New Blood Group: ಕರ್ನಾಟಕದ ಮಹಿಳೆಯೊಬ್ಬರಲ್ಲಿ ವಿಶ್ವದಲ್ಲೇ ಯಾರಲ್ಲೂ ಇಲ್ಲದ ರಕ್ತದ ಗುಂಪು ಪತ್ತೆ
New Blood Group: ವಿಶ್ವದಲ್ಲೇ ಇದುವರೆಗೂ ಯಾರಲ್ಲೂ ಪತ್ತೆ ಆಗದ ರಕ್ತದ ಗುಂಪು ಕರ್ನಾಟಕದ ಈ ಜಿಲ್ಲೆಯ ಮಹಿಳೆಯೊಬ್ಬರಲ್ಲಿ ಕಂಡುಂದಿದೆ. ಹಾಗಾದ್ರೆ ಇದು ಪತ್ತೆಯಾಗಿದ್ದು ಹೇಗೆ ಹಾಗೂ ಯಾವ ಗ್ರೂಪ್ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಸಾಮಾನ್ಯವಾಗಿ A-, A+, B+, B-, AB+, AB-, O+ and O- ಈ ಗುಂಪುಗಳ ರಕ್ತವನ್ನು ಹೊಂದಿರುವವರನ್ನು ನಾವು ನೋಡಿರುತ್ತೇವೆ. ಆದರೆ, ಇದೀಗ ಜಗತ್ತಿನಲ್ಲೇ ಯಾರಲ್ಲೂ ಇಲ್ಲದ ರಕ್ತದ ಗೊಂಪೊಂದನ್ನು ಕರ್ನಾಟಕದ ಮಹಿಳೆಯೊಬ್ಬರು ಹೊಂದಿದ್ದು, ಇದು ಭಾರೀ ಅಚ್ಚರಿಗೆ ಕಾರಣವಾಗಿದೆ. ಹಾಗಾದ್ರೆ ಆ ಮಹಿಳೆ ಯಾವ ಜಿಲ್ಲೆಯವರು ಎನ್ನುವ ಪ್ರಶ್ನೆ ಬಹುತೇಕರಲ್ಲಿ ಇದ್ದೇ ಇರುತ್ತದೆ. ಇದೆಲ್ಲದಕ್ಕೂ ಉತ್ತರ ಇಲ್ಲಿದೆ ಗಮನಿಸಿ.

ಹೃದಯ ಶಸ್ತ್ರ ಚಿಕಿತ್ಸೆದೆಂದು ಕೋಲಾರದ ಆಸ್ಪತ್ರೆಗೆ 38 ವರ್ಷದ ಮಹಿಳೆಯೊಬ್ಬರು ಕೆಲ ದಿನಗಳ ಹಿಂದೆಯಷ್ಟೇ ದಾಖಲು ಆಗಿದ್ದರು. ಈ ವೇಳೆ ಮಹಿಳೆಯ ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಬಳಿಕ ವೈದ್ಯರು ಬಂದ ಹೊಸ ರಕ್ತದ ಗುಂಪನ್ನು ಕಂಡು ವೈದ್ಯರು ಅಚ್ಚರಿಗೆ ಒಳಗಾದ ಘಟನೆ ನಡೆದಿದೆ.
ಮಹಿಳೆಯಲ್ಲಿ ಹೊಸ ರಕ್ತದ ಗುಂಪು: ಈ ಮಹಿಳೆಯ ರಕ್ತದ ಗುಂಪು ಎಲ್ಲರಲ್ಲೂ ಕಂಡುಬರುವ O Rh+ ಆಗಿತ್ತು. ಆದರೆ, ಈಗಾಗಲೇ ಇರುವ ಯಾವುದೇ O+ ರಕ್ತ ಅವರ ರಕ್ತಕ್ಕೆ ಹೊಂದಾಣಿಕೆ ಆಗುತ್ತಿರಲಿಲ್ಲ. ಆದ್ದರಿಂದ ಹೆಚ್ಚಿನ ಪರೀಕ್ಷೆಗಾಗಿ ಅವರ ರಕ್ತದ ಮಾದರಿಯನ್ನು ರೋಟರಿ ಬೆಂಗಳೂರು ಟಿಟಿಕೆ ಬ್ಲಡ್ ಸೆಂಟರ್‌ಲ್ಲಿ ಇರುವ ಅಡ್ವಾನ್ಸ್ಡ್ ಇಮ್ಯುನೊಹೆಮಟಾಲಜಿ ರೆಫರೆನ್ಸ್ ಲ್ಯಾಬೋರೇಟರಿಗೆ ಕಳುಹಿಸಲಾಗಿತ್ತು.
