ಪ್ರಾಣಿ-ಮನುಷ್ಯ ಸಂಘರ್ಷ ತಡೆ ತಂತ್ರಜ್ಞಾನ ಅಳವಡಿಕೆಗೆ 'ಅನುದಾನ' ಕೊರತೆ ಇಲ್ಲ: ಈಶ್ವರ್ ಖಂಡ್ರೆ
ಬೆಂಗಳೂರು, ನವೆಂಬರ್ 10: ಮಂಡ್ಯ-ಮೈಸೂರು ಭಾಗ ಹಾಗೂ ಮಲೆನಾಡು ಸೇರಿದಂತೆ ಅರಣ್ಯಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಕಾಡುಪ್ರಾಣಿಗಳಿಂದ ಬೆಳೆ, ಜೀವ ಹಾನಿ ತಪ್ಪಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ತಂತ್ರಜ್ಞಾನ ಅಳವಡಿಕೆಗೆ ಮುಂದಾಗಿದೆ.
ಮನುಷ್ಯ-ಪ್ರಾಣಿ ಸಂಘರ್ಷವನ್ನು ನಿಭಾಯಿಸಲು ತಂತ್ರಜ್ಞಾನವನ್ನು ಅಳವಡಿಸಿ ಉತ್ತಮ ಕಾರ್ಯತಂತ್ರ ರೂಪಿಸಬೇಕು ಎಂದು ರಾಜ್ಯ ಅರಣ್ಯ ಮತ್ತು ಪರಿಸರ ಇಲಾಖೆ ಸಚಿವ ಈಶ್ವರ್ ಖಂಡ್ರೆ ಅವರು ಗುರುವಾರ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಕಟ್ಟುನಟ್ಟಿನ ಸೂಚನೆ ನೀಡಿದ್ದಾರೆ.

ಗುರುವಾರ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ ಈಶ್ವರ್ ಖಂಡ್ರೆ ಅವರು, ರಾಜ್ಯದ ಅರಣ್ಯ ಪ್ರದೇಶಗಳಲ್ಲಿರುವ ಬಫರ್ ಜೋನ್‌ಗಳಲ್ಲಿ ಕಾಡು ಪ್ರಾಣಿಗಳು ಮತ್ತು ಮನುಷ್ಯನ ನಡುವಿನ ಸಂಘರ್ಷ ತಪ್ಪಿಸಿಬೇಕು. ಅದಕ್ಕಾಗಿ ತಂತ್ರಜ್ಞಾನ ಅಳಡಿಕೆಗೆ ಕ್ರಿಯಾ ಯೋಜನೆ ರೂಪಿಸಲು ಅವರು ನಿರ್ದೇಶಿಸಿದರು.
ಅನುದಾನದ ಕೊರತೆ ಇಲ್ಲ
ಕಾಡು ಪ್ರಾಣಿ, ಜನರ ಸುರಕ್ಷತೆ ಕುರಿತು ಅಳವಡಿಸಿಕೊಳ್ಳಲು ನಿರ್ಧರಿಸಿರುವ ಈ ಯೋಜನೆಗಳಿಗೆ (ಐಟಿ ಪರಿಹಾರ) ಯಾವುದೇ ಅನುದಾನದ ಕೊರತೆ ಇಲ್ಲ. ಯೋಜನೆಗಳಿಗೆ ತಕ್ಕ ಧನಸಹಾಯ ಸರ್ಕಾರ ನೀಡಲಿದೆ ಎಂದು ಅವರು ಸ್ಪಷ್ಟಪಡಿಸಿದರು.

ನಿಗದಿತ ಕೆಲವು ಅರಣ್ಯ ಪ್ರದೇಶಗಳಲ್ಲಿ ವಲಯ ನೋಡಲ್ ಅಧಿಕಾರಿಗಳು ಆಗಿರುವ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ವಾರಕ್ಕೆ ಎರಡು ಭಾರಿಯಾದರೂ ಪ್ರಾಣಿ-ಮುನಷ್ಯ ಸಂಘರ್ಷ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಸಚಿವರು ಸೂಚಿಸಿದರು.
ಕಾಡು ಪ್ರಾಣಿಗಳು ಕಾಡಿಗೆ ಹತ್ತಿರವಿರುವ ಮಾನವನ ವಾಸಸ್ಥಳಗಳಿಗೆ ನುಗ್ಗುವುದನ್ನು ತಡೆದು ಪ್ರಾಣಿಗಳನ್ನು ರಕ್ಷಿಸಬೇಕು. ಈ ಜವಾಬ್ದಾರಿಯನ್ನು ನೋಡಲ್ ಅಧಿಕಾರಿಗಳು ವಹಿಸಿಕೊಳ್ಳಬೇಕು ಎಂದರು.
ಸಂಭವನೀಯ ಪರಿಸ್ಥಿತಿ ನಿರ್ವಹಿಸಲು ಚಿಂತನೆ
ರಾಜ್ಯದಲ್ಲಿ ಆನೆಗಳ ಸಂಖ್ಯೆ ಹೆಚ್ಚುತ್ತಿದೆ. ಇದು ಸಂತಸದ, ಹೆಮ್ಮೆಯ ವಿಷಯವೇ ಆದರೂ ಸಹಿತ ಭವಿಷ್ಯದಲ್ಲಿ ಎದುರಾಗಬಹುದಾದ ಸಂಭವನೀಯ ಪರಿಸ್ಥಿತಿಯಗಳನ್ನು ಎದುರಿಸಲು ಸಿದ್ಧರಾಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಿಯಾ ಯೋಜನೆ ರೂಪಿಸಬೇಕು ಎಂದು ಖಂಡ್ರೆಯವರು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಕರ್ನಾಟಕದಲ್ಲಿ ಹಾಲಿ 6,395 ಆನೆಗಳು ಇವೆ ಎಂಬುದು ಹೆಮ್ಮೆ ವಿಚಾರ.ಆದರೆ ಹೆಚ್ಚುತ್ತಿರುವ ಆನೆಗಳಿಂದ ಅದರ ಆವಾಸ ಸ್ಥಾನವು ಹೆಚ್ಚತ್ತದೆ ಎಂದರ್ಥವಲ್ಲ. ಅರಣ್ಯ ವ್ಯಾಪ್ತಿಯಲ್ಲಿ ಪರಿಸ್ಥಿತಿ ನಿರ್ವಹಣೆ ಕುರಿತು ಯೋಚಿಸುವ ಅಗತ್ಯತೆ ಇದೆ ಎಂದು ವಿವರಿಸಿದರು.












Click it and Unblock the Notifications