ಸಚಿವ ಸ್ಥಾನ ಸಿಕ್ಕರೂ, ಖಾತೆ ಸಿಗದೆ ಅತಂತ್ರ ಸ್ಥಿತಿಯಲ್ಲಿ ಮಂತ್ರಿಗಳು!

ಬೆಂಗಳೂರು, ಜೂನ್ 22: ರಾಜ್ಯ ಸರ್ಕಾರದ ಇಬ್ಬರು ಸಚಿವರಿಗೆ ಬಹು ನಿರೀಕ್ಷಿತ ಮಂತ್ರಿ ಸ್ಥಾನವೇನೋ ಸಿಕ್ಕಿತು, ಅವರಿಗೆ ಕೂತ ವ್ಯವರಿಸಲು ಕಚೇರಿಯನ್ನು ಕೊಡಲಾಯಿತು ಆದರೆ ಖಾತೆಯನ್ನೇ ನೀಡಿಲ್ಲ.

ಪಕ್ಷೇತರ ಶಾಸಕರಾದ ಎಚ್.ನಾಗೇಶ್ ಮತ್ತು ಆರ್.ಶಂಕರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡು ಬರೋಬ್ಬರಿ ಎಂಟು ದಿನಗಳಾಗಿವೆ ಆದರೆ ಅವರಿಬ್ಬರಿಗೂ ಯಾವ ಖಾತೆ ನೀಡಬೇಕು ಎಂಬುದು ಇನ್ನೂ ಅಂತಿಮವಾಗಿಲ್ಲ.

ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯಕ್ಕೆ ತೆರಳುವ ಮುನ್ನಾ ಇಬ್ಬರೂ ಸಚಿವರಿಗೆ ಖಾತೆ ಹಂಚಿಕೆ ಮಾಡಿಯೇ ಹೋಗುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಕುಮಾರಸ್ವಾಮಿ ಅವರು ಯಾಕೋ ಆ ಬಗ್ಗೆ ಹೆಚ್ಚು ತಲೆಕೆಸಿಕೊಳ್ಳಲಿಲ್ಲ. ಅವರೊಬ್ಬರೇ ಅಲ್ಲ, ಸರ್ಕಾರದ ಅಥವಾ ಎರಡೂ ಪಕ್ಷದ ಮುಖಂಡರು ಯಾರೊಬ್ಬರೂ ಖಾತೆ ಹಂಚಿಕೆ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.

ಈ ಇಬ್ಬರಿಗೂ ಸಚಿವ ಸ್ಥಾನ ನೀಡಿದ್ದು, ಸರ್ಕಾರದ ಉಳಿವಿಗೆ ಅಷ್ಟೆ ಅದನ್ನು ಬಿಟ್ಟರೆ ಇನ್ನಾವ ಸದುದ್ದೇಶವೂ ಇರಲಿಲ್ಲವೆಂಬುದು ಖಾತೆ ಹಂಚಿಕೆಯಲ್ಲಿ ತೋರುತ್ತಿರುವ ನಿರ್ಲಕ್ಷ್ಯದಿಂದಲೇ ಗೊತ್ತಾಗುತ್ತಿದೆ. ಸರ್ಕಾರ ಹೇಗೋ ಉಳಿದಿದೆ, ಯಾರಿಗೆ ಯಾವ ಖಾತೆ ಕೊಟ್ಟರೇನು ಎಂಬ ಧೋರಣೆ ಜೆಡಿಎಸ್-ಕಾಂಗ್ರೆಸ್ ಮುಖಂಡರಲ್ಲಿ ಕಾಣುತ್ತಿದೆ.

