ಕರ್ನಾಟಕದಲ್ಲಿ ಮತ್ತೊಂದು ರಾಜಕೀಯ ಪಕ್ಷ ಆರಂಭ

Posted By:
Subscribe to Oneindia Kannada

ಬೆಂಗಳೂರು, ಜೂನ್ 23 : ಕರ್ನಾಟಕದಲ್ಲಿ ಶೀಘ್ರದಲ್ಲೇ ನೂತನ ರಾಜಕೀಯ ಪಕ್ಷವೊಂದು ಸ್ಥಾಪನೆಯಾಗಲಿದೆ. 2018ರ ಚುನಾವಣೆಯಲ್ಲಿ ಸ್ಪರ್ಧಿಸುವ ಖಾತರಿ ಇಲ್ಲದಿದ್ದರೂ, ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪಪಕ್ಷವನ್ನು ಸ್ಥಾಪನೆ ಮಾಡಲಾಗುತ್ತಿದೆ.

ಯುವ ಜನರನ್ನು ರಾಜಕೀಯದತ್ತ ಸೆಳೆಯಲು ಈ ಪಕ್ಷವನ್ನು ಮೊದಲು ಹುಟ್ಟು ಹಾಕಲಾಗುತ್ತಿದೆ. ಮೇಲುಕೋಟೆ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ, ಕುಡುಚಿ ಶಾಸಕ ಪಿ.ರಾಜೀವ್, ಸಾಹಿತಿ ದೇವನೂರು ಮಹಾದೇವ, ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ ಮುಂತಾದವರು ಈ ಪಕ್ಷವನ್ನು ಮುನ್ನಡೆಸಲಿದ್ದಾರೆ. [ರಾಜಕೀಯದಲ್ಲಿ ಮಹಿಳೆಯರ ಪಾತ್ರ ಏನು? ಸಂವಾದ]

ks puttannaiah

ಆಮ್‌ ಆದ್ಮಿ ಪಕ್ಷದಿಂದ ಹೊರಬಂದಿರುವ ಯೋಗೇಂದ್ರ ಯಾದವ್‌ ಮತ್ತು ಪ್ರಶಾಂತ್‌ ಭೂಷಣ್‌ ಅವರು ಆರಂಭಿಸಿರುವ 'ಸ್ವರಾಜ್‌ ಅಭಿಯಾನ' ಈ ಪಕ್ಷಕ್ಕೆ ಬೆಂಬಲ ನೀಡಲಿದೆ. ಪ್ರಗತಿಪರರು, ಹೋರಾಟಗಾರರು ಈ ಪಕ್ಷದ ಭಾಗವಾಗಲಿದ್ದಾರೆ. [ಭಾರತದ ಪುರಾತನ ರಾಜಕೀಯ ಪಕ್ಷಕ್ಕೆ ಬರ್ಥ್ ಡೇ ವಿಷಸ್!]

ಜುಲೈ 10ರಂದು ಘೋಷಣೆ : ಧಾರವಾಡ ವಿದ್ಯಾವರ್ಧಕ ಸಂಘದಲ್ಲಿ ಜುಲೈ 9 ಮತ್ತು 10 ರಂದು 'ಭಾರತ ಮತ್ತು ಕರ್ನಾಟಕದ ಪ್ರಸ್ತುತ ಸಂದರ್ಭ ಜನ ಪರ್ಯಾಯದ ಸಾಧ್ಯತೆಗಳು' ಎಂಬ ವಿಷಯದ ಕುರಿತು ಚಿಂತನಾ ಸಮಾವೇಶ ನಡೆಯಲಿದೆ. [ರಾಜಕೀಯ ಪಕ್ಷಗಳ ಸ್ಥಿರಾಸ್ತಿ ವೆಬ್ ಸೈಟ್ ನಲ್ಲಿ ಬಹಿರಂಗಪಡಿಸಿ]

ಈ ಸಮಾವೇಶದಲ್ಲಿ ಪರ್ಯಾಯ ರಾಜಕೀಯ ಶಕ್ತಿ ಹುಟ್ಟು ಹಾಕುವ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಯವಕರು ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದೆ ಬಂದರೆ ಅವರಿಗೆ ಬೆಂಬಲವಾಗಿ ನಿಲ್ಲಲು ಪಕ್ಷವನ್ನು ಸ್ಥಾಪನೆ ಮಾಡಲಾಗುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
New political party to be launched in Karnataka. It will be led by Melkote MLA K.S.Puttannaiah, Kudachi MLA P.Rajeev, Dalit writer Devanuru Mahadeva and social activist S.R.Hiremath.
Please Wait while comments are loading...