ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏನೀ ಅನ್ಯಾಯ, ಕೇಂದ್ರದ ಕಾವೇರಿ ನೀರು ನಿಯಂತ್ರಣ ಸಮಿತಿಯಲ್ಲಿ ಕನ್ನಡಿಗರೇ ಇಲ್ಲ

By Manjunatha
|
Google Oneindia Kannada News

Recommended Video

ಕೇಂದ್ರದ ಕಾವೇರಿ ನೀರು ನಿಯಂತ್ರಣ ಸಮಿತಿಯಲ್ಲಿ ಕನ್ನಡಿಗರಿಗೆ ಸ್ಥಾನ ಇಲ್ಲಾ

ನವ ದೆಹಲಿ, ಜೂನ್ 23: ನ್ಯಾಯಾಲಯದ ಸೂಚನೆಯಂತೆ ಕೇಂದ್ರ ಸರ್ಕಾರ ರಚಿಸಿರುವ ಕಾವೇರಿ ನೀರು ನಿಯಂತ್ರಣ ಸಮಿತಿಯಲ್ಲಿ ಕರ್ನಾಟಕದ ಸದ್ಯರಿಗೆ ಸ್ಥಾನವೇ ಇಲ್ಲ.

ತಮಿಳುನಾಡು, ಕೇರಳ, ಪುದುಚೆರಿಯ ನೀರಾವರಿ ಮುಖ್ಯ ಎಂಜಿನಿಯರ್‌ಗಳು, ಹವಾಮಾನ ಇಲಾಖೆ ವಿಜ್ಞಾನಿಗಳು, ತೋಟಗಾರಿಗೆ ಆಯುಕ್ತರು, ಕೇಂದ್ರ ಜಲ ಆಯೋಗದ ಎಂಜಿನಿಯರ್ ಇನ್ನೂ ಕೆಲವರು ಕಾವೇರಿ ನೀರು ನಿಯಂತ್ರಣ ಸಮಿತಿಯಲ್ಲಿದ್ದಾರೆ.

ಕುಮಾರಸ್ವಾಮಿ ಅಥವಾ ನಾರಾಯಣಸ್ವಾಮಿ; ಯಾವ ಸ್ವಾಮಿಯಾದರೂ ಅಷ್ಟೇ!ಕುಮಾರಸ್ವಾಮಿ ಅಥವಾ ನಾರಾಯಣಸ್ವಾಮಿ; ಯಾವ ಸ್ವಾಮಿಯಾದರೂ ಅಷ್ಟೇ!

ಕರ್ನಾಟಕವು ಸಮಿತಿಗೆ ಸೇರಿಸಲಿಚ್ಛಿಸುವ ಕರ್ನಾಟಕದ ಪ್ರತಿನಿಧಿಯ ಹೆಸರು ಕಳಿಸಿಲ್ಲ ಎಂದು ಒಂದು ಸಾಲಿನ ಷರಾ ಬರೆದು ಸಮಿತಿಯ ರಚನೆ ಆದೇಶವನ್ನು ಕೇಂದ್ರವು ರಾಜ್ಯಕ್ಕೆ ರವಾನಿಸಿದೆ. ಈ ಸಮಿತಿಯು ಕಾವೇರಿ ನಿರ್ವಹಣಾ ಪ್ರಾಧಿಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.

No Kannadiga in centrals Cauvery Water Control Committee

ಕಾವೇರಿ ನೀರು ನಿರ್ವಹಣಾ ಮಂಡಳಿಯಲ್ಲಿ ಕರ್ನಾಟಕದ ಹಿತಕ್ಕೆ ಅಡ್ಡಿಯಾಗುವ ಅಂಶಗಳನ್ನು ತೆಗೆದುಹಾಕುವ ಭರವಸೆ ನೀಡುವವರೆಗೆ ಸಮಿತಿಗೆ ಹೆಸರು ಸೂಚಿಸುವುದಿಲ್ಲ ಎಂಬ ನಿಲವನ್ನು ರಾಜ್ಯ ಸರ್ಕಾರ ತೆಗೆದುಕೊಂಡಿತ್ತು. ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಆದಾಗಲೂ ಕುಮಾರಸ್ವಾಮಿ ಇದನ್ನು ಸ್ಪಷ್ಟಪಡಿಸಿದ್ದರು.

ಮಳೆ ಚೆನ್ನಾಗಿ ಆಗಿರುವ ಕಾರಣ, ಕಾವೇರಿ ನೀರು ನಿಯಂತ್ರಣ ಸಮಿತಿಯಾಗಲಿ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವಾಗಲಿ ತುರ್ತು ಸಭೆ ಕರೆಯುವಂತಹಾ ಪರಿಸ್ಥಿತಿ ತಮಿಳುನಾಡಿನಲ್ಲಿ ಇಲ್ಲ ಹಾಗಾಗಿ ಕರ್ನಾಟಕದ ಆತಂಕಕಗಳನ್ನು ನಿವಾರಿಸಿದ ನಂತರವೇ ಸಮಿತಿಯು ಸಭೆ ನಡೆಸಬೇಕು ಎಂದು ರಾಜ್ಯ ಒತ್ತಾಯಿಸಿದೆ.

English summary
No Karnataka representative in central governments Cauvery water control committee. Karnataka opposes the Cauvery distrubution board formation so it did not send any names to central.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X