ರಾಮನಗರದಲ್ಲಿ ಪ್ರಚಾರಕ್ಕಿಳಿದ ನಿಖಿಲ್ ಗೌಡ

ರಾಮನಗರ,

ಏ.
12
:
ನಮ್ಮ
ಕುಟುಂಬಕ್ಕೆ
ರಾಜಕೀಯ
ಜನ್ಮ
ನೀಡಿದಂತಹ
ರಾಮನಗರ
ಕ್ಷೇತ್ರದ
ಜನರ
ಬಗ್ಗೆ
ನನಗೆ
ಅಪಾರವಾದ
ಪ್ರೀತಿ
ವಿಶ್ವಾಶವಿದೆ.
ನನ್ನ
ಮುಂದಿನ
ರಾಜಕೀಯ
ಭವಿಷ್ಯ
ರಾಮನಗರದಿಂದಲೇ
ತೀರ್ಮಾನವಾಗಲಿದೆ
ಎಂದು
ಮಾಜಿ
ಸಿಎಂ
ಎಚ್.ಡಿ.ಕುಮಾರಸ್ವಾಮಿ
ಪುತ್ರ
ನಿಖಿಲ್
ಗೌಡ
ಹೇಳಿದ್ದಾರೆ.

id="toptextpromo">
id='are-slot-1'
class='oiad
oi-axt
oiadv'>

ಶುಕ್ರವಾರ

ನಿಖಿಲ್
ಗೌಡ
ರಾಮನಗರ
ವಿಧಾನಸಭಾ
ಕ್ಷೇತ್ರದ
ಹಾರೋಹಳ್ಳಿ,
ಕೀರಣಗೆರೆ,
ಮರಳವಾಡಿ
ಹೋಬಳಿಗಳಲ್ಲಿ
ಪ್ರಚಾರ
ನಡೆಸಿದರು.
ಸಂದರ್ಭದಲ್ಲಿ
ಮಾತನಾಡಿದ
ಅವರು,
ನನ್ನ
ತಂದೆ
ಕುಮಾರಸ್ವಾಮಿ
ಪಲಾಯನವಾದ
ಮಾಡಿಲ್ಲ,
ಚಿಕ್ಕಬಳ್ಳಾಪುರ
ಜನರ
ಸೇವೆ
ಮಾಡಲು
ತೆರಳಿದ್ದಾರೆ.
ರಾಮನಗರದ
ಜನರ
ಸೇವೆಯನ್ನು
ನಾನು
ಮಾಡುತ್ತೇನೆ
ಎಂದು
ತಿಳಿಸಿದರು.
ಚಿತ್ರದಲ್ಲಿ
ನೋಡಿ
ನಿಖಿಲ್
ಗೌಡ
ಪ್ರಚಾರ

id='are-slot-2'
class='oiad
oi-axt
oiadv'>

ನಾನು ಜನರ ಸೇವಕ

ನಾನು ಜನರ ಸೇವಕ

ರಾಜಕೀಯಕ್ಕೆ ಬರಬಾರದು ಎಂದು ನಾನು ತೀರ್ಮಾನ ಕೈಗೊಂಡಿದ್ದೆ. ಆದರೆ, ನನ್ನ ತಂದೆಗೆ ಜನರು ತೋರುವ ಪ್ರೀತಿ ವಿಶ್ವಾಸ ನೋಡಿ ಜನಸೇವೆ ಮಾಡಬೇಕೆಂದು ತೀರ್ಮಾನಿಸಿದ್ದೇನೆ. ನಾನು ನಿಮ್ಮೆಲ್ಲರ ಆಶೀರ್ವಾದದಿಂದ ನನ್ನ ತಂದೆಯ ಜನಪರ ಹಿತಾಸಕ್ತಿ, ಸರಳತೆ, ತಾತನ ಹೋರಾಟದ ಗುಣವನ್ನು ಮೈಗೂಡಿಸಿಕೊಂಡು ನಿಮ್ಮ ಸೇವೆ ಮಾಡಲಿ ಇಚ್ಛೆ ಪಡುತ್ತೇನೆ ಎಂದು ನಿಖಿಲ್ ಹೇಳಿದರು.

