ಉತ್ತರ ಪ್ರದೇಶದ ಬಾಂಬ್ ಸ್ಫೋಟಕ್ಕೆ ಕರ್ನಾಟಕದ ನಂಟು

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಮಾರ್ಚ್ 08 : ರಾಷ್ಟ್ರೀಯ ತನಿಖಾ ದಳದ ತಂಡ ಕರ್ನಾಟಕಕ್ಕೆ ಆಗಮಿಸಿದ್ದು, ಉತ್ತರ ಪ್ರದೇಶದ ಬಿಜನೂರಿನಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದ ಬಗ್ಗೆ ಮಾಹಿತಿ ಸಂಗ್ರಹಣೆ ಮಾಡುತ್ತಿದೆ. ಈ ಬಾಂಬ್ ಸ್ಫೋಟದ ಆರೋಪಿಗಳು ಕರ್ನಾಟಕದಲ್ಲಿ ವಾಸ್ತವ್ಯ ಹೂಡಿದ್ದರು ಎಂಬುದು ತನಿಖೆಯಿಂದ ಬಹಿರಂಗವಾಗಿದೆ.

2013ರಲ್ಲಿ ಮಧ್ಯಪ್ರದೇಶದ ಜೈಲಿನಿಂದ ಪರಾರಿಯಾದ ನಿಷೇಧಿತ ಸಿಮಿ ಸಂಘಟನೆಯ ಐವರು ಸದಸ್ಯರು ಈ ಸ್ಫೋಟದ ಆರೋಪಿಗಳಾಗಿದ್ದಾರೆ. ಜೈಲಿನಿಂದ ಪರಾರಿಯಾದವರಲ್ಲಿ ಇಬ್ಬರನ್ನು ತೆಲಂಗಾಣದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿತ್ತು. ಉಳಿದ ಮೂವರು ಆರೋಪಿಗಳನ್ನು ಕೆಲವು ದಿನಗಳ ಹಿಂದೆ ಒರಿಸ್ಸಾದಲ್ಲಿ ಬಂಧಿಸಲಾಗಿತ್ತು. [ಒರಿಸ್ಸಾದಲ್ಲಿ ನಾಲ್ವರು ಸಿಮಿ ಉಗ್ರರ ಬಂಧನ]

nia

ಮೂವರು ಆರೋಪಿಗಳ ವಿಚಾರಣೆ ನಡೆಸಿದ ಎನ್‌ಐಎ ಅವರು ಕರ್ನಾಟಕದಲ್ಲಿ ನೆಲೆಸಿದ್ದರು ಎಂಬ ಮಾಹಿತಿ ಸಂಗ್ರಹಣೆ ಮಾಡಿತ್ತು. ಈ ಉಗ್ರರು ಯಾದಗಿರಿ, ಧಾರವಾಡ, ಹೊಸಪೇಟೆಯಲ್ಲಿ ವಾಸ್ತವ್ಯ ಹೂಡಿದ್ದರು. ಕರೀಂನಗರ ಮತ್ತು ತೆಲಂಗಾಣದಲ್ಲಿ ದರೋಡೆ ನಡೆಸುವ ಸಂಚನ್ನು ಕರ್ನಾಟದಲ್ಲಿಯೇ ರೂಪಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. [ಸಿಮಿ ಉಗ್ರರು ಧಾರವಾಡದಲ್ಲಿ 10 ತಿಂಗಳಿದ್ದರೂ ತಿಳಿಯಲಿಲ್ಲ ಏಕೆ?]

ಕರ್ನಾಟಕದಲ್ಲಿ ಈ ಉಗ್ರರಿಗೆ ಯಾರ ಜೊತೆ ಸಂಪರ್ಕವಿತ್ತು ಎಂದು ಎನ್‌ಐಎ ತಂಡ ತನಿಖೆ ನಡೆಸಲು ಆಗಮಿಸಿದೆ. ಚೆನ್ನೈನಲ್ಲಿ ರೈಲಿನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಈ ಉಗ್ರರ ಪಾತ್ರವಿದೆಯೇ?, ಅಲ್ಲಿನ ಕೆಲವರು ಇವರನ್ನು ಸಂಪರ್ಕಿಸಿದ್ದರೆ ಎಂದು ಮಾಹಿತಿ ಸಂಗ್ರಹಣೆ ಮಾಡಲಿದೆ. [ಗೊತ್ತೇ... ಸಿಮಿ ಉಗ್ರವಾದ ತಳೆದಿದ್ದೇ ಕರ್ನಾಟಕದಲ್ಲಿ..!]

ಈ ಮೂವರು ಉಗ್ರರ ವಿರುದ್ಧ ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಕರೀಂ ನಗರದಲ್ಲಿ ದರೋಡೆ ಮಾಡಿರುವ ಪ್ರಕರಣಗಳಿವೆ. ಬಿಜನೂರು ಮತ್ತು ಚೆನ್ನೈನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಭಾಗಿಯಾದ ಆರೋಪಗಳಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A team of the National Investigating team is in Karnataka to get further details regarding a case relating to a blast at Bijnor, Uttar Pradesh.
Please Wait while comments are loading...