Lok Sabha Election Survey: ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್‌ಗೆ ಆಘಾತ ನೀಡಿದ ಮತ್ತೊಂದು ಸಮೀಕ್ಷೆ!

ಬೆಂಗಳೂರು, ಏಪ್ರಿಲ್. 16: ಲೋಕಸಭಾ ಚುನಾವಣಾ ಸಮರ ದಿನೇ ದಿನೇ ಕಾವು ಪಡೆದುಕೊಳ್ಳುತ್ತಿದೆ. ಗೆಲುವು ಯಾರ ಮುಡಿಗೆ ಎಂಬ ಲೆಕ್ಕಾಚಾರಗಳು ಆರಂಭವಾಗಿದ್ದು, ಹಲವು ಸಮೀಕ್ಷೆಗಳು ಮತ್ತು ಅಭಿಪ್ರಾಯ ಸಂಗ್ರಹಗಳು ಬಿಡುಗಡೆಯಾಗುತ್ತಿವೆ. ಕೆಲವು ಕಾಂಗ್ರೆಸ್‌ಗೆ ಜೈ ಎಂದರೇ ಮತ್ತೆ ಕೆಲವು ಬಿಜೆಪಿಗೆ ಹೆಚ್ಚು ಸ್ಥಾನ ನೀಡಿವೆ.

ಇತ್ತೀಚಿನ ಎಬಿಪಿ ನ್ಯೂಸ್ ಮತ್ತು ಸಿವೋಟರ್ ಚುನಾವಣಾ ಪೂರ್ವ ಸಮೀಕ್ಷೆಯು ಕರ್ನಾಟಕದಲ್ಲಿ ಬಿಜೆಪಿ ಮಹತ್ವದ ಸ್ಥಾನವನ್ನು ಗಳಿಸಲಿದೆ ಎಂದು ಹೇಳಿದೆ. ಬಿಜೆಪಿ - ಜೆಡಿಎಸ್ ಸ್ಪರ್ಧಿಸಿರುವ 28 ಕ್ಷೇತ್ರಗಳಲ್ಲಿ 23 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ ಎಂದೂ, ಕಾಂಗ್ರೆಸ್ ಕೇವಲ ಐದು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಹೇಳಿತ್ತು. ಇದರ ಬೆನ್ನಲ್ಲೇ ಈಗ ಬಿಡುಗಡೆಯಾಗಿರುವ ನ್ಯೂಸ್‌ಎಕ್ಸ್-ಡಿ-ಡೈನಾಮಿಕ್ಸ್ ಸಮೀಕ್ಷೆ ಕೂಡ ಕಾಂಗ್ರೆಸ್‌ಗೆ ಆಘಾತ ನೀಡಿದೆ.

NewsX Opinion Poll predicts victory for bjp-jds alliance in Karnataka

ನ್ಯೂಸ್‌ಎಕ್ಸ್-ಡಿ-ಡೈನಾಮಿಕ್ಸ್ ಸಮೀಕ್ಷೆಯಲ್ಲೂ ಕಾಂಗ್ರೆಸ್‌ಗೆ ಇಲ್ಲ ಸ್ಥಾನ!

ಮುಂಬರುವ ಲೋಕಸಭೆ ಚುನಾವಣೆಗೆ ಮುಂಚಿತವಾಗಿ, ನ್ಯೂಸ್‌ಎಕ್ಸ್- ಡಿ ಡೈನಾಮಿಕ್ಸ್ ಸಮೀಕ್ಷೆಯು ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ದೊಡ್ಡ ನಂಬರ್‌ ನೀಡಿದೆ. ಲೋಕಸಭೆಯ ಎಲ್ಲಾ 543 ಸ್ಥಾನಗಳಲ್ಲಿ ಎನ್‌ಡಿಎ 383 ಸ್ಥಾನಗಳನ್ನು ಪಡೆಯಲಿದೆ ಎಂದು ಅಂದಾಜಿಸಿದೆ. ಈ ಪೈಕಿ ಬಿಜೆಪಿ ಏಕಾಂಗಿಯಾಗಿ 325 ಸ್ಥಾನಗಳನ್ನು ಗೆಲ್ಲಲಿದೆ. ಇಂಡಿಯಾ ಮೈತ್ರಿಕೂಟಕ್ಕೆ 109 ಸ್ಥಾನಗಳು ಮತ್ತು ಇತರರು 51 ಸ್ಥಾನಗಳನ್ನು ಪಡೆಯುತ್ತಾರೆ ಎಂದಿದೆ.

ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ 24 ಸ್ಥಾನಗಳನ್ನು ಪಡೆದುಕೊಳ್ಳಲಿದೆ ಎಂದು ಸಮೀಕ್ಷೆ ವರದಿ ಮಾಡಿದೆ. ಕಾಂಗ್ರೆಸ್ ಕೇವಲ ನಾಲ್ಕು ಸ್ಥಾನಗಳನ್ನು ಗೆಲ್ಲಲಿದೆ ಎಂದಿದೆ. ಬಿಜೆಪಿ ಏಕಾಂಗಿಯಾಗಿ 22 ಕ್ಷೇತ್ರಗಳನ್ನು ಗೆಲ್ಲಲಿದ್ದು, ಅದರ ಮೈತ್ರಿ ಪಕ್ಷ ಜಾತ್ಯಾತೀತ ಜನತಾದಳ 02 ಕ್ಷೇತ್ರಗಳಲ್ಲಿ ಗೆಲುವು ಕಾಣಲಿದೆ ಎಂದಿದೆ.

NewsX Opinion Poll predicts victory for bjp-jds alliance in Karnataka

ಕರ್ನಾಟಕ

ಬಿಜೆಪಿ : 22

ಕಾಂಗ್ರೆಸ್ : 04

ಜೆಡಿಎಸ್ : 02 (ಎನ್‌ಡಿಎ)

ರಾಜ್ಯದಲ್ಲಿ ಕಾಂಗ್ರೆಸ್ 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಫಲಿತಾಂಶವ್ನನು ನಿಖರವಾಗಿ ಊಹಿಸಿದ್ದ ಲೋಕ್‌ ಪೋಲ್ ಮತ್ತು ಈ ದಿನ ವೆಬ್‌ಸೈಟ್‌ಗಳು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅಧಿಕ ಸ್ಥಾನ ಸಿಗಲಿದೆ ಎಂದು ಅಂದಾಜಿಸಿವೆ.

ದಕ್ಷಿಣ ಭಾರತದ ಇತರ ರಾಜ್ಯಗಳ ಫಲಿತಾಂಶ

ತಮಿಳುನಾಡು

ಬಿಜೆಪಿ : 4,

ಡಿಎಂಕೆ : 22

ಕಾಂಗ್ರೆಸ್: 6

ಎಐಎಡಿಎಂಕೆ : 3

ತೆಲಂಗಾಣ

ಬಿಜೆಪಿ : 5

ಕಾಂಗ್ರೆಸ್: 8

ಬಿಆರ್‌ಎಸ್ : 3

ಆಂಧ್ರ ಪ್ರದೇಶ

ಬಿಜೆಪಿ (ಎನ್‌ಡಿಎ ಮೈತ್ರಿ) : 18

YSRC : 7

ಕೇರಳ

ಬಿಜೆಪಿ : 2

ಕಾಂಗ್ರೆಸ್ ಮತ್ತು ಮೈತ್ರಿಕೂಟ: 14

ಎಡ ಪಕ್ಷಗಳು: 4

ಗೋವಾ

ಬಿಜೆಪಿ : 2

ಕಾಂಗ್ರೆಸ್ : 0

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+