ರಾಮನಗರ ನಮ್ಮ ಕುಟುಂಬಕ್ಕೆ ತಾಯಿ ಇದ್ದಂತೆ

ರಾಮನಗರ ನಮ್ಮ ಕುಟುಂಬಕ್ಕೆ ತಾಯಿ ಇದ್ದಂತೆ

ರಾಮನಗರ ಕ್ಷೇತ್ರ ನಮ್ಮ ಕುಟುಂಬಕ್ಕೆ ತಾಯಿ ಇದ್ದಂತೆ. ತಾಯಿಯನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಹಾಗೆಯೇ ರಾಮನಗರವನ್ನು ನಮ್ಮ ಕುಟುಂಬದವರು ಮರೆಯುವುದಿಲ್ಲ ಎಂದು ನಿಖಿಲ್ ಹೇಳಿದರು. ರಾಮನಗರದ ಮನೆಮಗನಾದ ಕುಮಾರಸ್ವಾಮಿ ಅವರು ಬೇರೆ ಕಡೆ ಸ್ಪರ್ಧೆಗೆ ಇಳಿದಿದ್ದಾರೆ. ರಾಮನಗರದ ಬಂಧುಗಳು ಅವರಿಗೆ ಬೆಂಬಲ ನೀಡಬೇಕು ಎಂದು ನಿಖಿಲ್ ಮನವಿ ಮಾಡಿದರು.

 ನಮ್ಮ ತಂದೆ ನೆರಳಾಗಿದ್ದಾರೆ ಎಂಬುದು ನೆಮ್ಮದಿ

ನಮ್ಮ ತಂದೆ ನೆರಳಾಗಿದ್ದಾರೆ ಎಂಬುದು ನೆಮ್ಮದಿ

ಕುಮಾರಸ್ವಾಮಿ ಅವರು ಸದಾ ರಾಜಕೀಯ ಜಂಜಾಟದಲ್ಲಿರುವುದರಿಂದ ಅವರನ್ನು ನಾವು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ. ಆದರೆ, ಅವರು ತಮ್ಮ ಸರಳತೆಯಿಂದ ಸಂಪಾದಿಸಿರುವ ಕೋಟ್ಯಾಂತರ ಜನರ ಪ್ರೀತಿ ನೋಡಿ, ನಾವು ಅವರನ್ನು ಮಿಸ್ ಮಾಡಿಕೊಂಡರೂ ಪರವಾಗಿಲ್ಲ ಅವರು ಜನರ ಸೇವೆ ಮಾಡುತ್ತಾ ಅವರಿಗೆ ನೆರಳಾಗಿದ್ದಾರೆ ಎಂದು ಸಮಾಧಾನವಾಗುತ್ತಿದೆ ಎಂದರು.

ನಿಮ್ಮ ವಿಶ್ವಾಸಕ್ಕೆ ನಾನು ಋಣಿ

ನಿಮ್ಮ ವಿಶ್ವಾಸಕ್ಕೆ ನಾನು ಋಣಿ

ಎರಡು ದಿನಗಳಿಂದ ನಾನು ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದೇನೆ. ಜನರು ನನಗೆ ಪ್ರೀತಿಯಿಂದ ಆಶೀರ್ವಾದ ಮಾಡುತ್ತಿದ್ದಾರೆ. ನಾನು ರಾಮನಗರದ ಜನತೆಗೆ ಎಂದೆಂದಿಗೂ ಋಣಿಯಾಗಿರುತ್ತೇನೆ. ನನ್ನ ತಂದೆ ಕೂಡ ರಾಮನಗರದ ಜನತೆ ನನ್ನ ಮೇಲೆ ತೋರುತ್ತಿರುವ ಪ್ರೀತಿ ವಿಶ್ವಾಸವನ್ನ ನೋಡಿ ಅವರು ಕೂಡ ತುಂಬಾ ಖುಷಿ ಪಡುತ್ತಿದ್ದಾರೆ ಎಂದು ನಿಖಿಲ್ ಸಂತಸ ಹಂಚಿಕೊಂಡರು.

ನಿಮ್ಮ ಸೇವೆ ಮಾಡಲು ಬಂದಿದ್ದೇನೆ

ನಿಮ್ಮ ಸೇವೆ ಮಾಡಲು ಬಂದಿದ್ದೇನೆ

ಕೆಲವು ರಾಜಕಾರಣಿಗಳು ಚುನಾವಣೆ ಬಂದಾಗ ಭರವಸೆಗಳನ್ನು ನೀಡಿ ನಂತರ ಕ್ಷೇತ್ರವನ್ನು ಮರೆಯುತ್ತಾರೆ. ಆದರೆ, ನಾನು ಹಾಗಲ್ಲ ನಿಮ್ಮೆಲ್ಲರ ಜನಸೇವಕನಾಗಲು ಬಂದಿರುವವನು ನಾನು. ಯುವಕರೆಲ್ಲಾ ಒಂದಾಗೋಣ, ರಾಜಕಾರಣದಲ್ಲಿ ಬದಲಾವಣೆ ತರೋಣ ಎಂದು ನಿಖಿಲ್ ಹೇಳಿದರು.

