ಅಮಿತ್ ಶಾ ಮಠಕ್ಕೆ ಭೇಟಿ, ಬೇರೆ ಅರ್ಥ ಕಲ್ಪಿಸುವುದು ಬೇಡವೆಂದ ಶ್ರೀಗಳು

Posted By:
Subscribe to Oneindia Kannada

ಮಂಡ್ಯ, ಆಗಸ್ಟ್ 13 : ಕರ್ನಾಟಕದಲ್ಲಿ ಇನ್ನೇನು ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತಯೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ಭಾನುವಾರ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿರುವುದು ಹಲವು ಕುತೂಹಲಗಳಿಗೆ ಎಡೆಮಾಡಿಕೊಟ್ಟಿದೆ.

ನಿರ್ಮಲಾನಂದ ಶ್ರೀಗಳನ್ನು ಭೇಟಿಯಾದ ಅಮಿತ್ ಶಾ

ಈ ಕುರಿತು ಆದಿಚುಂಚನಗಿರಿ ಮಠದ ನಿರ್ಮಲಾನಂದ ಶ್ರೀಗಳು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, "ಮಠಕ್ಕೆ ಅಮಿತ್ ಶಾ ಏಕಾಏಕಿ ಭೇಟಿ ನೀಡಿಲ್ಲ. ಎರಡು ವರ್ಷಗಳ ಹಿಂದೆ ನಾವು ಭೇಟಿಗೆ ಮನವಿ ಮಾಡಿದ್ದೆವು. ಈ ಹಿನ್ನೆಲೆಯಲ್ಲಿ ಅವರು ಆದಿಚುಂಚನಗಿರಿ ಕ್ಷೇತ್ರಕ್ಕೆ ಬಂದಿದ್ದಾರೆ ಎಂದು ನಿರ್ಮಲಾನಂದ ಶ್ರೀಗಳು ತಿಳಿಸಿದ್ದಾರೆ".

ಚಿತ್ರಗಳು : ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕರ್ನಾಟಕ ಪ್ರವಾಸ

ಇದೇ ವೇಳೆ, ಆದಿಚುಂಚನಗಿರಿ ಮಠವು ರಾಜಕಾರಣ ಮಾಡುತ್ತಿಲ್ಲವೆಂದೂ ಶ್ರೀಗಳು ಸ್ಪಷ್ಟಪಡಿಸಿದ್ದಾರೆ. ಮಠವು ನಾಡಿಗೆ ಪ್ರಧಾನಿ, ಮುಖ್ಯಮಂತ್ರಿಗಳನ್ನು ಕೊಟ್ಟಿದೆ. ಕೆಂಗಲ್​ ಹನುಮಂತಯ್ಯನವರಂಥ ನಾಯಕರನ್ನು ತಯಾರು ಮಾಡಿದೆ.

ಕುತೂಹಲ ಕೆರಳಿಸಿದ ಅಮಿತ್ ಶಾ ಆದಿಚುಂಚನಗಿರಿ ಭೇಟಿ !

ಅನಂತಕುಮಾರ್, ಯಡಿಯೂರಪ್ಪನವರಿಗೆ ಮಠ ಆಶೀರ್ವಾದ ಮಾಡಿದೆ. ಇಂಥ ನಾಯಕರ ಮೂಲಕ ಸಮಾಜ ಕಟ್ಟುವ ಕೆಲಸ ಮಾಡುತ್ತದೆ ಹೊರತು ರಾಜಕಾರಣ ಮಾಡಲ್ಲ ಎಂದರು.

ಮಠಕ್ಕೆ ಬರುವಂತೆ ಮನವಿ

ಮಠಕ್ಕೆ ಬರುವಂತೆ ಮನವಿ

ಎರಡು ವರ್ಷಗಳ ಹಿಂದೆ ನಾವು ಭೇಟಿಗೆ ಮನವಿ ಮಾಡಿದ್ದೆವು. ಅದರಂತೆಯೇ ಭೈರವೈಕ್ಯ ಬಾಲಗಂಗಾಧರನಾಥ ಸ್ವಾಮೀಜಿ ಕುರಿತ 'ದ ಸ್ಟೋರಿ ಆಫ್ ಎ ಗುರು' ಪುಸ್ತಕ ಬಿಡುಗಡೆಗೆ ಷಾ ಅವರನ್ನು ಕರೆಸಿದ್ದೇವೆ ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದರು.

