements in which she praised Pakistan. The case has been filed in the court of the Judicial Magistrate First Class by advocate Vithal Gowda. Ramya, following the backlash had tweeted, "Mohan Bhagwatji of the RSS says Pakistan is India's brother and @narendramodi famous visit to Pakistan we all know.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X