ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿರೋಧದ ನಡುವೆಯೂ ಯುವ ಘಟಕ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಂಡ ನಿಖಿಲ್

|
Google Oneindia Kannada News

Recommended Video

ವಿರೋಧದ ನಡುವೆಯೂ ಯುವ ಘಟಕ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಂಡ ನಿಖಿಲ್ | Oneindia Kannada

ಬೆಂಗಳೂರು, ಜುಲೈ 04: ಮಂಡ್ಯದಲ್ಲಿ ಸೋತು ಮಧ್ಯ ದಾರಿಯಲ್ಲಿ ನಿಂತಿದ್ದ ನಿಖಿಲ್ ಕುಮಾರಸ್ವಾಮಿ ಅವರಿಗೆ ಜೆಡಿಎಸ್‌ನ ಕೆಲವು ಹಿರಿಯರ ವಿರೋಧದ ನಡುವೆಯೂ ಪ್ರಮುಖ ಜವಾಬ್ದಾರಿಯನ್ನು ದೇವೇಗೌಡ ಅವರು ನೀಡಿದ್ದಾರೆ.

ದೇವೇಗೌಡ ಅವರ ಕುಟುಂಬಕ್ಕೆ ಜೆಡಿಎಸ್ ಪಕ್ಷದಲ್ಲಿ ಹೆಚ್ಚಿನ ಪ್ರಾತಿನಿಧ್ಯ ಕೊಡುವುದಕ್ಕೆ ಸ್ವತಃ ಜೆಡಿಎಸ್‌ನ ಹಿರಿಯರೇ ಕೆಲವರು ವಿರೋಧ ವ್ಯಕ್ತಪಡಿಸಿದ್ದರು, ಅದಾಗ್ಯೂ ನಿಖಿಲ್ ಕುಮಾರಸ್ವಾಮಿ ಅವರಿಗೆ ಪ್ರಮುಖ ಸ್ಥಾನವನ್ನೇ ನೀಡಲಾಗಿದೆ.

ಜೆಡಿಎಸ್ ರಾಧ್ಯಾಕ್ಷರಾಗಿ ದೇವೇಗೌಡ ಆಪ್ತ ಎಚ್‌.ಕೆ.ಕುಮಾರಸ್ವಾಮಿ ನೇಮಕಜೆಡಿಎಸ್ ರಾಧ್ಯಾಕ್ಷರಾಗಿ ದೇವೇಗೌಡ ಆಪ್ತ ಎಚ್‌.ಕೆ.ಕುಮಾರಸ್ವಾಮಿ ನೇಮಕ

ನಿಖಿಲ್ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ ಮಿಂಚಿದ್ದು ಸಾಕು ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು ಎಂದು ಕೆಲವು ದಿನಗಳ ಹಿಂದೆಯಷ್ಟೆ ಪ್ರಚಾರ ಸಮಿತಿ ಅಧ್ಯಕ್ಷ ವೈ.ಎಸ್.ವಿ.ದತ್ತ ಅವರು ಬಹಿರಂಗವಾಗಿ ಹೇಳಿದ್ದರು. ಬಸವರಾಜ ಹೊರಟ್ಟಿ ಸಹ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

ಮುಂದುವರೆಯಿತೇ ದೇವೇಗೌಡರ ಕುಟುಂಬ ಪ್ರೀತಿ?

ಮುಂದುವರೆಯಿತೇ ದೇವೇಗೌಡರ ಕುಟುಂಬ ಪ್ರೀತಿ?

ಆದರೆ ದೇವೇಗೌಡ ಅವರ ಕುಟುಂಬ ಪ್ರೀತಿ ಮುಂದುವರೆದಿದ್ದು, ನಿಖಿಲ್ ಕುಮಾರಸ್ವಾಮಿ ಅವರಿಗೆ ಗುರುತರವಾದ ಜವಾಬ್ದಾರಿಯನ್ನು ಪಕ್ಷದಲ್ಲಿ ನೀಡಿದ್ದಾರೆ. ಯುವ ಘಟಕದ ರಾಜ್ಯ ಅಧ್ಯಕ್ಷರನ್ನಾಗಿ ನಿಖಿಲ್ ಕುಮಾರಸ್ವಾಮಿ ಅವರನ್ನು ನೇಮಿಸಿದ್ದಾರೆ.

