ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರವೀಣ್ ನೆಟ್ಯಾರು ಹತ್ಯೆ: ಪಿಎಫ್‌ಐ ಸದಸ್ಯರ ಪತ್ತೆಗೆ 5 ಲಕ್ಷ ಬಹುಮಾನ ಘೋಷಿಸಿದ ಎನ್‌ಐಎ

|
Google Oneindia Kannada News

ಮಂಗಳೂರು, ಜನವರಿ 20: ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಬೇಕಾಗಿರುವ ಇಬ್ಬರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸದಸ್ಯರನ್ನು ಹುಡುಕಿಕೊಟ್ಟವರಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತಲಾ 5 ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಿದೆ.

ಕರ್ನಾಟಕದ ದಕ್ಷಿಣಕನ್ನಡ ಜಿಲ್ಲೆಯ ನಿವಾಸಿಗಳಾದ ಕಡಜೆ ಮೊಹಮ್ಮದ್ ಶೆರೀಫ್ (53) ಮತ್ತು ಮಸೂದ್ ಕೆಎ (40) ವಿರುದ್ಧ ಬಹುಮಾನ ಘೋಷಿಸಲಾಗಿದೆ. ಮಾಹಿತಿ ಹಂಚಿಕೊಳ್ಳುವವರ ಗುರುತನ್ನು ಗೌಪ್ಯವಾಗಿಡಲಾಗುವುದು ಎಂದು ಎನ್‌ಐಎ ಸ್ಪಷ್ಟಪಡಿಸಿದೆ.

ಬೆಳ್ಳಾರೆ ನಿವಾಸಿ, ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಕಾರ್ಯದರ್ಶಿಯಾಗಿದ್ದ ನೆಟ್ಟಾರು ಅವರನ್ನು ಜುಲೈ 26, 2022ರಂದು ಅವರ ಅಂಗಡಿಯ ಹೊರಗೆ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಫ್‌ಐ ಸದಸ್ಯರನ್ನು ಎನ್‌ಐಎ ಹುಡುಕಲಾಗುತ್ತಿದೆ. ಮಾಹಿತಿಯನ್ನು ಹಂಚಿಕೊಳ್ಳುವವರು "info.blr.niauw gov.in" ಮತ್ತು "080-29510900, 8904241100" ಅಥವಾ ಅಂಚೆ ವಿಳಾಸ ಎಸ್‌ಪಿ, ರಾಷ್ಟ್ರೀಯ ತನಿಖಾ ಸಂಸ್ಥೆ, 8 ನೇ ಮಹಡಿ, ಸರ್ ಎಂ ವಿಶ್ವೇಶ್ವರಯ್ಯ ಕೇಂದ್ರೀಯ ಭವನ, ಬೆಂಗಳೂರು-560071 ಡೊಮೆಲ್‌ನಲ್ಲಿ ಸಂಪರ್ಕಿಸಬಹುದು ಎಂದು ಭಯೋತ್ಪಾದನಾ ವಿರೋಧಿ ಸಂಸ್ಥೆ ಎನ್‌ಐಎ ಹೇಳಿದೆ.

ಪ್ರವಿಣ್‌ ಹತ್ಯೆ ಪ್ರಕರಣದಲ್ಲಿ ಇದುವರೆಗೆ 10ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದೆ. ಇದೇ ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಇತರ ನಾಲ್ವರು ಆರೋಪಿಗಳ ವಿರುದ್ಧ ಎನ್‌ಐಎ ಬಹುಮಾನ ಘೋಷಿಸಿದೆ. ಅವರನ್ನು ಬಂಧಿಸುವ ಪ್ರಯತ್ನಗಳು ಮುಂದುವರೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಜುಲೈ 27ರಂದು ಆರಂಭದಲ್ಲಿ ಪ್ರಕರಣ ದಾಖಲಾಗಿದ್ದು, ಆಗಸ್ಟ್ 4 ರಂದು ಎನ್ಐಎ ಪ್ರಕರಣವನ್ನು ಮರು ದಾಖಲಿಸಿದೆ.

