7ನೇ ತರಗತಿ ತನಕ ಆನ್‌ಲೈನ್ ಕ್ಲಾಸ್ ಇಲ್ಲ

ಬೆಂಗಳೂರು, ಜೂನ್ 11 : ಲಾಕ್ ಡೌನ್ ಪರಿಣಾಮ ಶಾಲೆಗಳು ಬಾಗಿಲು ಮುಚ್ಚಿವೆ. ವಿವಿಧ ಶಾಲೆಗಳು ಆನ್‌ಲೈನ್ ತರಗತಿ ಮಾಡುವುದಾಗಿ ಹೇಳುತ್ತಿವೆ. ಕರ್ನಾಟಕ ಸರ್ಕಾರ 7ನೇ ತರಗತಿ ತನಕ ಆನ್‌ಲೈನ್ ತರಗತಿ ಮಾಡುವಂತಿಲ್ಲ ಎಂದು ಆದೇಶ ಹೊರಡಿಸಿದೆ.

Recommended Video

      No more online classes and school fees shouldn't be increased - Suresh Kumar

      ಗುರುವಾರ ಕರ್ನಾಟಕ ಸರ್ಕಾರ 7ನೇ ತರಗತಿ ವಿದ್ಯಾರ್ಥಿಗಳಿಗೂ ಆನ್‌ಲೈನ್ ತರಗತಿ ಮಾಡುವುದು ಬೇಡ ಎಂದು ಆದೇಶ ಹೊರಡಿಸಿದೆ. ಮೊದಲು 1 ರಿಂದ 5ನೇ ತರಗತಿ ತನಕ ಆನ್‌ಲೈನ್ ತರಗತಿ ಬೇಡ ಎಂದು ಸರ್ಕಾರ ಹೇಳಿತ್ತು.

       No Online Classes Till 7th Standard In Karnataka

      1 ರಿಂದ 5 ನೇ ತರಗತಿ ತನಕ ಆನ್‌ಲೈನ್ ತರಗತಿ ಬೇಡ ಎಂಬ ತೀರ್ಮಾನವನ್ನು ಸರ್ಕಾರ 7ನೇ ತರಗತಿ ವಿದ್ಯಾರ್ಥಿಗಳಿಗೂ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಆನ್‌ಲೈನ್ ತರಗತಿ ನಡೆಸುವ ಕುರಿತು ರಾಜ್ಯದಲ್ಲಿ ಭಾರಿ ಚರ್ಚೆ ನಡೆದಿತ್ತು.

      "ಎಲ್‌ಕೆಜಿ, ಯುಕೆಜಿ, ಪ್ರಾಥಮಿಕ ಶಾಲೆಯ ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ನಡೆಸುವುದು ಕಷ್ಟ. ಆದ್ದರಿಂದ ಪ್ರಾಥಮಿಕ ತರಗತಿಯವರೆಗೆ ಆನ್ ಲೈನ್ ಕ್ಲಾಸ್ ನಡೆಸುವುದನ್ನು ನಿಲ್ಲಿಸಬೇಕು" ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದರು.

      "ಆನ್‌ಲೈನ್ ತರಗತಿಗಳನ್ನು ನಡೆಸುವುದಾಗಿ ಫೀಸ್ ತೆಗೆದುಕೊಳ್ಳುವುದನ್ನು ತಕ್ಷಣವೇ ನಿಲ್ಲಿಸಿಬೇಕು. ಈ ಸಂಕಷ್ಟದ ಸಮಯದಲ್ಲಿ ಯಾವುದೇ ಶಿಕ್ಷಣ ಸಂಸ್ಥೆಗಳು ಶಾಲಾ ಶುಲ್ಕ ಏರಿಕೆ ಮಾಡಬಾರದು" ಎಂದು ಸಚಿವರು ಸೂಚನೆ ಕೊಟ್ಟಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+