ರೆಡ್ಡಿ ಗೆಲುವು ನಮ್ಮ ಗೆಲುವು

ರೆಡ್ಡಿ ಗೆಲುವು ನಮ್ಮ ಗೆಲುವು

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿಯಾಗಿರುವ ಪ್ರಭಾಕರ ರೆಡ್ಡಿ ಅವರಿಗೆ ನೀವೆಲ್ಲರೂ ಬೆಂಬಲ ನೀಡಿ. ಪ್ರಭಾಕರ ರೆಡ್ಡಿ ಅವರು ಗೆದ್ದರೆ ಅದು ಕುಮಾರಸ್ವಾಮಿ ಮತ್ತು ದೇವೇಗೌಡರ ಗೆಲುವಾಗುತ್ತದೆ. ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಜೆಡಿಎಸ್‍ ಪಕ್ಷಕ್ಕೆ ಶಕ್ತಿ ತುಂಬಿ ಎಂದರು.

ಮುದ್ದೆ ಮುರಿದ ನಿಖಿಲ್

ಮುದ್ದೆ ಮುರಿದ ನಿಖಿಲ್

ದೇವೇಗೌಡರು ಎಂದರೆ ಮುದ್ದೆ ಸೊಪ್ಪು ಸಾರು ನೆನಪಿಗೆ ಬರುತ್ತೆ. ಕುಮಾರಸ್ವಾಮಿ ಅವರಿಗೂ ಮುದ್ದೆ ಎಂದರೆ ಇಷ್ಟ ಚುನಾವಣಾ ಪ್ರಚಾರ ನಡೆಸುತ್ತಿರುವ ನಿಖಿಲ್ ಹಾರೋಹಳ್ಳಿ ಬಳಿಯ ಹಳ್ಳಿವೊಂದರಲ್ಲಿ ಜೆಡಿಎಸ್ ಮುಖಂಡರ ಮನೆಯಲ್ಲಿ ಎರಡು ಮುದ್ದೆ ಸವಿದರು. ನನಗೂ ಮುದ್ದೆ ಅಂದ್ರೆ ಇಷ್ಟ ಮನೆಯಲ್ಲೂ ಮಾಡ್ತಾರೆ ಅಲ್ಲೂ ಕೂಡ ಮುದ್ದೆ ಊಟ ಮಾಡ್ತೀನಿ ಎಂದು ತಿಳಿಸಿದರು.

ನಿಖಿಲ್ ಕಂಡು ಅಜ್ಜಿಯ ಸಂತಸ

ನಿಖಿಲ್ ಕಂಡು ಅಜ್ಜಿಯ ಸಂತಸ

ನಿಖಿಲ್ ಹಳ್ಳಿಗಳಿಗೆ ಭೇಟಿ ನೀಡುತ್ತಿದ್ದಂತೆ ಯುವಕರು ಗುಂಪುಗಟ್ಟಿ ನಿಂತ ಹಸ್ತಲಾಘವ ನೀಡಿ ಅವರನ್ನು ಬರಮಾಡಿಕೊಂಡರು. ಅಜ್ಜಿಯೊಬ್ಬರು ಬಂದು ಕುಮಾರಸ್ವಾಮಿ ಮಗ ಅಂತೆ ನೋಡಿರಲಿಲ್ಲ ಕಣಪ್ಪ ನಿನ್ನನ್ನ. ನಿಮ್ಮಪ್ಪನಂಗೆ ನೀನು ದೊಡ್ಡವನಾಗಪ್ಪ. ನನಗೆ ಮೊದಲು ನೂರು ರೂಪಾಯಿ ಭತ್ಯೆ ಬರ್ತಿತ್ತು, ಅದನ್ನು ನಾನೂರು ರೂಪಾಯಿ ಬರುವಂತೆ ಮಾಡಿದ್ದು ನಿಮ್ಮಪ್ಪ ಎಂದು ಹೇಳಿ ನಿಖಿಲ್ ಕೆನ್ನೆಗೆ ಮುತ್ತಿಟ್ಟರು, ನಿಖಿಲ್ ಸಹ ಅಜ್ಜಿಯನ್ನು ಅಪ್ಪಿಕೊಂಡು ಕೈಹಿಡಿದು ಸ್ವಲ್ಪ ದೂರ ಸಾಗಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+