NHAI: ಬೆಂಗಳೂರಿನ ಈ ಹೆದ್ದಾರಿ 'ದಶಪಥ' ಮಾಡಲು ಪ್ರಸ್ತಾವನೆ
ಬೆಂಗಳೂರು, ಜನವರಿ 01: ಬೆಂಗಳೂರು ವ್ಯಾಪ್ತಿಯ ಹೆದ್ದಾರಿಯೊಂದು 10 ಪಥವಾಗಿ ಬದಲಾಯಿಸುವ ಮಹತ್ವದ ಪ್ರಸ್ತಾಪವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಸರ್ಕಾರದ ಮುಂದಿಟ್ಟಿದೆ. ಈ ಮೂಲಕ ಆಂಧ್ರಪ್ರದೇಶದ ಗಡಿಗೆ ಅಂಟಿಕೊಂಡಿರುವ ಈ ಹೆದ್ದಾರಿಯು ಭವಿಷ್ಯದ ಸಂಚಾರ ದಟ್ಟಣೆ ನಿರ್ವಹಣೆಗೆ ಸಿದ್ದವಾಗಲಿದೆ.
ಹೌದು, ಬೆಂಗಳೂರು ಗ್ರಾಮಾಂತರದ ದೇವನಹಳ್ಳಿಯಿಂದ ಆಂಧ್ರಪ್ರದೇಶ ಗಡಿವರೆಗಿನ ಬಳ್ಳಾರಿ ರಸ್ತೆ ರಾಷ್ಟ್ರೀಯ ಹೆದ್ದಾರಿ-44 ಅನ್ನು 10 ಪಥದ ರಸ್ತೆಯನ್ನಾಗಿ ವಿಸ್ತರಿಸಲಾಗುವುದು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಹೆದ್ದಾರಿಯನ್ನು ಆರು ಪಥದ ಮುಖ್ಯ ಕ್ಯಾರೇಜ್‌ವೇ ಮತ್ತು ಎರಡು ಪಥದ ಸೇವಾ ರಸ್ತೆಗಳನ್ನು ಬದಿಯಲ್ಲಿ ವಿಸ್ತರಣೆ ಮಾಡಲು ಯೋಜನೆ ರೂಪಿಸಲು ಸಜ್ಜಾಗಿದೆ.

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇಗೆ ಸಂಪರ್ಕಿಸುವ ಸ್ಯಾಟಲೈಟ್ ಟೌನ್ ರಿಂಗ್ ರೋಡ್ (STRR) ಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಪ್ರಾಧಿಕಾರವು ಈ ಹೆದ್ದಾರಿ-44 ವಿಸ್ತರಣೆ ಮಾಡಲು ನಿರ್ಧರಿಸಿದೆ ಎಂದು TNIE ವರದಿ ಮಾಡಿದೆ.
ಟ್ರಾಫಿಕ್-ಬ್ಲಾಕ್ ಸ್ಟಾಟ್‌ಗೆ ಕಡಿವಾಣ
ಹೆದ್ದಾರಿಯಲ್ಲಿ ಈಗಾಗಲೇ ಹೆಚ್ಚಾಗಿರುವ ಸಂಚಾರ ದಟ್ಟಣೆ (Traffic) ಮತ್ತು ಬ್ಲಾಕ್‌ಸ್ಪಾಟ್‌ಗಳನ್ನು ತೊಡೆದು ಹಾಕುವ ಅಗತ್ಯತೆ ಇದೆ. ಈ ಕಾರಣದಿಂದ ರಸ್ತೆ ವಿಸ್ತರಣೆ ಮಾಡುವ ಅತ್ಯವಶ್ಯಕತೆ ಇದೆ ಎಂದು NHAI ಯೋಜನಾ ನಿರ್ದೇಶಕ ಕೆ.ಬಿ.ಜಯಕುಮಾರ್ ಮಾಹಿತಿ ನೀಡಿದ್ದಾರೆ.
ಸದ್ಯ ಹೆದ್ದಾರಿ ಪ್ರಾಧಿಕಾರುವ ದೇವನಹಳ್ಳಿಯಿಂದ ಕರ್ನೂಲ್‌ವರೆಗಿನ ಹೆದ್ದಾರಿಯ ನವೀಕರಣವನ್ನು ಕೈಗೆತ್ತಿಕೊಂಡಿದೆ. ಈ ಯೋಜನೆಯ (ಸ್ಟ್ರೆಚ್) ಒಟ್ಟು ಉದ್ದ 340 ಕಿಲೋ ಮೀಟರ್ ಎನ್ನಲಾಗಿದೆ. ಈ ಪೈಕಿ 72 ಕಿಮೀ ರಸ್ತೆ ಕರ್ನಾಟಕದ ಮಿತಿಯಲ್ಲಿದ್ದು, ಶೀಘ್ರವೇ ಅಭಿವೃದ್ಧಿ ಕಾಣಲಿದೆ.