ಶಿಕ್ಷಣ, ಪೌರಾಡಳಿತ ಖಾತೆ ಖಾಲಿ ಇದೆ

ಶಿಕ್ಷಣ, ಪೌರಾಡಳಿತ ಖಾತೆ ಖಾಲಿ ಇದೆ

ಪ್ರಸ್ತುತ ಶಿಕ್ಷಣ ಖಾತೆ, ಪೌರಾಡಳಿತ ಖಾತೆ ಖಾಲಿ ಇದೆ. ಇದರ ಜೊತೆಗೆ ಸಿಎಂ ಅವರ ಬಳಿ ಕೆಲವು ಖಾತೆಗಳಿವೆ, ಎಚ್‌ಡಿ ರೇವಣ್ಣ, ಡಿಕೆ ಶಿವಕುಮಾರ್ ಎರೆರಡು ಖಾತೆಗಳನ್ನು ನಿಭಾಯಿಸುತ್ತಿದ್ದಾರೆ. ಹಾಗಾಗಿ ಈ ಇಬ್ಬರಿಗೆ ಯಾವ ಖಾತೆ ನೀಡುತ್ತಾರೆಂಬ ಕುತೂಹಲ ಇದೆ.

ಬದಲಾವಣೆ ಮಾಡುವ ಚಿಂತನೆ ನಡೆದಿದೆ?

ಬದಲಾವಣೆ ಮಾಡುವ ಚಿಂತನೆ ನಡೆದಿದೆ?

ಮೂಲದ ಪ್ರಕಾರ ಶಿಕ್ಷಣ ಖಾತೆಗಾಗಿ ಇಬ್ಬರೂ ಪಕ್ಷೇತರರು ಪಟ್ಟು ಹಿಡಿದಿದ್ದಾರೆ ಎನ್ನಲಾಗುತ್ತಿದೆ. ಅಷ್ಟು ಮಾತ್ರವಲ್ಲದೆ, ಶಿಕ್ಷಣ ಖಾತೆಯನ್ನು ಅನುಭವ ಹೊಂದಿದ ಸಚಿವರಿಗೆ ನೀಡಿ ಅವರ ಖಾತೆಯನ್ನು ಹೊಸದಾಗಿ ಸಂಪುಟ ಸೇರಿರುವ ಸಚಿವರಿಗೆ ನೀಡಬೇಕೆನ್ನುವ ಲೆಕ್ಕಾಚಾರವೂ ನಡೆದಿದೆ ಎನ್ನಲಾಗುತ್ತಿದೆ.

ಜೂನ್ 14 ರಂದು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿತ್ತು

ಜೂನ್ 14 ರಂದು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿತ್ತು

ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕರಾಗಿದ್ದ ಎಚ್.ನಾಗೇಶ್ ಹಾಗೂ ಕೆಪಿಜೆಪಿ ಪಕ್ಷದಿಂದ ಆಯ್ಕೆ ಆಗಿದ್ದ ರಾಣೆಬೆನ್ನೂರು ಕ್ಷೇತ್ರದ ಆರ್.ಶಂಕರ್ ಅವರನ್ನು ಜೂನ್ 14 ರಂದು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿತ್ತು. ಆದರೆ ಅಂದಿನಿಂದ ಈವರೆಗೂ ಇವರಿಗೆ ಖಾತೆ ಹಂಚಿಕೆ ಮಾಡಲಾಗಿಲ್ಲ.

ಅರಣ್ಯ ಇಲಾಖೆ ಕೇಳುತ್ತಿರುವ ಶಂಕರ್?

ಅರಣ್ಯ ಇಲಾಖೆ ಕೇಳುತ್ತಿರುವ ಶಂಕರ್?

ನಾಗೇಶ್ ಅವರಿಗೆ ಡಿ.ಕೆ.ಶಿವಕುಮಾರ್ ಅವರ ಬಳಿ ಇರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಡಬೇಕು ಎಂಬ ಚರ್ಚೆ ನಡೆದಿದೆ. ಆದರೆ ನಾಗೇಶ್ ಅವರು ಶಿಕ್ಷಣ ಇಲಾಖೆಗೆ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಶಂಕರ್ ಅವರು ಈ ಹಿಂದೆ ನಿಭಾಯಿಸಿದ್ದ ಅರಣ್ಯ ಇಲಾಖೆಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಆದರೆ ಆ ಖಾತೆ ಈಗ ಸತೀಶ್ ಜಾರಕಿಹೊಳಿ ಬಳಿ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+