"ಸೂಪರ್ ಸಿಎಂ ಸೂರ್ಜೇವಾಲಾ ಅವರೇ, ಗುಂಡಿಗಳ ನಗರಕ್ಕೆ ಸ್ವಾಗತ"
ಬೆಂಗಳೂರು, ಸೆಪ್ಟೆಂಬರ್ 20: ಸೂಪರ್ ಸಿಎಂ ರಣದೀಪ್ ಸಿಂಗ್ ಸುರ್ಜೇವಾಲ ಅವರೇ, ಗುಂಡಿಗಳ ನಗರಕ್ಕೆ ಸ್ವಾಗತ. ಸ್ಟಾರ್ ಹೋಟೆಲ್ ಒಳಗೆ ಇದ್ದು ನಿಮ್ಮ ಸಭೆಗಳನ್ನು ಅಲ್ಲಿಯೇ ಮುಗಿಸುವುದು ಉತ್ತಮ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.
ಈ ಬಗ್ಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟ್ವೀಟ್ ಮಾಡಿರುವ ಅವರು, ಇಂದು ಬೆಂಗಳೂರಿಗೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಭೇಟಿ ನೀಡಿ ಸಭೆಯನ್ನ ಮಾಡಿದ್ದಾರೆ ಈ ಭೇಟಿಯನ್ನು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ನಿಮ್ಮ ಸಭೆಗಳೆನಿದ್ದರೂ 5 ಸ್ಟಾರ್ ಹೋಟೆಲ್ ನಲ್ಲಿಯೇ ಮುಗಿಸಿ. ಹೊರಗೆ ಬಂದರೆ ಬೆಂಗಳೂರಿನ ರೋಲರ್-ಕೋಸ್ಟರ್ ರಸ್ತೆಗಳಿಗೆ ಸುರಕ್ಷತಾ ಸಾಧನಗಳು ಮತ್ತು ಕಸದ ದುರ್ವಾಸನೆಗೆ ಮೂಗಿನ ಕ್ಲಿಪ್ ಬೇಕಾಗುತ್ತದೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಗುಂಡಿ ಸಮಸ್ಯೆಗಳು ಬಗೆಹರಿಯುವಂತೆ ಕಾಣುತ್ತಿಲ್ಲ.ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಗಡು ಮೇಲೆ ಗಡು ಕೊಡ್ತಾನೆ ಇದ್ದಾರೆ. ಆದರೆ ನಗರವಾಸಿಗಳು ಮನೆಗೆ ಹೋಗಿ ತಲುಪುವವರೆಗೂ ಜೀವ ಕೈಯಲ್ಲೇ ಹಿಡಿದು ಹೋಗುತ್ತಿದ್ದಾರೆ. ಇನ್ನು ಕೆಲ ಐಟಿ ಕಂಪನಿಗಳು ರಸ್ತೆ ಗುಂಡಿ ಕಾರಣಗಳಿಂದ ನಾವು ರಾಜ್ಯ ಬಿಡುತ್ತಿದ್ದೇವೆ ಎಂದು ಹೇಳುತ್ತಿದೆ. ಅಂಥವರನ್ನು ಹೈದರಾಬಾದ್ ಆಮಂತ್ರಿಸುತ್ತಿದೆ. ಇಷ್ಟು ವರ್ಷದವರೆಗೂ ಐಟಿ ಸಿಟಿ ಬೆಂಗಳೂರು, ಇದೀಗ ರಸ್ತೆ ಗುಂಡಿಗಳಿಂದಾಗಿ, ಅಪಖ್ಯಾತಿಗೆ ಗುರಿಯಾಗುತ್ತಿದೆ. ಇದಕ್ಕೆಲ್ಲ ಕಾರಣ ಕಾಂಗ್ರೆಸ್ ಎಂದು ಕಿಡಿಕಾರಿರಿದರು. ಇದನ್ನ ಡಿಸಿಎಂ ಡಿಕೆ ಶಿವಕುಮಾರ್ ಗೆ ದೂರು ನೀಡಬೇಡಿ, ಅವರು ಅದನ್ನು "ಬ್ಲ್ಯಾಕ್‌ಮೇಲ್" ಎಂದು ಕರೆಯುತ್ತಾರೆ ಎಂದು ನಿಖಿಲ್ ಅವರು ವ್ಯಂಗ್ಯ ಮಾಡಿದ್ದಾರೆ.












Click it and Unblock the Notifications