ಡಬಲ್ ಗೇಮ್ ಆಡುತ್ತಿರೋದು ಯಾವ ಪುರುಷಾರ್ಥಕ್ಕೆ? : ಡಿಕೆಶಿ ವಿರುದ್ಧ ನಿಖಿಲ್ ಕುಮಾರಸ್ವಾಮಿ ಕಿಡಿ
ಬೆಂಗಳೂರು, ಸೆಪ್ಟೆಂಬರ್ 08: ಮೆಡಿಕಲ್ ಕಾಲೇಜು ಸ್ಥಳಾಂತರದ ವಿಚಾರದಲ್ಲಿ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಈ ಕುರಿತು ಸರಣಿ ಮಾಡಿರುವ ನಿಖಿಲ್ ಕುಮಾರಸ್ವಾಮಿ, ಡಿಸಿಎಂ ಡಿಕೆ ಶಿವಕುಮಾರ್ ಅವರ ಒತ್ತಡದಿಂದಲೇ ರಾಮನಗರ ಮೆಡಿಕಲ್ ಕಾಲೇಜನ್ನು ಕನಕಪುರಕ್ಕೆ ಸ್ಥಳಾಂತರ ಮಾಡುವುದಾಗಿ ಸ್ವತಃ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಅವರೇ ಹೇಳಿದ್ದರು. ಹಾಗಾದರೆ, ಈ ಸರಕಾರ ಯಾರನ್ನು ಯಾಮಾರಿಸಲು ಹೊರಟಿದೆ. ಡಬಲ್ ಗೇಮ್ ಆಡುತ್ತಿರುವುದು ಯಾವ ಪುರುಷಾರ್ಥಕ್ಕೆ? ಸುಖಾ ಸುಮ್ಮನೆ ಗೊಂದಲ ಯಾಕೆ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಮೆಡಿಕಲ್ ಕಾಲೇಜು ರಾಮನಗರ ಜಿಲ್ಲೆಯ ಜನತೆಯ ಹಕ್ಕು. ಅದಕ್ಕಾಗಿ ಹೋರಾಟ ಮಾಡುವ ಹಕ್ಕೂ ಅವರಿಗಿದೆ. ಹೀಗಾಗಿ ಪಕ್ಷಾತೀತವಾಗಿ ನಡೆಯುತ್ತಿರುವ ರಾಮನಗರ ಬಂದ್ ಗೆ ನನ್ನ ಸಂಪೂರ್ಣ ಬೆಂಬಲವಿದೆ. ನೇರವಾಗಿ ಭಾಗವಹಿಸಿ ರಾಜಕೀಯ ಬೆರೆಸುವುದು ನನಗೆ ಇಷ್ಟವಿಲ್ಲ. ಮೆಡಿಕಲ್ ಕಾಲೇಜು ಬೇಕೆನ್ನುವ ರಾಮನಗರ ಜನರ ಒತ್ತಾಯಕ್ಕೆ ನನ್ನ ಸಹಮತ ಇದೆ ಎಂದು ಹೇಳಿದ್ದಾರೆ.
ಮೆಡಿಕಲ್ ಕಾಲೇಜು ರಾಮನಗರ ಜಿಲ್ಲೆಯ ಜನತೆಯ ಹಕ್ಕು. ಅದಕ್ಕಾಗಿ ಹೋರಾಟ ಮಾಡುವ ಹಕ್ಕೂ ಅವರಿಗಿದೆ. ಹೀಗಾಗಿ ಪಕ್ಷಾತೀತವಾಗಿ ನಡೆಯುತ್ತಿರುವ ರಾಮನಗರ ಬಂದ್ ಗೆ ನನ್ನ ಸಂಪೂರ್ಣ ಬೆಂಬಲವಿದೆ. ನೇರವಾಗಿ ಭಾಗವಹಿಸಿ ರಾಜಕೀಯ ಬೆರೆಸುವುದು ನನಗೆ ಇಷ್ಟವಿಲ್ಲ. ಮೆಡಿಕಲ್ ಕಾಲೇಜು ಬೇಕೆನ್ನುವ ರಾಮನಗರ ಜನರ ಒತ್ತಾಯಕ್ಕೆ ನನ್ನ ಸಹಮತ ಇದೆ.1/5
— Nikhil Kumar (@Nikhil_Kumar_k) September 8, 2023
2006-07ರಲ್ಲೇ ₹310ಕೋಟಿ ವೆಚ್ಚದಲ್ಲಿ ವೈದ್ಯಕೀಯ ಕಾಲೇಜು ಸೇರಿ ರಾಮನಗರದಲ್ಲಿ ರಾಜೀವ್ ಗಾಂಧಿ ವಿವಿ ಸಮುಚ್ಚಯ ಸ್ಥಾಪನೆಗೆ ಅಂದಿನ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿ ಅವರು ಆಡಳಿತಾತ್ಮಕ ಮಂಜೂರಾತಿ ನೀಡಿದ್ದರು.ಮತ್ತೆ 25-3-2019ರಂದು ಸಿಎಂ ಆಗಿದ್ದ ಕುಮಾರಣ್ಣ ಅವರು ಆ ಯೋಜನೆಯ ವೆಚ್ಚವನ್ನು ₹540 ಕೋಟಿಗೆ ಹೆಚ್ಚಿಸಿದ್ದರು.

ಮೈತ್ರಿ ಸರಕಾರದ ಅವಧಿಯಲ್ಲಿ ಕನಕಪುರಕ್ಕೂ ಪ್ರತ್ಯೇಕ ಮೆಡಿಕಲ್ ಕಾಲೇಜು ಬೇಕು ಎಂದು ಅಂದು ಡಿ ಕೆ ಶಿವಕುಮಾರ್ ಅವರೇ ಒತ್ತಡ ಹೇರಿದ್ದರು. 13-12-2018ರಲ್ಲಿ ₹450 ಕೋಟಿ ವೆಚ್ಚದ ಮೆಡಿಕಲ್ ಕಾಲೇಜನ್ನು ಕುಮಾರಣ್ಣ ಅವರು ಕನಕಪುರಕ್ಕೂ ಮಂಜೂರು ಮಾಡಿದ್ದರು. ಬಳಿಕ ಬಿಜೆಪಿ ಸರಕಾರವು ರಾಮನಗರ ಮೆಡಿಕಲ್ ಕಾಲೇಜು ಹಾಗೂ ರಾಜೀವ್ ಗಾಂಧಿ ವಿವಿ ಸಮುಚ್ಚಯ ನಿರ್ಮಾಣಕ್ಕೆ ₹610 ಕೋಟಿ ವೆಚ್ಚದಲ್ಲಿ ಗುದ್ದಲಿಪೂಜೆ ನೆರವೇರಿಸಿತ್ತು. ಎರಡು ತಿಂಗಳ ಹಿಂದೆ ಬಂದ ಕಾಂಗ್ರೆಸ್ ಸರಕಾರವು ರಾಮನಗರಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜನ್ನು ಹೈಜಾಕ್ ಮಾಡುವ ಮೂಲಕ ರಾಮನಗರ ಜನತೆಗೆ ದ್ರೋಹ ಎಸಗಿದೆ ಎಂದು ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.












Click it and Unblock the Notifications