Gram Panchayat: ಗ್ರಾಮ ಪಂಚಾಯತಿ ಪಿಡಿಒ, ಇತರ ನೌಕರರಿಗೆ ಗುಡ್ ನ್ಯೂಸ್
ಕಲಬುರಗಿ , ಏಪ್ರಿಲ್ 16: ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯತಿ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್ 1 ಮತ್ತು 2 ಹಾಗೂ ದ್ವಿತೀಯ ದರ್ಜೆ ಲೆಕ್ಕಸಹಾಯಕರ ವರ್ಗಾವಣೆಗಳನ್ನು ಕೌನ್ಸಿಲಿಂಗ್ ಮೂಲಕ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ವರ್ಗಾವಣೆ ನಿಯಮಗಳ ನಿಯಮ9ರ ಅನ್ವಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಸಾರ್ವಜನಿಕ ಹಿತಾಸಕ್ತಿಯ ಹಾಗೂ ಕೋರಿಕೆ ವರ್ಗಾವಣೆಗಳನ್ನು ಸಾಮಾನ್ಯವಾಗಿ ಕ್ಯಾಲೆಂಡರ್ ವರ್ಷದ ಏಪ್ರಿಲ್ ಮತ್ತು ಮೇ ಮಾಹೆಗಳ ನಡುವಿನಲ್ಲಿ ಮಾಡಬಹುದು ಅಥವಾ ಅಸಾಧಾರಣ ಸಂದರ್ಭಗಳಲ್ಲಿ ಸರ್ಕಾರವು ಅಧಿಸೂಚಿಸಿದಂತೆ ಮಾಡಬಹುದಾಗಿರುತ್ತದೆ ಎಂದುತಿಳಿಸಿರುವ ಸಚಿವರು 2025-26 ನೇ ಸಾಲಿನ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆಯನ್ನು ದಿನಾಂಕ: 17.04.2025 ರಿಂದ ದಿನಾಂಕ: 13.05.2025 ರೊಳಗೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂಬ ಮಾಹಿತಿಯನ್ನು ಸಚಿವ ಪ್ರಿಯಾಂಕ್ ಖರ್ಗೆ ನೀಡಿದ್ದಾರೆ.

ಕಲಬುರಗಿಯ ಸಮಗ್ರ ಅಭಿವೃದ್ದಿಗೆ ಸ್ಟೇಕ್ ಹೋಲ್ಡರ್ ಅವರ ಪಾತ್ರ ಪ್ರಮುಖವಾಗಿದೆ. ಕಳೆದ ಲೋಕಸಭಾ ಚುನಾಚಣೆಯ ಸಂದರ್ಭದಲ್ಲಿ ಎಲ್ಲ ಅಸೋಸಿಯೇಷನ್ ಗಳ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿ ಜಿಲ್ಲೆಯಲ್ಲಿ ಕೈಗಾರಿಕೆ ಕೃಷಿ ಹಾಗೂ ಔದ್ಯೋಗಿಕ ಅಭಿವೃದ್ದಿಗಾಗಿ ನೀಲ ನಕ್ಷೆ ತಯಾರಿಸುವುದಾಗಿ ಭರವಸೆ ನೀಡಲಾಗಿತ್ತು ಎಂದ ಸಚಿವರು, ಎಲೆಕ್ಟ್ರಾನಿಕ್ ಮ್ಯಾನುಫಾಕ್ಷರಿಂಗ್ ಘಟಕ ಸ್ಥಾಪನೆ, ಉತ್ಪಾದನಾಘಟಕಗಳ ಸ್ಥಾಪನೆ, ಕೃಷಿ, ಉದ್ಯೋಗ, ಕೋಲ್ಡ್ ಸ್ಟೋರೆಜ್, ವೇರ್ ಹೌಸ್ ಸ್ಥಾಪನೆ, ನಗರ ಸೌಂದರ್ಯೀಕರಣ, ಕ್ರೀಡಾ ಕ್ಷೇತ್ರದ ಅಭಿವೃದ್ದಿ, ವೇರ್ ಹೌಸ್ ಹಾಗೂ ಕೋಲ್ಡ್ ಸ್ಟೋರೆಜ್ ಸ್ಥಾಪನೆ, ಕ್ರೀಡಾಂಗಣಗಳ ಸ್ಥಾಪನೆ ಸೇರಿದಂತೆ ಅಭಿವೃದ್ದಿಗೆ ಮುಂದಿನ ಮೇ ತಿಂಗಳ ಮೊದಲ ವಾರದಲ್ಲಿ ಸಭೆ ನಡೆಸಲಾಗುವುದು ಆಗ ಅಗತ್ಯವಿರುವ ಪ್ರಮುಖ ಸಲಹೆಗಳನ್ನು ನೀಡುವಂತೆ ಸಚಿವರು ಮನವಿ ಮಾಡಿದರು.
