ಹೊಸ ವರ್ಷದ ಸಂಭ್ರಮ; ಅಬಕಾರಿ ಇಲಾಖೆಯ ಮಹತ್ವದ ಸೂಚನೆ
ಬೆಂಗಳೂರು, ಡಿಸೆಂಬರ್ 28; ಕರ್ನಾಟಕದಲ್ಲಿ ಹೊಸ ವರ್ಷವನ್ನು ಸ್ವಾಗತಿಸಲು ತಯಾರಿ ಮಾಡಿಕೊಳ್ಳಲಾಗುತ್ತಿದೆ. ಅಬಕಾರಿ ಇಲಾಖೆ ಮದ್ಯ ಮಾರಾಟದಿಂದ ಎಷ್ಟು ಆದಾಯ ಬರಲಿದೆ? ಎಂಬ ಲೆಕ್ಕಾಚಾರದಲ್ಲಿದೆ. ಇಲಾಖೆ ಡಿಸೆಂಬರ್ 31ರ ಅಂಗವಾಗಿ ಮಹತ್ವದ ಸೂಚನೆಯೊಂದನ್ನು ನೀಡಿದೆ.
ಕರ್ನಾಟಕದ ಪೊಲೀಸ್ ಇಲಾಖೆಯ ಜ್ಞಾಪನಾ ಪತ್ರವನ್ನು ಉಲ್ಲೇಖ ಮಾಡಿ ಅಬಕಾರಿ ಇಲಾಖೆ ಆಯುಕ್ತರ ಪರವಾಗಿ ರಾಜ್ಯದ ಎಲ್ಲಾ ಜಿಲ್ಲೆಯ ಅಬಕಾರಿ ಉಪ ಆಯುಕ್ತರಿಗೆ ಪತ್ರದ ಮೂಲಕ ಸೂಚನೆಯೊಂದನ್ನು ಕೊಡಲಾಗಿದೆ.

2023ನೇ ಡಿಸೆಂಬರ್ ತಿಂಗಳಲ್ಲಿ ಕ್ರಿಸ್‌ಮಸ್, 2024ನೇ ಹೊಸ ವರ್ಷದ ಆಚರಣೆಗಾಗಿ ಸಾಂದರ್ಭಿಕ ಸನ್ನದುಗಳನ್ನು ಮಂಜೂರು ಮಾಡಿರುವ ಸಂಬಂಧ ಸೂಕ್ತ ಭದ್ರತೆ ಹಾಗೂ ಮುಂಜಾಗ್ರತಾ ಕ್ರಮಗಳ ಕೈಗೊಳ್ಳುವ ಬಗ್ಗೆ ಎಂಬ ಪೊಲೀಸ್ ಇಲಾಖೆ ಜ್ಞಾಪನಾ ಪತ್ರವನ್ನು ಉಲ್ಲೇಖ ಮಾಡಲಾಗಿದೆ.
ಡಿಸೆಂಬರ್ ತಿಂಗಳಿನಲ್ಲಿ ಕ್ರಿಸ್‌ಮಸ್, 2024ನೇ ಹೊಸ ವರ್ಷದ ಆಚರಣೆಗಾಗಿ ಸಾಂದರ್ಭಿಕ ಸನ್ನದುಗಳನ್ನು ಮಂಜೂರು ಮಾಡಿರುವ ಸಂಬಂಧ ಸೂಕ್ತ ಭದ್ರತೆ ಹಾಗೂ ಮುಂಜಾಗ್ರತಾ ಕ್ರಮಗಳ ಕೈಗೊಳ್ಳುವ ಬಗ್ಗೆ ಪ್ರಸ್ತಾಪಿಸಲಾಗಿರುತ್ತದೆ. ಪತ್ರದಲ್ಲಿರುವ ಎಲ್ಲಾ ಅಂಶಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲು ಕೋರಲಾಗಿದೆ ಎಂದು ಹೇಳಿದೆ.
ಪತ್ರದ ವಿವರಗಳು; ರಾಜ್ಯದ ಎಲ್ಲಾ ಜಿಲ್ಲೆಯ ಅಬಕಾರಿ ಉಪ ಆಯುಕ್ತರುಗಳಿಗೆ ಅಬಕಾರಿ ಆಯುಕ್ತರ ಕಛೇರಿ 2ನೇ ಮಹಡಿ, ಟಿ.ಟಿ.ಎಂ.ಸಿ ಕಟ್ಟಡ 'ಎ' ಬ್ಲಾಕ್, ಬಿ.ಎಂ.ಟಿ.ಸಿ. ಶಾಂತಿನಗರ, ಬೆಂಗಳೂರು-27 ಇವರಿಂದ ಪತ್ರದ ಮೂಲಕ ಈ ಸೂಚನೆಗಳನ್ನು ನೀಡಲಾಗಿದೆ.