ಈ ಹಿಂದೆ ನಡೆಸಲಾದ ಹಲವಾರು ಶೋಧಗಳಲ್ಲಿ ಆರೋಪಿಗಳು ಮತ್ತು ಶಂಕಿತರ ಮನೆಗಳಿಂದ ಡಿಜಿಟಲ್ ಸಾಧನಗಳು ಮತ್ತು ದೋಷಾರೋಪಣೆ ದಾಖಲೆಗಳನ್ನು ವಶಪಡಿಸಿಕೊಂಡಿರುವುದಾಗಿ ಎನ್ಐಎ ಈಗಾಗಲೇ ಹೇಳಿಕೊಂಡಿದೆ. ಮಂಗಳೂರಿನ ಬೆಳ್ಳಾರೆ ಬಳಿಯ ಪುತ್ತೂರು- ಸುಳ್ಯ ರಸ್ತೆಯ ಬಳಿಯ ಕೋಳಿ ಅಂಗಡಿಯ ಹೊರಗೆ ಜುಲೈ 26 ರಂದು ರಾತ್ರಿ ಮೂವರು ವಾಹನದಲ್ಲಿ ಬಂದು 32 ವರ್ಷದ ನೆಟ್ಟಾರು ಎಂಬಾತನನ್ನು ಕೊಂದು ಹಾಕಿದ್ದರು.

Year end 2022: ಸರ್ಕಾರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು ನಿಷೇಧಿಸಿದ ವರ್ಷವಿದುYear end 2022: ಸರ್ಕಾರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು ನಿಷೇಧಿಸಿದ ವರ್ಷವಿದು

ತನಿಖೆಯ ಸಮಯದಲ್ಲಿ ರಾಜ್ಯ ಪೊಲೀಸರು ಪಿಎಫ್‌ಐ ಪಾತ್ರ ಇರುವುದನ್ನು ಕಂಡುಹಿಡಿದಿದ್ದರು. ಬಳಿಕ ಗೃಹ ಸಚಿವಾಲಯದ (ಎಂಎಚ್‌ಎ) ಭಯೋತ್ಪಾದನೆ ನಿಗ್ರಹ ವಿಭಾಗ (ಎಂಎಚ್‌ಎ) ಹೊರಡಿಸಿದ ಆದೇಶದ ನಂತರ ಈ ವಿಷಯವನ್ನು ಎನ್‌ಐಎಗೆ ಹಸ್ತಾಂತರಿಸಲಾಯಿತು.

ಐದು ವರ್ಷಗಳ ಅವಧಿಗೆ ನಿಷೇಧ

ಐದು ವರ್ಷಗಳ ಅವಧಿಗೆ ನಿಷೇಧ

ಸೆಪ್ಟೆಂಬರ್ ಅಂತ್ಯದಲ್ಲಿ ಗೃಹ ಸಚಿವಾಲಯ ಪಿಎಫ್‌ಐ, ಅದರ ಸಹವರ್ತಿಗಳು ಮತ್ತು ಅಂಗಸಂಸ್ಥೆಗಳನ್ನು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ, 1967ರ ಅಡಿಯಲ್ಲಿ ಕಾನೂನುಬಾಹಿರ ಸಂಘವೆಂದು ಘೋಷಿಸುವ ಮೂಲಕ ಐದು ವರ್ಷಗಳ ಅವಧಿಗೆ ನಿಷೇಧಿಸಿತು. ನೆಟ್ಟಾರು ಹತ್ಯೆಯಲ್ಲಿ ಭಾಗಿಯಾಗಿರುವುದರ ಜೊತೆಗೆ ಪಿಎಫ್‌ಐ ಕಾರ್ಯಕರ್ತರು ಹಲವಾರು ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ.

ದೇಶದಲ್ಲಿ ಶಾಂತಿ ಕದಡಲು PFI ಯತ್ನ: ಹಲವೆಡೆ ಎನ್‌ಐಎ ದಾಳಿದೇಶದಲ್ಲಿ ಶಾಂತಿ ಕದಡಲು PFI ಯತ್ನ: ಹಲವೆಡೆ ಎನ್‌ಐಎ ದಾಳಿ

