ಕೆಲವು ರೈಲುಗಳ ಮಾರ್ಗ ಬದಲಾವಣೆ, ಪಟ್ಟಿ ನೋಡಿ
ಬೆಂಗಳೂರು, ಜುಲೈ 09; ಜೋಡಿ ಮಾರ್ಗದ ಕಾಮಗಾರಿಯ ಕಾರಣಕ್ಕಾಗಿ ಕೆಲವು ರೈಲುಗಳ ಮಾರ್ಗ ಬದಲಾವಣೆ ಮತ್ತು ಮಾರ್ಗ ಮಧ್ಯ ನಿಯಂತ್ರಿಸಲು ಕೇಂದ್ರ ರೈಲ್ವೆ ವಲಯವು ಸೂಚನೆ ನೀಡಿದೆ. ಜುಲೈ 7 ರಿಂದ 10ರ ತನಕ ರೈಲುಗಳಲ್ಲಿ ಸಂಚಾರ ನಡೆಸುವ ಪ್ರಯಾಣಿಕರು ಈ ಬಗ್ಗೆ ಮಾಹಿತಿ ತಿಳಿದಿರುವುದು ಒಳಿತು.
ನಾಂದ್ರೆ ಮತ್ತು ಸಾಂಗ್ಲಿ ನಿಲ್ದಾಣಗಳ ನಡುವಿನ ಜೋಡಿ ಮಾರ್ಗದ ಕಾಮಗಾರಿಯ ಸಲುವಾಗಿ ಈ ಕೆಳಗಿನ ಕೆಲವು ರೈಲುಗಳ ಮಾರ್ಗ ಬದಲಾವಣೆ ಮತ್ತು ಮಾರ್ಗ ಮಧ್ಯ ನಿಯಂತ್ರಿಸಲು ಸೂಚನೆ ನೀಡಲಾಗಿದೆ. ಈ ಕುರಿತು ಪ್ರಕಟಣೆ ಮೂಲಕ ಮಾಹಿತಿ ನೀಡಲಾಗಿದೆ.

ಎಸ್‌ಎಸ್‌ಎಸ್ ಹುಬ್ಬಳ್ಳಿ, ಕೆಎಸ್ಆರ್ ಬೆಂಗಳೂರು ಹೀಗೆ ರಾಜ್ಯದ ವಿವಿಧ ನಿಲ್ದಾಣಗಳಿಂದ ಸಂಚಾರ ನಡೆಸುವ ರೈಲುಗಳಿಗೆ ಇದು ಅನ್ವಯವಾಗುತ್ತದೆ. ಮಾರ್ಗ ಬದಲಾವಣೆ ಮತ್ತು ಮಾರ್ಗ ಮಧ್ಯ ನಿಯಂತ್ರಣದ ಮಾಹಿತಿ ಇಲ್ಲಿದೆ.
ರೈಲುಗಳ ಮಾರ್ಗ ಬದಲಾವಣೆ
* ಜುಲೈ 10 ರಂದು ಹುಬ್ಬಳ್ಳಿ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 17317 ಎಸ್. ಎಸ್. ಎಸ್. ಹುಬ್ಬಳ್ಳಿ - ದಾದರ್ ಎಕ್ಸ್‌ಪ್ರೆಸ್ ರೈಲು ಮಿರಾಜ್, ಕುರ್ದವಾಡಿ ಮತ್ತು ದೌಂಡ್ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಹೀಗಾಗಿ ಸಾಂಗ್ಲಿ ಮತ್ತು ಕರಾಡ್ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.
* ಜುಲೈ 9 ರಂದು ದಾದರ್ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 17318 ದಾದರ್ - ಎಸ್. ಎಸ್. ಎಸ್. ಹುಬ್ಬಳ್ಳಿ ಎಕ್ಸ್‌ಪ್ರೆಸ್ ರೈಲು ದೌಂಡ್, ಕುರ್ದವಾಡಿ ಮತ್ತು ಮಿರಾಜ್ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಹೀಗಾಗಿ ಕರಾಡ್ ಮತ್ತು ಸಾಂಗ್ಲಿ ನಿಲ್ದಾಣಗಳಲ್ಲಿ ನಿಲುಗಡೆ ಇಲ್ಲ.
* ಜುಲೈ 9 ರಂದು ಅಜ್ಮೀರ್ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 16209 ಅಜ್ಮೀರ್ - ಮೈಸೂರು ಎಕ್ಸ್‌ಪ್ರೆಸ್ ರೈಲು ದೌಂಡ್, ಕುರ್ದವಾಡಿ ಮತ್ತು ಮಿರಾಜ್ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಹೀಗಾಗಿ ಸತಾರಾ, ಕರಾಡ್ ಮತ್ತು ಸಾಂಗ್ಲಿ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.
