• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎರಡನೇ ಶನಿವಾರ ರಜೆ ಬಗ್ಗೆ ಸ್ಪಷ್ಟನೆ ನೀಡಿದ ರಾಜ್ಯ ಸರ್ಕಾರ

|

ಬೆಂಗಳೂರು, ಅಕ್ಟೋಬರ್ 11: ಎರಡನೇ ಶನಿವಾರ (ಅಕ್ಟೋಬರ್‌ 13) ದಂದು ಮಾಮೂಲಿನಂತೆ ಸರ್ಕಾರಿ ರಜೆ ಇದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಎರಡನೇ ಶನಿವಾರ (ಅಕ್ಟೋಬರ್‌ 13) ಇದ್ದ ರಜೆಯನ್ನು ರದ್ದು ಪಡಿಸಿ ಮೂರನೇ ಶನಿವಾರಕ್ಕೆ (ಅಕ್ಟೋಬರ್‌ 20) ರಂದು ರಜೆ ನೀಡಿ ದಸರಾ ರಜೆ ಸತತವಾಗಿ ನಾಲ್ಕು ದಿನ ದೊರಕುವಂತೆ ಮಾಡಲಾಗಿದೆ ಎಂದು ಕೆಲವು ಮಾಧ್ಯಮಗಳಲ್ಲಿ ಸುದ್ದಿ ಹರಿದಾಡಿತ್ತು ಹಾಗಾಗಿ ಸರ್ಕಾರ ಈ ಸ್ಪಷ್ಟನೆ ನೀಡದೆ.

ಅಬ್ಬಬ್ಬಾ.. ಅಕ್ಟೋಬರ್ ತಿಂಗಳಲ್ಲಿ ಒಟ್ಟು ಹನ್ನೊಂದು ದಿನ ರಜೆ

ಗುರುವಾರ (ಅ 18) ಆಯುಧಪೂಜೆ, ಶುಕ್ರವಾರ (ಅ 19) ವಿಜಯದಶಮಿಗೆ ಸರ್ಕಾರಿ ರಜೆ ಇದೆ ಹಾಗಾಗಿ ಶನಿವಾರ (ಅ 20) ರಜೆ ನೀಡಿದರೆ ಮರುದಿನ ಭಾನುವಾರ (ಅ 21) ಸೇರಿ ಒಟ್ಟು ನಾಲ್ಕು ದಿನಗಳ ಸಾಲುಸಾಲು ರಜೆ ಆಗುತ್ತದೆ ಹಾಗಾಗಿ ಸರ್ಕಾರ ಈ ನಿರ್ಣಯ ಕೈಗೊಂಡಿದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿ ಆಗಿತ್ತು.

ಸರಕಾರೀ ನೌಕರರಿಗೆ ಹೀಗೂ ಮಾಡಬಹುದು ಎಂದು ತೋರಿಸಿಕೊಟ್ಟ ಎಚ್ಡಿಕೆ

ಆದರೆ ಇದೀಗ ಸರ್ಕಾರವು ಮೂರನೇ ಶನಿವಾರ ರಜೆ ಇಲ್ಲವೆಂದು ಸ್ಪಷ್ಟನೆ ನೀಡಿರುವ ಕಾರಣ ಸರ್ಕಾರಿ ನೌಕರರು ನಿರಾಸೆ ಅನುಭವಿಸುವಂತಾಗಿದೆ. ಸರ್ಕಾರ ರಜೆ ನೀಡದಿದ್ದರೂ ಸಹ ರಜೆ ಹೆಚ್ಚಿನ ಜನ ರಜೆ ತೆಗೆದುಕೊಳ್ಳುತ್ತಾರೆ.

English summary
No holiday on 3rd holiday this month government gives clarification. News spread that government canceling 2nd Saturday holiday and giving it on 3rd Saturday. So government gives clarification.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X