ಅತ್ಯಾಧುನಿಕ ಸೆರೋಲಾಜಿಕಲ್ ತಂತ್ರಜ್ಞಾನ ಬಳಕೆ ಮಾಡಿಕೊಂಡು ವೈದ್ಯರ ತಂಡ ಅವರ ರಕ್ತವನ್ನು ಪರೀಕ್ಷೆಗೆ ಒಳಪಡಿಸಿದೆ. ಈ ವೇಳೆ ಮಹಿಳೆಯ ರಕ್ತವು ಪ್ಯಾನ್ರಿಯಾಕ್ಟಿವ್ ಆಗಿರುವುದು ಕಂಡುಬಂದಿದ್ದು, ಇದು ಎಲ್ಲಾ ಪರೀಕ್ಷಾ ಮಾದರಿಗಳೊಂದಿಗೆ ಹೊಂದಿಕೆ ಆಗುವುದಿಲ್ಲ ಎಂದು ತಿಳಿದುಬಂದಿದೆ. ಇದು ಅಪರೂಪದ ಅಥವಾ ತಿಳಿದಿಲ್ಲದ ರಕ್ತದ ಪ್ರಕಾರದ ಸಂಭವನೀಯ ಪ್ರಕರಣ ಎಂದು ಗುರುತಿಸಲಾಗಿದೆ ಎಂದು ರೋಟರಿ ಬೆಂಗಳೂರು ಟಿಟಿಕೆ ರಕ್ತ ಕೇಂದ್ರದ ವೈದ್ಯ ಡಾ. ಅಂಕಿತ್ ಮಾಥುರ್ ಮಾಹಿತಿ ನೀಡಿದ್ದಾರೆ.
ವೈದ್ಯರು ಆ ಮಹಿಳೆಯ ಕುಟುಂಬದವರಲ್ಲಿ ಯಾರಲ್ಲಾದರೂ ಅದೇ ರೀತಿ ಗುಂಪಿನ ರಕ್ತ ಇದೆಯೇ ಎಂದು ತಿಳಿಯಲು ಪ್ರಯತ್ನಿಸಿದರು. ಅವರ ಕುಟುಂಬದ 20 ಸದಸ್ಯರಿಂದ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಯಿತು. ಆದರೆ, ಅವುಗಳಲ್ಲಿ ಯಾವುದೂ ಮಹಿಳೆಯ ರಕ್ತದೊಂದಿಗೆ ಹೊಂದಿಕೆ ಆಗಲಿಲ್ಲ ಎಂದೂ ಅಂಕಿತ್ ಮಾಥುರ್ ತಿಳಿಸಿದ್ದಾರೆ.
ಬಳಿಕ ಇದನ್ನು ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸಲಾಯಿತು. ವೈದ್ಯರು ಮತ್ತು ಕುಟುಂಬದವರ ಪ್ರಯತ್ನದಿಂದ, ರಕ್ತ ವರ್ಗಾವಣೆ ಅಗತ್ಯ ಇಲ್ಲದಂತೆಯೇ ಅವರ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು ಎಂದು ವರದಿಯಾಗಿದೆ. ಒಟ್ಟಿನಲ್ಲಿ ಎಂಟು ಎಂಟು ಎಂಟು ಗುಂಪಿನ ರಕ್ತವನ್ನು ಕಾಣಬಹುದಾಗೊತ್ತು. ಆದರೆ, ಇದೀಗ ಮಹಿಳೆಯಲ್ಲಿ ಇವುಗಳಿಗೆ ಹೋಲಿಕೆ ಆಗದ ಹೊಸದೊಂದು ರಕ್ತದ ಗುಂಪು ಕಂಡುಬಂದಿದ್ದು, ಇದು ಕರ್ನಾಟಕ ಮಾತ್ರ ಅಲ್ಲದೆ, ಭಾರತ, ವಿಶದೇಶಗಳ ವೈದ್ಯರನ್ನು ಅಚ್ಚರಿಗೆ ಒಳಗಾಗುವಂತೆ ಮಾಡಿದೆ.












Click it and Unblock the Notifications