Govt Schools: ಸರ್ಕಾರಿ ಶಾಲಾ ಮಕ್ಕಳ ಬಗ್ಗೆ ಕರ್ನಾಟಕ ಸರ್ಕಾರಕ್ಕೆ ತಾತ್ಸಾರ: ವಿಪಕ್ಷ ಕಿಡಿ
ಬೆಂಗಳೂರು, ಜೂನ್ 18: ಕರ್ನಾಟಕ ರಾಜ್ಯಾದ್ಯಂತ ಮೇ ತಿಂಗಳಾಂತ್ಯಕ್ಕೆ ಶಾಲೆಗಳು ಆರಂಭವಾಗಿದ್ದು, ಪ್ರಸಕ್ತ ಸಾಲಿನ (2025-26) ಶೈಕ್ಷಣಿಕ ಚಟುವಟಿಕೆಗಳು ಗರಿಗೆದರಿವೆ. ಮಕ್ಕಳು ಹೊಸ ಸಮವಸ್ತ್ರದೊಂದಿಗೆ ಸರ್ಕಾರಿ ಶಾಲೆಗಳಿಗೆ ಆಗಮಿಸುತ್ತಿದ್ದಾರೆ. ಆದರೆ ಅವರಿಗೆ ಶೂ, ಸಾಕ್ಸ್‌ಗಳು ಮಿಸ್ ಆಗಿವೆ. ಇದರ ವಿರುದ್ಧ ವಿಪಕ್ಷ ಹಾಗೂ ವಿಪಕ್ಷ ನಾಯಕರು ಕಿಡಿ ಕಾರಿದ್ದಾರೆ. ರಾಜ್ಯ ಸರ್ಕಾರಕ್ಕೆ ಶಿಕ್ಷಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಕೆ ಆದರೂ ಸಹಿತ ಹಣ ಬಿಡುಗಡೆ ಮಾಡದೇ ಉದ್ಧಟತನ ಪ್ರದರ್ಶಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ರಾಜ್ಯ ಬಿಜೆಪಿಯು, ಕರ್ನಾಟಕದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ. ಭ್ರಷ್ಟ ಕಾಂಗ್ರೆಸ್ ಆಡಳಿತವು ರಾಜ್ಯವನ್ನು ಕುಲಗೆಡಿಸಿ ಬಿಟ್ಟಿದೆ. ಶಾಲೆ ಆರಂಭವಾಗಿ 20 ದಿನ ಕಳೆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಶೂ, ಸಾಕ್ಸ್ ಖರೀದಿಗೆ ಹಣ ಬಿಡುಗಡೆ ಮಾಡಿಲ್ಲ ಎಂದು ದೂರಿದೆ.

ಶಿಕ್ಷಣ ಸಚಿವವರಾದ ಮಧು ಬಂಗಾರಪ್ಪ ಅವರೇ, ಸರ್ಕಾರಿ ಶಾಲೆಗಳಲ್ಲಿ ಓದುವವರನ್ನು ಏಕೆ ಇಷ್ಟೊಂದು ತಾತ್ಸಾರ ಮನೋಭಾವನೆಯಲ್ಲಿ ನೋಡುತ್ತೀರಿ. ಬಡವರ ಮಕ್ಕಳು ಹರಿದ ಶೂ ಧರಿಸಿ ಓಡಾಡು ವುದನ್ನು ನೋಡುವುದು ನಿಮಗೆ ಮನಸ್ಸಿಗೆ ಆನಂದ ತರುತ್ತದೆಯೇ? ಎಂದು ಪ್ರಶ್ನಿಸಿದೆ.
ಸಿಎಂ ಸಿದ್ದರಾಮಯ್ಯನವರೇ ಮಕ್ಕಳ ಕಲ್ಯಾಣ ಬಗ್ಗೆ ಯೋಚಿಸಿ..
ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಹ ಪ್ರತಿಕ್ರಿಯಿಸಿದ್ದಾರೆ. ರಾಜ್ಯದಲ್ಲಿ ಸರ್ಕಾರಿ ಶಾಲೆಗಳು ಪ್ರಾರಂಭವಾಗಿ 20 ದಿನಗಳಾದರೂ ಶಾಲಾ ಮಕ್ಕಳಿಗೆ ಬೇಕಾಗಿರುವ ಶೂ, ಸಾಕ್ಸ್ ಇನ್ನೂ ವಿತರಣೆಯಾಗಿಲ್ಲ. ಹಣಕಾಸು ಇಲಾಖೆಯಿಂದ ಅನುಮೋದನೆ ಸಿಗದೇ ಇರುವುದು ಇದಕ್ಕೆ ಕಾರಣವೆಂದು ಮಾಧ್ಯಮ ವರದಿ ಉಲ್ಲೇಖಿಸಿದ್ದಾರೆ. ಶೀಘ್ರವೇ ಶಿಕ್ಷಣ ಇಲಾಖೆ ಪ್ರಸ್ತಾವನೆಗೆ ತಕ್ಕಂತೆ ಅನುದಾನ ಬಿಡುಗಡೆಗೆ ಅವರು ಆಗ್ರಹಿಸಿದ್ದಾರೆ.
ರಾಜ್ಯ ವಿತ್ತ ಖಾತೆಯನ್ನು ನಿಭಾಯಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮಕ್ಕಳ ಕಲ್ಯಾಣದ ಬಗ್ಗೆ ಯೋಚಿಸಲು ಸಮಯವಿಲ್ಲ. ಶೈಕ್ಷಣಿಕ ವರ್ಷ ಮುಗಿಯುವ ಮುನ್ನ ಮಕ್ಕಳಿಗೆ ಬೇಕಾಗಿರುವ ಸಾಕ್ಸ್ ಅನ್ನು ವಿತರಿಸಲಿ ಎಂದು ಅವರು ಆಗ್ರಹಿಸಿದ್ದಾರೆ. ಈ ಮೂಲಕ ಬಿಜೆಪಿಯು ರಾಜ್ಯ ಸರ್ಕಾರಿ ಶಾಲೆಗಳ ಮಕ್ಕಳ ಪರ ಸರ್ಕಾರದ ವಿಳಂಬ ನೀತಿಯನ್ನು ಪ್ರಶ್ನಿಸಿದೆ.
ಶಾಲೆ ಆರಂಭವಾಗುತ್ತಿದ್ದಂತೆ ಶಿಕ್ಷಣ ಇಲಾಖೆ ಸರ್ಕಾರಿ ಶಾಲೆ ಮಕ್ಕಳಿಗೆ ಸಮವಸ್ತ್ರ ಹಾಗೂ ಪಠ್ಯಪುಸ್ತಕ ನೀಡಿದೆ. ಆದರೆ ಮೂರು ವಾರ ಕಳೆದರೂ ಸಹಿತ ಇನ್ನೂವರೆಗೂ ಶೂ, ಸಾಕ್ಸ್ ನೀಡಿಲ್ಲ. ಇದೆ ವಿಚಾರವಾಗಿ ಶಿಕ್ಷಣ ಇಲಾಖೆ ಸಲ್ಲಿಸಿದ ಪ್ರಸ್ತಾವನೆಗೆ ಸರ್ಕಾರ ಒಪ್ಪಿ ಅನುಮೋದನೆ ನೀಡಿದೆ. ಆದರೆ ಹಣಕಾಸು ಇಲಾಖೆಯಿಂದ ಅನುದಾನ ಬಿಡಗುಡೆ ಆಗಿಲ್ಲ. ಇದು ವಿಪಕ್ಷ ನಾಯಕ ಆಕ್ರೋಶಕ್ಕೆ ಕಾರಣವಾಗಿದೆ.












Click it and Unblock the Notifications