BPL Card: ಕೊನೆಗೂ ಡಬಲ್ ಗುಡ್ ನ್ಯೂಸ್ ಕೊಟ್ಟ ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ‌

ಬೆಂಗಳೂರು, ಸೆಪ್ಟೆಂಬರ್‌ 17: ರಾಜ್ಯದಲ್ಲಿ ಬಿಪಿಎಲ್ ಕಾರ್ಡ್‌ಗಳ ಪರಿಷ್ಕರಣೆ ಮತ್ತು ರದ್ದು ವಿಚಾರ ಮತ್ತೆ ಸದ್ದು ಮಾಡುತ್ತಿದೆ. ಈ ಬಗ್ಗೆ ಈಗಾಗಲೇ ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆಗೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಕೆ ಎಚ್ ಮುನಿಯಪ್ಪ ಸಭೆ ನಡೆಸಿದ್ದು, ಇದೀಗ ಮಹತ್ವ ಮಾಹಿತಿಯನ್ನ ಹಂಚಿಕೊಂಡಿದ್ದಾರೆ. ಬಿಪಿಎಲ್‌ ಕಾರ್ಡ್‌ಗಳ ಪರಿಷ್ಕರಣೆ ಮಾಡೋದು ಅನಿವಾರ್ಯ ಎಂದು ಹೇಳಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಬುಧವಾರ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಅವರು, ಬಿಪಿಎಲ್‌ ಕಾರ್ಡ್‌ಗಳನ್ನು ಪರಿಷ್ಕರಣೆ ಮಾಡುವುದು ಅನಿವಾರ್ಯವಾಗಿದೆ ಇಲಾಖೆ ಈ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳುವ ಸೂಚನೆಯನ್ನು ನೀಡಿದ್ದಾರೆ. ದೇಶದ ಬಿಪಿಎಲ್‌ ಕಾರ್ಡ್ ಗಳ ಪೈಕಿ 75% ಬಿಪಿಎಲ್‌ ಕಾರ್ಡ್‌ಗಳು ಕರ್ನಾಟಕದಲ್ಲಿ ಇದೆ ಎಂದಿರುವ ಅವರು, ಒಂದು ವೇಳೆ ಪರಿಷ್ಕರಣೆಯ ಸಂದರ್ಭದಲ್ಲಿ ಅನರ್ಹರು ಕಂಡು ಬಂದ್ರೆ ಕಾರ್ಡ್ ರದ್ದು ಮಾಡುವುದಿಲ್ಲ, ಬದಲಾಗಿ ಎಪಿಎಲ್ ಗೆ ಸೇರ್ಪಡೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

No Ineligible BPL Ration Card Will Be Cancelled In The State Minister KH Muniyappa

ರಾಜ್ಯದಲ್ಲಿ ಯಾವುದೇ ಅನರ್ಹ ಬಿಪಿಎಲ್ ಕಾರ್ಡ್ಗಳನ್ನ ರದ್ದು ಮಾಡಲ್ಲ, ಎಲ್ಲವನ್ನು ಪರಿಷ್ಕರಣೆ ಮಾಡುತ್ತೇವೆ ಎಂದು ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಸ್ಪಷ್ಟನೆ ನೀಡಿದ್ದಾರೆ. ಅನರ್ಹ ಬಿಪಿಎಲ್ನಲ್ಲಿರುವ ಅನರ್ಹರನ್ನು ನಿಯಮಗಳ ಪ್ರಕಾರ ಪರಿಷ್ಕರಣೆ ಮಾಡಿ, ಎಪಿಎಲ್ಗೆ ವರ್ಗಾವಣೆ ಮಾಡುತ್ತೇವೆ. ಯಾವ ಕಾರ್ಡನ್ನು ರದ್ದು ಮಾಡಲ್ಲ ಎಂದು ಹೇಳಿದರು.