ಪಕ್ಷದಲ್ಲಿ ಸಕ್ರಿಯರಾಗಿರುವ ನಿಖಿಲ್ ಕುಮಾರಸ್ವಾಮಿ

ಪಕ್ಷದಲ್ಲಿ ಸಕ್ರಿಯರಾಗಿರುವ ನಿಖಿಲ್ ಕುಮಾರಸ್ವಾಮಿ

ಮಂಡ್ಯದಲ್ಲಿ ಚುನಾವಣೆ ಸೋತ ಬಳಿಕ ನಿಖಿಲ್ ಕುಮಾರಸ್ವಾಮಿ ಅವರು ಹಿಂದೆಂದಿಗಿಂತಲೂ ಪಕ್ಷದಲ್ಲಿ ಸಕ್ರಿಯರಾಗಿದ್ದಾರೆ. ಹಲವು ರಾಜ್ಯ ಮತ್ತು ರಾಷ್ಟ್ರ ನಾಯಕರನ್ನು ಭೇಟಿ ಆಗಿ ಸಲಹೆ ಸೂಚನೆಗಳನ್ನು ಪಡೆದಿದ್ದಾರೆ. ಮಾಧ್ಯಮಗಳೊಂದಿಗೂ ಮಾತನಾಡಿದ್ದ ನಿಖಿಲ್ ಪಕ್ಷ ಸಂಘಟನೆಯೊಂದೇ ಸದ್ಯದ ಗುರಿ ಎಂದೂ ಹೇಳಿಕೊಂಡಿದ್ದರು.

ಮೊಮ್ಮಕ್ಕಳನ್ನು ಹೊಗಳಿದ ದೇವೇಗೌಡ: ಪ್ರಜ್ವಲ್‌ಗೆ ಕಿವಿಮಾತುಮೊಮ್ಮಕ್ಕಳನ್ನು ಹೊಗಳಿದ ದೇವೇಗೌಡ: ಪ್ರಜ್ವಲ್‌ಗೆ ಕಿವಿಮಾತು

ದೇವೇಗೌಡರು ನೀಡಿದ್ದಾರೆ ಗುರುತರ ಜವಾಬ್ದಾರಿ

ದೇವೇಗೌಡರು ನೀಡಿದ್ದಾರೆ ಗುರುತರ ಜವಾಬ್ದಾರಿ

ಮಂಡ್ಯ ಚುನಾವಣೆಯಲ್ಲಿ ಅನುಭವಸಿದ ಸೋಲಿನ ನಿರಾಸೆಯಿಂದ ಹೊರಬರಲೆಂದು ದೇವೇಗೌಡ ಅವರು ನಿಖಿಲ್ ಕುಮಾರಸ್ವಾಮಿ ಅವರಿಗೆ ಈ ಮಹತ್ವದ ಜವಾಬ್ದಾರಿ ನೀಡಿದ್ದಾರೆ ಎನ್ನಲಾಗಿದೆ. ನಿಖಿಲ್ ಜೊತೆಗೆ ಇನ್ನೂ ಕೆಲವರನ್ನು ಯುವ ಘಟಕದ ವಿವಿಧ ಹುದ್ದೆಗಳಿಗೆ ನೇಮಿಸಲಾಗಿದೆ.

ಜೆಡಿಎಸ್ ಯುವ ಘಟಕದ ಕಾರ್ಯಾಧ್ಯಕ್ಷ ನೂರ್ ಅಹ್ಮದ್

ಜೆಡಿಎಸ್ ಯುವ ಘಟಕದ ಕಾರ್ಯಾಧ್ಯಕ್ಷ ನೂರ್ ಅಹ್ಮದ್

ಜೆಡಿಎಸ್ ಯುವ ಘಟಕದ ಕಾರ್ಯಾಧ್ಯಕ್ಷರಾಗಿ ನೂರ್ ಅಹ್ಮದ್ ಅವರನ್ನು ನೇಮಕ ಮಾಡಲಾಗಿದೆ. ಯುವ ಘಟಕದ ಮಹಾಪ್ರಧಾನ ಕಾರ್ಯದರ್ಶಿಯಾಗಿ ಶರಣ್ ಗೌಡ ಕುಂದನೂರ್, ಹಿರಿಯ ಉಪಾಧ್ಯಕ್ಷರಾಗಿ ನರಸಿಂಹಮೂರ್ತಿ ಅವರನ್ನು ನೇಮಿಸಲಾಗಿದೆ.

English summary
JDS national president Deve Gowda today appointed Nikhil Kumaraswamy as JDS youth state president. Some JDS senior leaders were opposed to that.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X