ಪ್ರಾಧಿಕಾರದ ಬಳಿ ರಸ್ತೆ ಅಗಲೀಕರಣಕ್ಕೆ ಭೂಮಿ ಲಭ್ಯ
ರಸ್ತೆ ಅಗಲೀಕರಣಕ್ಕೆ ಸಿದ್ದವಾಗಿರುವ ಹೆದ್ದಾರಿ ಪ್ರಾಧಿಕಾರದ (NHAI) ಬಳಿ ಈಗಾಗಲೇ ಅಗತ್ಯವಿರುವ ಭೂಮಿ ಈಗಾಗಲೇ ಸ್ವಾಧೀನಪಡಿಸಿಕೊಂಡಿದೆ. ದೇವನಹಳ್ಳಿಯ ಆಚೆಗೆ, ಅಸ್ತಿತ್ವದಲ್ಲಿರುವ ಹೆದ್ದಾರಿಯು ಚತುಷ್ಪಥದ ಮುಖ್ಯ ರಸ್ತೆಯನ್ನು ಹೊಂದಿದ್ದರೆ, ಕೆಲವು ಮಾರ್ಗಗಳಲ್ಲಿ ಸೇವಾ ರಸ್ತೆಗಳಿವೆ. ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಕಾರಿಡಾರ್‌ಗಳಲ್ಲಿ ವರ್ಷಗಳಲ್ಲಿ ಟ್ರಕ್‌ಗಳು ಸೇರಿದಂತೆ ವಾಹನಗಳ ಸಂಚಾರ ಹೆಚ್ಚುತ್ತಿದೆ. ಈ ಕಾರಣದಿಂದ ಅಗಲೀಕರಣ ಮುಖ್ಯವಾಗಿದೆ ಎಂದು ಅಧಿಕಾರಿ ವಿವರಿಸಿದರು.
ಆಂಧ್ರಪ್ರದೇಶದ ಗಡಿಯಲ್ಲಿರುವ ಜಿಲ್ಲೆಗಳ ಜನರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ಸಮೀಪದಲ್ಲಿರುವ ಕಾರಣ ಹೆದ್ದಾರಿಯನ್ನು ಬಳಸುತ್ತಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ತುಮಕೂರು ಬಳಿಯ ದಾಬಸ್‌ಪೇಟೆಯಿಂದ ಹೊಸಕೋಟೆಯವರೆಗೆ ಸ್ಯಾಟ್‌ಲೈಟ್ ಟೌನ್ ರಿಂಗ್ ರೋಡ್ (STRR)ನ ಮೊದಲ 34-ಕಿಮೀ ವಿಸ್ತರಣೆ ಮಾಡಿ ಮುಕ್ತಗೊಳಿಸಿದೆ.
STRR ಫೆಬ್ರುವರಿಗೆ ಮುಕ್ತ ಸಾಧ್ಯತೆ
ಈ ರಸ್ತೆಯು ರಾಷ್ಟ್ರೀಯ ಹೆದ್ದಾರಿ-44 ಸಂಪರ್ಕ ಸಾಧಿಸುತ್ತದೆ. ದಾಬಸ್‌ಪೇಟೆಯಿಂದ ದೊಡ್ಡಬಳ್ಳಾಪುರದವರೆಗಿನ ಉಳಿದ ಭಾಗವು ಸಂಚಾರಕ್ಕೆ ತೆರೆಯಲಾಗಿದೆ. ತುಮಕೂರು ರಸ್ತೆಯಿಂದ ಬರುವ ಟ್ರಕ್‌ಗಳು ಎನ್‌ಎಚ್ -44 ಗೆ ನೇರ ಪ್ರವೇಶವನ್ನು ಪಡೆಯುತ್ತವೆ. ಇದರಿಂದ ಬೆಂಗಳೂರಿಗೆ ಹೋಗುವ ರಸ್ತೆಗಳಲ್ಲಿ ದಟ್ಟಣೆ ಕಡಿಮೆ ಆಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಎಸ್ಯಾಟ್‌ಲೈಟ್ ಟೌನ್ ರಿಂಗ್ ರೋಡ್ (STRR) ದೊಡ್ಡಬಳ್ಳಾಪುರ-ಹೊಸಕೋಟೆ ಮಾರ್ಗದಲ್ಲಿ ಅತೀವ ಸಂಚಾರ ದಟ್ಟಣೆ ಸೃಷ್ಟಿಯಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಈ ಟ್ರಾಫಿಕ್ ಪ್ರಯಾಣ ಏರಿಕೆ ಆಗುತ್ತಲೇ ಇದೆ. ಆದ್ದರಿಂದ ಡಾಬಸ್‌ಪೇಟೆಯಿಂದ ದೊಡ್ಡಬಳ್ಳಾಪುರದವರೆಗಿನ ಎಸ್‌ಟಿಆರ್‌ಆರ್ ಮಾರ್ಗವನ್ನು ಇದೇ ವರ್ಷ ಫೆಬ್ರವರಿ 2024 ರಂದು ತೆರೆಯಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ನಿರ್ಧರಿಸಿದೆ.
ಅಂದುಕೊಂಡಂತೆ ಬಳ್ಳಾರಿ ರಸ್ತೆ ದಶಪಥವಾದರೆ ಮುಂದಿನ ದಿನಗಳಲ್ಲಿ ದೇವನಹಳ್ಳಿಯಿಂದ ಬಳ್ಳಾರಿ ಕಡೆ ತೆರಳುವ ಜನರಿಗೆ ಸಂಚಾರ ದಟ್ಟಣೆ ಕಿರಿಕಿರಿ ತಪ್ಪಲಿದೆ. ಬೆಂಗಳೂರಿನಿಂದ ಹೊರ ವಲಯದಲ್ಲಿ ತೆರಳುವ ವಾಹನಗಳಿಗೂ ಅನುಕೂಲವಾಗಲಿದೆ.












Click it and Unblock the Notifications