ಗೃಹ ಸಚಿವರ ಅಧ್ಯಕ್ಷತೆಯಲ್ಲಿ ದಿನಾಂಕ 22/12/2023ರಂದು ಹೊಸ ವರ್ಷದ ಆಚರಣೆಯ ಸಂಬಂಧಪಟ್ಟಂತ ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಡೆದ ಸಭೆಯಲ್ಲಿ 2023ನೇ ಡಿಸೆಂಬರ್ ತಿಂಗಳಲ್ಲಿ ಕ್ರಿಸ್‌ಮಸ್, 2024ನೇ ಹೊಸ ವರ್ಷದ ಆಚರಣೆಗಾಗಿ ಸಿಎಲ್-4, ಸಿಎಲ್-6ಎ, ಸಿಎಲ್-7, ಸಿಎಲ್-9 ಇತ್ಯಾದಿ ಸನ್ನದುದಾರರುಗಳಿಗೆ ಹಾಗೂ ಖಾಸಗಿ ವ್ಯಕ್ತಿಗಳು ಅಥವಾ ಸಂಘ ಸಂಸ್ಥೆಗಳಿಗೆ ವಿಶೇಷ ಸಾಂದರ್ಭಿಕ ಸನ್ನದುಗಳನ್ನು ಮಂಜೂರು ಮಾಡುವ ಸಲುವಾಗಿ ಪೂರ್ವಾನುಮತಿಯನ್ನು ಕೋರಿ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತಾವನೆಗಳು ಸ್ವೀಕೃತವಾಗುವ ಸಂಬಂಧ ಕಾನೂನು ಸುವ್ಯವಸ್ಥೆ ಹಾಗೂ ಸುರಕ್ಷತಾ ಕ್ರಮಗಳನ್ನು ಪಾಲಿಸುವ ಕುರಿತು ಸೂಚನೆಗಳನ್ನು ನೀಡಲಾಗಿದೆ.
ಅದರಂತೆ 2023ನೇ ಡಿಸೆಂಬರ್ ತಿಂಗಳಲ್ಲಿ ಕ್ರಿಸ್‌ಮಸ್, 2024ನೇ ಹೊಸ ವರ್ಷದ ಆಚರಣೆಗಾಗಿ ಮಾತ್ರ ಅನ್ವಯವಾಗುವಂತೆ ರಾತ್ರಿ 1ಗಂಟೆ ಮೀರದಂತೆ ಸಾಂದರ್ಭಿಕ ಸನ್ನದುಗಳನ್ನು (ಸಿಎಲ್-5) ಅನ್ನುಷರತ್ತಿಗೊಳಪಟ್ಟು ಮಂಜೂರು ಮಾಡಲು ಸೂಚಿಸಿದೆ ಎಂದು ಹೇಳಿದೆ.
* ಸಿಎಲ್-5 ಸನ್ನದುಗಳನ್ನು ಮಂಜೂರು ಮಾಡುವ ಸಂದರ್ಭದಲ್ಲಿ ಸನ್ನದು ಸ್ಥಳದಲ್ಲಿ ಮದ್ಯ/ ಬೀರ್ ಸೇವನೆಗೆ ಸ್ಥಳೀಯ ಪೊಲೀಸ್ ಅಧಿಕಾರಿಗಳಿಂದ ಅನುಮತಿ/ ನಿರಾಕ್ಷೇಪಣಾ ಪತ್ರವನ್ನು ಕಡ್ಡಾಯವಾಗಿ ಪಡೆಯತಕ್ಕದ್ದು, ಈ ಅನುಮತಿ/ ನಿರಾಕ್ಷೇಪಣಾ ಪತ್ರವು ಕೇವಲ ಕ್ರಿಸ್‌ಮಸ್ ಮತ್ತು 2024ರ ಹೊಸ ವರ್ಷದ ಆಚರಣೆ ಸಮಯದಲ್ಲಿ ಮಾತ್ರ ಅನ್ವಯವಾಗುತ್ತದೆ.
* ರೂಫ್ ಟಾಪ್ (Roof Top)ಗಳಿಗೆ ಸಿಎಲ್-5 ಸನ್ನದುಗಳನ್ನು ಮಂಜೂರು ಮಾಡಿದಲ್ಲಿ, ಅಂತಹ ಸನ್ನದುಗಳ ರೂಫ್ ಟಾಪ್ ಗಳಲ್ಲಿ ಯಾವುದೇ ಅಡುಗೆ ಕೋಣೆ ಕಾರ್ಯ ನಿರ್ವಹಿಸಬಾರದು ಹಾಗೂ ಯಾವುದೇ ಒಲೆಗಳು, ಸಿಲಿಂಡರ್ ಮತ್ತು ಬೆಂಕಿ ಉಪಕರಣಗಳು ಇರಬಾರದು.
* ರೂಫ್ ಟಾಪ್‌ಗಳಲ್ಲಿ ಯಾವುದೇ ಅಹಿತಕರ ಘಟನಗಳು ನಡೆಯದಂತೆ ಸೂಕ್ತ ಭದ್ರತೆಯನ್ನು ಕಲ್ಪಿಸಿರುವ ಬಗ್ಗೆ ಖಾತ್ರಿಪಡಿಸಿಕೊಂಡ ನಂತರವೇ ಸನ್ನದನ್ನು ಮಂಜೂರು ಮಾಡುವುದು.