ಕಲಬುರಗಿ ನಗರದ ಖರ್ಗೆ ಪೆಟ್ರೋಲ್ ಪಂಪ್ ಬಳಿ ಫ್ಲೈ ಓವರ್, ಕಲಬುರಗಿ ವಿಮಾನ ನಿಲ್ದಾಣದವರೆಗೆ ನಾಲ್ಕುಪಥಗಳ ರಸ್ತೆ ನಿರ್ಮಾಣ, ನಗರದ ಹೊರವಲಯದಲ್ಲಿ ಎಪಿಎಂಸಿ ಸ್ಥಾಪನೆಗೆ ನೂರು ಎಕರೆ ಜಮೀನು ಮಂಜೂರು, ಸೂಪರ್ ಮಾರ್ಕೆಟ್ ಬಳಿ ವಾಹನ ದಟ್ಟಣೆ ನಿವಾರಣೆಗಾಗಿ ಬಹುಮಹಡಿ ಪಾರ್ಕಿಂಗ್ ಕಟ್ಟಡ ಸ್ಥಾಪನೆ, ಕಲಬುರಗಿ ಯಿಂದ ದೇಶದ ಪ್ರಮುಖ ನಗರಗಳಿಗೆ ನೇರ ವಿಮಾನ ಸೇವೆ ಪ್ರಾರಂಭ ಸೇರಿದಂತೆ ಪ್ರಮಖ ಬೇಡಿಕೆಗಳನ್ನು ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಶರಣು ಪಪ್ಪಾ ಸಚಿವರಿಗೆ ಸಲ್ಲಿಸಿದರು.
ಆಗ ಉತ್ತರಿಸಿದ ಸಚಿವರು ಫ್ಲೈ ಓವರ್ ನಿರ್ಮಾಣಕ್ಕೆ ಈಗಾಗಲೇ ಕ್ರಮವಹಿಸಲಾಗಿದೆ. ಈ ಹಿಂದೆ ನಿರ್ಣಯ ಸಿದ್ದ ಫ್ಲೈಓವರ್ ಸ್ಥಾಪನೆ ಅವೈಜ್ಞಾನಿಕತೆಯಿಂದ ಕೂಡಿದ್ದರಿಂದ ಹೊಸ ಮಾದರಿಯ ಫೈ ಓವರ್ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ ಎಂದರು. ಗ್ರೇನ್ ಅಂಡ್ ಸೀಡ್ಸ್ ಮರ್ಚೆಂಟ್ ಅಸೋಸಿಯೇಷನ್ ಅಧ್ಯಕ್ಷ ಸಂತೋಷ್ ಅವರು ಮಾತನಾಡಿ ಕಲಬುರಗಿ ಎಲ್ಲ ಉದ್ಯೆಮಿದಾರರ ಬಗ್ಗೆ ಮಾಹಿತಿ ಒದಗಿಸುವ ಆ್ಯಪ್ ಸ್ಥಾಪನೆಗೆ ಒತ್ತಾಯಿಸಿದರು. ಪಿಪಿಪಿ ಮಾದರಿಯಲ್ಲಿ ಕನಿಷ್ಟ ನಾಲ್ಕು ಯೂನಿಫಾರಂ ಉದ್ಯಮಗಳ ಘಟಕ ಸ್ಥಾಪನೆ ಮಾಡುವಂತೆಯೂ ಕೂಡಾ ಮನವಿ ಮಾಡಿದರು.
ನಗರದ ಎಲ್ಲ ಅಸೋಸಿಯೇಷನ್ ಗಳ ಪ್ರತಿನಿಧಿಗಳೊಂದಿಗೆ ಮೇ ತಿಂಗಳಲ್ಲಿ ಸಭೆ ನಡೆಸುವ ಉದ್ದೇಶ ಹೊಂದಿದ್ದು, ನಿಮ್ಮ ಸಮಸ್ಯೆಗಳ ಬಗ್ಗೆ ಸಮಗ್ರ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು. ನಮ್ಮ ಚರ್ಚೆಯ ಮೂಲಕ ಸಮಸ್ಯೆಗಳ ಪರಿಹಾರ ಕಂಡುಕೊಳ್ಳಲು ಸಲಹೆ ನೀಡಿ ಎಂದು ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಪುನರುಚ್ಚರಿಸಿದರು.












Click it and Unblock the Notifications