News Nation Exit Poll Results 2023: ನ್ಯೂಸ್‌ ನೇಷನ್‌ ಸಮೀಕ್ಷೆಯಲ್ಲಿ ಮೇಲುಗೈ ಯಾರಿಗೆ?, ಮಾಹಿತಿ

ಕರ್ನಾಟಕ, ಮೇ, 10: ರಾಜ್ಯ ವಿಧಾನಸಭೆ ಚುನಾವಣೆಯ 2023ರ ಮತದಾನ ಮುಕ್ತಾಯಗೊಂಡಿದೆ. ರಾಜ್ಯಾದ್ಯತ 65.69ರಷ್ಟು ಮತದಾನ ಆಗಿದ್ದು, ಇದೀಗ ಚುನಾವಣೆ ಪೂರ್ವ ಸಮೀಕ್ಷೆಗಳು ಬಂದಿವೆ. ಹಾಗಾದರೆ ನ್ಯೂಸ್‌ ನೇಷನ್‌ ಸಮೀಕ್ಷೆ ಏನು ಹೇಳಿದೆ ಅನ್ನುವ ವಿವರವನ್ನು ಇಲ್ಲಿ ಗಮನಿಸಿ.

ಇಂದು ರಾಜ್ಯ ವಿಧಾನಸಭೆ ಚುನವಣೆಯ ಮತದಾನ ಮುಕ್ತಾಯವಾಗಿದ್ದು, ಮೇ 13ರಂದು ಫಲಿತಾಂಶ ಹೊರಬೀಳಿದೆ. ಅದಕ್ಕೂ ಮುಂಚೆ ಹಲವು ಸುದ್ದಿ ಸಂಸ್ಥೆಗಳು ಸಮೀಕ್ಷೆಯನ್ನು ನಡೆಸಿದ್ದು, ಅದರಲ್ಲಿ ನ್ಯೂಸ್‌ ನೇಷನ್‌ ಸಮೀಕ್ಷೆ ಪ್ರಕಾರ ಬಿಜೆಪಿಯು ಮುನ್ನಡೆ ಸಾಧಿಸಲಿದೆ ಎಂದು ತಿಳಿಸಿದೆ. ಬಿಜೆಪಿ 114 ಸ್ಥಾನ ಪಡೆದರೆ, ಕಾಂಗ್ರೆಸ್‌ 86 ಸ್ಥಾನಗಳನ್ನು ಪಡೆಯಲಿದೆ, ಜೆಡಿಎಸ್‌ 21 ಸ್ಥಾನಗಳನ್ನು ಪಡೆಯಲಿದೆ ಹಾಗೂ ಇತರೆ 03 ಸ್ಥಾನಗಳನ್ನು ಪಡೆಯಲಿದೆ ಎಂದು ತಿಳಿಸಿದೆ.

News Nation Exit Poll Results 2023

ಯಾವ ಪಕ್ಷಕ್ಕೆ ಎಷ್ಟು ಸ್ಥಾನ?

1. ಬಿಜೆಪಿ- 114

2. ಕಾಂಗ್ರೆಸ್‌ - 86

3. ಜೆಡಿಎಸ್‌ - 21

4. ಇತರೆ- 03

ಅಲ್ಲದೆ ನ್ಯೂಸ್‌ ನೇಷನ್‌ ಸಮೀಕ್ಷೆ ಪ್ರಕಾರ ಬಿಜೆಪಿ ಮುನ್ನಡೆ ಸಾಧಿಸಿದರೆ, ಇದನ್ನು ಹೊರತುಪಡಿಸಿ ಬಹುತೇಕ ನ್ಯೂಸ್‌ ಚಾನೆಲ್‌ಗಳ ಸಮೀಕ್ಷೇ ಪ್ರಕಾರ ಕಾಂಗ್ರೆಸ್‌ ಪ್ರಥಮ ಸ್ಥಾನದಲ್ಲಿದ್ದು, ಬಿಜೆಪಿ ಎರಡನೇ ಸ್ಥಾನ, ಜೆಡಿಎಸ್‌ ಮೂರನೇ ಸ್ಥಾನದಲ್ಲಿದೆ. ಈ ಸಮೀಕ್ಷೇಗಳಿಗೆ ಈಗಾಗಲೇ ಹಲವು ನಾಯಕರು ಪ್ರತಿಕ್ರಿಯೆ ನೀಡಿದ್ದು, ಕೆಲವರು ಸಮೀಕ್ಷೆಗಳ ಪರ ಮಾತನಾಡಿದರೆ ಇನ್ನು ಕೆಲವರು ಸಮೀಕ್ಷೆಗಳೇ ಅತಂತ್ರ ಎನ್ನುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ.

ಇದೀಗ ಸಮೀಕ್ಷೇಗಳು ಎಲ್ಲಾ ಸುದ್ದಿ ಸಂಸ್ಥೆಗಳಲ್ಲೂ ಬಿತ್ತರವಾಗುತ್ತಿದ್ದು, ಇನ್ನುಳಿದ ರಾಜಕೀಯ ನಾಯಕರು ಈ ಸಮೀಕ್ಷೆಗಳಿಗೆ ಹೇಗೆ ಪ್ರತಿಕ್ರಿಯೆ ನೀಡಲಿದ್ದಾರೆ ಎನ್ನುವುದನ್ನು ಕಾದುನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+