* ಸಿಎಲ್-5 ಸನ್ನದು ಶುಲ್ಕ ಮತ್ತು ಹೆಚ್ಚುವರಿ ಸನ್ನದು ಶುಲ್ಕವನ್ನು ನಿಗಧಿಪಡಿಸಿರುವ ದರದಲ್ಲಿ ಕಡ್ಡಾಯವಾಗಿ ಪಾವತಿಸಬೇಕು.
* ಸಿಎಲ್-5 ಸನ್ನದುಗಳನ್ನು ಯಾವುದೇ ರೀತಿಯ ಅನಧಿಕೃತ ಮದ್ಯವನ್ನು ಸೇವಿಸಲು ಅವಕಾಶ ನೀಡತಕ್ಕದ್ದಲ್ಲ. ಕೆ.ಎಸ್.ಬಿ.ಸಿ.ಎಲ್, ಸಿಎಲ್-2 ಮತ್ತು ಸಿಎಲ್-11(ಸಿ) ಸನ್ನದುಗಳಿಂದ ಅಧಿಕೃತವಾಗಿ ಪಡೆದುಕೊಂಡ ಮದ್ಯ/ ಬೀರ್ ಅನ್ನು ಮಾತ್ರ ಬಳಸತಕ್ಕದ್ದು.
* ಸಿಎಲ್-5 ಸನ್ನದಿನಡಿಯಲ್ಲಿ ಪಡೆದ ಮದ್ಯ ಬಳಸಿದ ಮದ್ಯ ಹಾಗೂ ಉಳಿದ ಮದ್ಯದ ಶಿಲ್ಕುಗಳ ಬಗ್ಗೆ ಸೂಕ್ತ ಲೆಕ್ಕವನ್ನು ಇಟ್ಟು ಅದನ್ನು ಸಂಬಂಧಿಸಿದ ವಲಯ ಅಬಕಾರಿ ನಿರೀಕ್ಷಕರಿಗೆ ನೀಡತಕ್ಕದ್ದು.
* 2024ರ ಹೊಸ ವರ್ಷದ ಆಚರಣೆ ಸಂಬಂಧ ಮಂಜೂರು ಮಾಡುವ ಸಿಎಲ್-5 ಸನ್ನದುಗಳ ವಿವರಗಳನ್ನು ಒಳಗೊಂಡಂತೆ ವಿಶೇಷ ವರದಿಯನ್ನು ಅಬಕಾರಿ ಉಪ ಆಯುಕ್ತರುಗಳು ಕೇಂದ್ರ ಕಛೇರಿಗೆ ಸಲ್ಲಿಸುವುದು.
2024ರ ಹೊಸ ವರ್ಷದ ವರ್ಷಾಚರಣೆ ಸಂಬಂಧ ದಿನಾಂಕ 31/12/2023ರ ರಾತ್ರಿ ಎಲ್ಲಾ ವಲಯ, ಉಪ ವಿಭಾಗ ಮತ್ತು ಉಪ ಆಯುಕ್ತರ ಕಛೇರಿಯ ಕಾರ್ಯನಿರ್ವಾಹಕ ಅಧಿಕಾರಿ/ ಸಿಬ್ಬಂದಿಗಳು ಜನಜಂಗುಳಿ ಇರುವಂತಹ ಸನ್ನದುಗಳ ಮುಂದೆ ಯಾವುದೇ ಅಕ್ರಮಗಳು ಮತ್ತು ಅಹಿತಕರ ಘಟನೆಗಳು ನಡೆಯದಂತೆ ಕಾವಲು ಇಡತಕ್ಕದ್ದು.
ಅಕ್ರಮ ಮದ್ಯ ಮತ್ತು ಮಾದಕ ವಸ್ತುಗಳ ಸಂಗ್ರಹಣ, ಶೇಖರಣೆ ಮತ್ತು ಮಾರಾಟದ ಬಗ್ಗೆ ಗುಪ್ತ ಮಾಹಿತಿಯನ್ನು ಸಂಗ್ರಹಿಸಿ ಕಮ ವಹಿಸುವುದು. ಸದರಿ ದಿನದಂದು ರಸ್ತೆಗಸ್ತು/ ರಸ್ತೆಗಾವಲುಗಳನ್ನು ನಡೆಸಿ ಅಬಕಾರಿ ಅಕ್ರಮಗಳನ್ನು ತಡೆಗಟ್ಟುವುದು. ಒಟ್ಟಾರೆಯಾಗಿ ಜಾರಿ ಮತ್ತು ತನಿಖಾ ಕಾರ್ಯಗಳನ್ನು ಚುರುಕುಗೊಳಿಸಿ ಹೊಸವರ್ಷಾಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಲಾಗಿದೆ.
-
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ












Click it and Unblock the Notifications