ರಾಜ್ಯದಲ್ಲಿರುವ ಎಲ್ಲಾ ಕಾರ್ಡ್ಗಳನ್ನು ಪರಿಷ್ಕರಣೆ ಮಾಡುತ್ತೇವೆ. ವರ್ಗಾವಣೆ ಸಂದರ್ಭದಲ್ಲಿ ಏನಾದರೂ ಸಣ್ಣಪುಟ್ಟ ಸಮಸ್ಯೆಯಾದರೆ 24 ಗಂಟೆಯೊಳಗೆ ಅದನ್ನು ಸರಿಪಡಿಸಿ ಆಹಾರ ಧಾನ್ಯ ಕೊಡುವ ಕೆಲಸ ಮಾಡುತ್ತೇವೆ. ದಕ್ಷಿಣ ಭಾರತದಲ್ಲಿ ಬಿಪಿಎಲ್ ಕಾರ್ಡ್‌ಗಳು ಕರ್ನಾಟಕದಲ್ಲೇ ಹೆಚ್ಚು. 75% ಬಿಪಿಎಲ್‌ ಕಾರ್ಡ್‌ಗಳು ಕರ್ನಾಟಕದಲ್ಲಿ ಇದೆ. ಅನರ್ಹರು ಕಂಡು ಬಂದ್ರೆ ಕಾರ್ಡ್ ರದ್ದು ಮಾಡಲ್ಲ. ಅವರನ್ನ ಎಪಿಎಲ್‌ ಕಾರ್ಡ್‌ಗೆ ಸೇರಿಸಲಾಗುತ್ತದೆ ಎಂದರು.

ಬಿಪಿಎಲ್‌ ಕಾರ್ಡ್‌ಗಳ ಪರಿಷ್ಕರಣೆ ಮಾಡೋದು ಅನಿವಾರ್ಯ ಎಂದಿರುವ ಸಚಿವರು, ಅನರ್ಹರು ಕಂಡು ಬಂದರೆ ಕಾರ್ಡ್ ರದ್ದು ಮಾಡಲ್ಲ. ಆದರೆ ಅವರನ್ನ ಎಪಿಎಲ್‌ ಕಾರ್ಡ್‌ಗೆ ಸೇರಿಸಲಾಗುತ್ತದೆ. ಅಪ್ಪಿತಪ್ಪಿ ಅರ್ಹರು ಎಪಿಎಲ್‌ ಹೋದರೆ 24 ಗಂಟೆಯೊಳಗೆ ಅರ್ಜಿ ಹಾಕಿದರೆ ಪಡಿತರ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದರು. ಇನ್ನೂ ಹೊಸದಾಗಿ ಬಿಪಿಎಲ್ ಕಾರ್ಡ್ ಮಾಡಿಸಿಕೊಳ್ಳಲು ಕಳೆದ ಹಲವು ವರ್ಷಗಳಿಂದ ಕಾಯುತ್ತಿರುವ ಜನರಿಗೂ ಗುಡ್ ನ್ಯೂಸ್ ನೀಡಿರುವ ಸಚಿವ ಮುನಿಯಪ್ಪ, ಮುಂದಿನ ತಿಂಗಳು ಬಿಪಿಎಲ್‌ ಕಾರ್ಡ್‌ಗಳಿಗೆ ಅರ್ಜಿ ಆಹ್ವಾನ ಮಾಡ್ತೇವೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಅಕ್ರಮವಾಗಿ ಪಡೆದಿರುವ ಪಡಿತರ ಚೀಟಿಗಳನ್ನು ರದ್ದು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ. ಈಗಾಗಲೇ ಅನುಮಾನಸ್ಪಾದವಾಗಿ ಕಂಡು ಬಂದಿರುವ ಪಡಿತರ ಚೀಟಿಗಳನ್ನು ಪಟ್ಟಿ ಮಾಡಲಾಗಿದ್ದು, ಈ ಪಟ್ಟಿಯನ್ನು ಆಯಾ ನ್ಯಾಯಬೆಲೆ ಅಂಗಡಿಗಳ ಎದುರು ಪ್ರದರ್ಶನ ಮಾಡಲಾಗಿದೆ. ಆ ಪಡಿತರ ಕಾರ್ಡ್ ದಾರರು ಪಡಿತರ ಪಡೆದುಕೊಳ್ಳಲು ಆಗಮಿಸಿದ ಮೇಲೆ ನ್ಯಾಯ ಬೆಲೆ ಅಂಗಡಿ ಮಾಲೀಕರು ಆಹಾರ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಾರೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+