ಆರ್.ರುದ್ರೇಶ್ ( 2016), ಪ್ರವೀಣ್ ಪೂಜಾರಿ ಹತ್ಯೆ

ಆರ್.ರುದ್ರೇಶ್ ( 2016), ಪ್ರವೀಣ್ ಪೂಜಾರಿ ಹತ್ಯೆ

ಅಲ್ಲದೆ ಸಂಜಿತ್ (ಕೇರಳ, ನವೆಂಬರ್ 2021), ವಿ-ರಾಮಲಿಂಗಂ (ತಮಿಳುನಾಡು, 2019), ನಂದು (ಕೇರಳ, 2021), ಅಭಿಮನ್ಯು (ಕೇರಳ, 2018), ಬಿಬಿನ್ (ಕೇರಳ, 2017), ಶರತ್ ( 2017), ಆರ್.ರುದ್ರೇಶ್ ( 2016), ಪ್ರವೀಣ್ ಪೂಜಾರಿ (ಕರ್ನಾಟಕ, 2016), ಮತ್ತು ಸಸಿ ಕುಮಾರ್ (ತಮಿಳುನಾಡು, 2016) ಸೇರಿದಂತೆ ಹಲವಾರು ವ್ಯಕ್ತಿಗಳ ಕೊಲೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಪಿಎಫ್‌ಐ ಕಾರ್ಯಕರ್ತರಿಂದ ಕ್ರೂರ ಕೊಲೆ

ಪಿಎಫ್‌ಐ ಕಾರ್ಯಕರ್ತರಿಂದ ಕ್ರೂರ ಕೊಲೆ

ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಯನ್ನು ಕದಡುವ ಮತ್ತು ಸಾರ್ವಜನಿಕ ಮನಸ್ಸಿನಲ್ಲಿ ಭಯೋತ್ಪಾದನೆಯನ್ನು ಸೃಷ್ಟಿಸುವ ಏಕೈಕ ಉದ್ದೇಶಕ್ಕಾಗಿ ಪಿಎಫ್‌ಐ ಕಾರ್ಯಕರ್ತರು ಅಪರಾಧ ಚಟುವಟಿಕೆಗಳು ಮತ್ತು ಕ್ರೂರ ಕೊಲೆಗಳನ್ನು ನಡೆಸುತ್ತಿದ್ದಾರೆ ಎಂದು ಗೃಹ ಸಚಿವಾಲಯ ಹೇಳಿದೆ. ಗ್ಲೋಬಲ್ ಟೆರರಿಸ್ಟ್ ಗ್ರೂಪ್‌ಗಳೊಂದಿಗೆ ಪಿಎಫ್‌ಐಯ ಅಂತಾರಾಷ್ಟ್ರೀಯ ಸಂಪರ್ಕಗಳ ಬಗ್ಗೆ ಗೃಹ ಸಚಿವಾಲಯ ಪ್ರಸ್ತಾಪಿಸಿದೆ.

ಅಫ್ಘಾನಿಸ್ತಾನದಲ್ಲಿ ಭಯೋತ್ಪಾದಕ ಚಟುವಟಿಕೆ

ಅಫ್ಘಾನಿಸ್ತಾನದಲ್ಲಿ ಭಯೋತ್ಪಾದಕ ಚಟುವಟಿಕೆ

ಈ ಸಂಘಟನೆಯ ಕೆಲವು ಕಾರ್ಯಕರ್ತರು ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾದ ಐಸಿಸ್‌ಗೆ ಸೇರಿಕೊಂಡಿದ್ದಾರೆ. ಸಿರಿಯಾ, ಇರಾಕ್ ಮತ್ತು ಅಫ್ಘಾನಿಸ್ತಾನದಲ್ಲಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಾರೆ ಎಂದು ಹೇಳಿಕೆ ನೀಡಿದೆ. ಈ ಘರ್ಷಣೆಯಲ್ಲಿ ಐಸಿಸ್‌ಗೆ ಸಂಬಂಧಿಸಿದ ಈ ಕೆಲವು ಪಿಎಫ್‌ಐ ಕಾರ್ಯಕರ್ತರು ಕೊಲ್ಲಲ್ಪಟ್ಟಿದ್ದಾರೆ. ಕೆಲವರನ್ನು ರಾಜ್ಯ ಪೊಲೀಸ್ ಮತ್ತು ಕೇಂದ್ರ ಏಜೆನ್ಸಿಗಳು ಬಂಧಿಸಿದ್ದಾರೆ ಎನ್ನಲಾಗಿದೆ. ಪಿಎಫ್‌ಐ ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಜಮಾತ್-ಉಲ್-ಮುಯಾಹಿದೀನ್ ಬಾಂಗ್ಲಾದೇಶದೊಂದಿಗೆ (ಜೆಎಂಬಿ) ಸಂಪರ್ಕವನ್ನು ಹೊಂದಿದೆ ಎಂದು ಮಾಹಿತಿ ತಿಳಿದು ಬಂದಿದೆ.

English summary
The National Investigation Agency (NIA) has announced a cash reward of Rs 5 lakh each for those who find the two Popular Front of India (PFI) members wanted in connection with the murder of BJP Yuva Morcha leader Praveen Nettaru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X