* ಜುಲೈ 9 ರಂದು ಕೆಎಸ್‌ಆರ್ ಬೆಂಗಳೂರು ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 16534 ಕೆಎಸ್ಆರ್ ಬೆಂಗಳೂರು - ಜೋಧಪುರ ಎಕ್ಸ್‌ಪ್ರೆಸ್ ರೈಲು ಮಿರಾಜ್, ಕುರ್ದವಾಡಿ ಮತ್ತು ದೌಂಡ್ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಹೀಗಾಗಿ ಸಾಂಗ್ಲಿ ಮತ್ತು ಸತಾರಾ ನಿಲ್ದಾಣಗಳಲ್ಲಿ ನಿಲುಗಡೆ ಇಲ್ಲ.
* ಜುಲೈ 9 ರಂದು ಪುದಚೇರಿ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 11006 ಪುದಚೇರಿ-ದಾದರ್ ಎಕ್ಸ್‌ಪ್ರೆಸ್ ರೈಲು ಮಿರಾಜ್, ಕುರ್ದವಾಡಿ ಮತ್ತು ದೌಂಡ್ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಹೀಗಾಗಿ ಸಾಂಗ್ಲಿ ಕರಾಡ್ ಮತ್ತು ಸತಾರಾ ನಿಲ್ದಾಣಗಳಲ್ಲಿ ನಿಲುಗಡೆ ಇಲ್ಲ.
* ಜುಲೈ 9 ರಂದು ದೆಹಲಿಯ ಹಜರತ್ ನಿಜಾಮುದ್ದಿನ್ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 12780 ಹಜರತ್ ನಿಜಾಮುದ್ದಿನ್ - ವಾಸ್ಕೋ-ಡ-ಗಾಮಾ ಗೋವಾ ಎಕ್ಸ್‌ಪ್ರೆಸ್ ರೈಲು ದೌಂಡ್, ಕುರ್ದವಾಡಿ ಮತ್ತು ಮಿರಾಜ್ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಹೀಗಾಗಿ ಸತಾರಾ, ಕರಾಡ್ ಮತ್ತು ಸಾಂಗ್ಲಿ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.
ಮಾರ್ಗ ಮಧ್ಯ ನಿಯಂತ್ರಣ
* ಜುಲೈ 7 ರಂದು ಕೆ.ಎಸ್.ಆರ್ ಬೆಂಗಳೂರು ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 16532 ಕೆ.ಎಸ್.ಆರ್ ಬೆಂಗಳೂರು - ಅಜ್ಮೀರ್ ಎಕ್ಸ್‌ಪ್ರೆಸ್ ರೈಲನ್ನು ಕೇಂದ್ರ ರೈಲ್ವೆ ವಲಯ ವ್ಯಾಪ್ತಿಯಲ್ಲಿ 1.40 ಗಂಟೆಗಳ ಕಾಲ ನಿಯಂತ್ರಿಸಲಾಗುತ್ತಿದೆ.
* ಜುಲೈ 8 ರಂದು ಕೆ. ಎಸ್. ಆರ್. ಬೆಂಗಳೂರು ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ. 16506 ಕೆ. ಎಸ್. ಆರ್. ಬೆಂಗಳೂರು - ಗಾಂಧಿಧಾಮ್ ಎಕ್ಸ್‌ಪ್ರೆಸ್ ರೈಲನ್ನು ಕೇಂದ್ರ ರೈಲ್ವೆ ವಲಯ ವ್ಯಾಪ್ತಿಯಲ್ಲಿ 1.40 ಗಂಟೆಗಳ ಕಾಲ ನಿಯಂತ್ರಿಸಲಾಗುತ್ತಿದೆ.
* ಜುಲೈ 10 ರಂದು ವಾಸೋ-ಡ-ಗಾಮಾ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 12779 ವಾಸ್ಕೊ-ಡ- ಗಾಮಾ - ಹಜರತ್ ನಿಜಾಮುದ್ದಿನ್ ಎಕ್ಸ್‌ಪ್ರೆಸ್ ರೈಲನ್ನು ಕೇಂದ್ರ ರೈಲ್ವೆ ವಲಯ ವ್ಯಾಪ್ತಿಯಲ್ಲಿ 45 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತಿದೆ.












Click it and Unblock the Notifications