ಎತ್ತಿನಹೊಳೆ ಯೋಜನೆಗೆ ಅನುಮತಿ ಕೊಟ್ಟ ಎನ್‍ಜಿಟಿ
ಬೆಂಗಳೂರು, ಅಕ್ಟೋಬರ್ 06 : 13,000 ಕೋಟಿ ರು. ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಕಾಮಗಾರಿಗೆ ರಾಷ್ಟೀಯ ಹಸಿರು ನ್ಯಾಯಮಂಡಳಿ(ಎನ್‍ಜಿಟಿ) ಶುಕ್ರವಾರ ಅನುಮತಿ ನೀಡಿ ಮಹತ್ವದ ಆದೇಶ ಹೊರಡಿಸಿದೆ.
ಯೋಜನೆಯಲ್ಲಿ ಪರಿಸರ ನಿಯಮಗಳನ್ನು ಉಲ್ಲಂಘಿಸಿ ಕಾಮಗಾರಿ ನಡೆಸಲಾಗುತ್ತಿದೆ ಎಂದು ಆರೋಪಿಸಿ ಸೆಪ್ಟೆಂಬರ್ 21, 2016ರಂದು ಪರಿಸರವಾದಿ ಕೆ.ಎನ್. ಸೋಮಶೇಖರ್ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿ ಮುಂದಿನ ಆದೇಶದಲ್ಲಿ ಷರತ್ತು ಮತ್ತು ನಿರ್ದೇಶನಗಳ ಬಗ್ಗೆ ಮಾಹಿತಿ ನೀಡುವುದಾಗಿ ಎನ್‍ಜಿಟಿ ಹೇಳಿದೆ.

ಸದ್ಯ ಕಾಮಗಾರಿ ಪ್ರಗತಿಯಲ್ಲಿದ್ದು, ಕಾಮಗಾರಿಯನ್ನು ಮುಂದುವರಿಸಲು ಯಾವುದೇ ತಕರಾರು ಇಲ್ಲ ಎಂದು ನ್ಯಾಯಮೂರ್ತಿ ಜಾವೇದ್ ರಹೀಮ್ ಮತ್ತು ರಂಜನ್ ಚಟರ್ಜಿ ನೇತೃತ್ವದ ಪೀಠ ಹೇಳಿದೆ.
ಪುರುಷೊತ್ತಮ್ ಚಿತ್ತಾಪುರ ಹಾಗೂ ಕಿಶೋರ್ ಕುಮಾರ್ ಎಂಬುವರು ಇದೇ ಈ ಯೋಜನೆ ವಿರುದ್ಧ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗಳು ಇನ್ನು ವಿಚಾರಣೆ ಹಂತದಲ್ಲಿವೆ. ಈ ಹಿನ್ನಲೆಯಲ್ಲಿ ಇಂದು ನೀಡಿರುವ ಆದೇಶದಲ್ಲಿ ಯಾವುದೇ ಷರತ್ತು ಮತ್ತು ನಿರ್ದೇಶನಗಳ ಬಗ್ಗೆ ಮಾಹಿತಿ ನೀಡಿಲ್ಲ.












Click it and Unblock the Notifications