 ಪ್ರಮುಖ ಒಕ್ಕಲಿಗ ಮಠವಾಗಿರುವ ಆದಿಚುಂಚನಗಿರಿ

ಪ್ರಮುಖ ಒಕ್ಕಲಿಗ ಮಠವಾಗಿರುವ ಆದಿಚುಂಚನಗಿರಿ

ಪ್ರಮುಖ ಒಕ್ಕಲಿಗ ಮಠವಾಗಿರುವ ಆದಿಚುಂಚನಗಿರಿ ಮಠದ ಶ್ರೀಗಳು ತಮ್ಮ ಮಠಕ್ಕೆ ಬಂದ ಯಾವುದೇ ಪಕ್ಷದ ನಾಯಕನಾಗಿದ್ದರೂ ಅವರಿಗೆ ಆಶೀರ್ವಾದ ಮಾಡಿ ಕಳುಹಿಸುತ್ತಿದ್ದಾರೆ. ಅದರಲ್ಲೇನೂ ವಿಶೇಷತೆಯಿಲ್ಲ. ಆದರೆ ಮಠದ ಭೇಟಿ ಹೊರ ಪ್ರಪಂಚದಲ್ಲಿ ಅದು ಸಾರ್ವಜನಿಕ ವಲಯದಲ್ಲಿ ಮತ್ತು ರಾಜಕೀಯ ವಲಯದಲ್ಲಿ ಒಂದಷ್ಟು ಕುತೂಹಲ, ಊಹಾಪೋಹ, ವದಂತಿ ಎಲ್ಲವನ್ನೂ ಹರಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಚಾಣುಕ್ಯನ ಚುನಾವಣೆಯ ಧೃಷ್ಠಿ

ಚಾಣುಕ್ಯನ ಚುನಾವಣೆಯ ಧೃಷ್ಠಿ

ಹಳೇ ಮೈಸೂರು ವ್ಯಾಪ್ತಿಯಲ್ಲಿ ಒಕ್ಕಲಿಗ ಸಮುದಾಯ ತನ್ನದೇ ಪ್ರಾಬಲ್ಯ ಹೊಂದಿದ ದೊಡ್ಡ ಸಮುದಾಯವಾಗಿದೆ. ಈ ಭಾಗದಲ್ಲಿ ಬಿಜೆಪಿಯ ಇದುವರೆಗಿನ ಸಾಧನೆಯೂ ಅಷ್ಟೊಂದಾಗಿಲ್ಲ. ಈಗಾಗಿ 2018ರ ವಿಧಾನಸಭೆ ಚುನಾವಣೆಯಲ್ಲಿ ಈ ಭಾಗದದಲ್ಲಿ ಬಿಜೆಪಿ ಗೆಲುವು ಸಾಧಿಸುವ ದೃಷ್ಠಿಯಿಂದ ಮಠಕ್ಕೆ ಭೇಟಿ ನೀಡುತ್ತಿದ್ದಾರೆಂಬ ಗುಲ್ಲು ಎದ್ದಿವೆ.

Amit Shah gives clear instructions to state BJP leaders before coming to Karnataka |Oneindia Kannada
ಒಕ್ಕಲಿಗ ನಾಯಕರನ್ನು ಬೆಳೆಸಬೇಕಿದೆ!

ಒಕ್ಕಲಿಗ ನಾಯಕರನ್ನು ಬೆಳೆಸಬೇಕಿದೆ!

ಡಿ.ಕೆ. ಶಿವಕುಮಾರ್ ಪ್ರಭಾವಿ ಒಕ್ಕಲಿಗ ನಾಯಕರಾಗಿದ್ದು, ಅವರಿಗೂ ಈ ಮಠದೊಂದಿಗೆ ಅವಿಭಾವ ಸಂಬಂಧವಿದೆ. ಬಿಜೆಪಿ ಪಕ್ಷದಲ್ಲಿ ಅಂತಹ ಹೇಳಿಕೊಳ್ಳುವ ಪ್ರಭಾವಿ ಒಕ್ಕಲಿಗ ನಾಯಕರಿಲ್ಲ. ಕೇಂದ್ರದ ಮಾಜಿ ಸಚಿವ ಎಸ್.ಎಂ. ಕೃಷ್ಣ, ಆರ್. ಅಶೋಕ್ ಇನ್ನು ಕೆಲವರಿದ್ದರೂ ಅವರಿಂದ ಒಕ್ಕಲಿಗರ ಮೇಲೆ ಪ್ರಾಬಲ್ಯ ಸಾಧಿಸುವುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Nirmalananda swamiji reacts about Amit Shah visit to Adichunchanagiri mutt on August 13th.
Please Wait while comments are loading...