ಕರ್ನಾಟಕಕ್ಕೆ ಮತ್ತೊಂದು ಪ್ರಮುಖ ಎಕ್ಸ್ ಪ್ರೆಸ್ ವೇ: ಯಾವೆಲ್ಲಾ ಪ್ರದೇಶಕ್ಕೆ ಲಾಭ ?
ಕೇಂದ್ರ ಹೆದ್ದಾರಿ ಸಚಿವಾಲಯವು ಕರ್ನಾಟಕಕ್ಕೆ ಮತ್ತೊಂದು ಭರ್ಜರಿ ಯೋಜನೆಯೊಂದನ್ನು ಪರಿಚಯಿಸಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರವನ್ನು ಬೆಸೆಯುವ ಪ್ರಮುಖ ಹೆದ್ದಾರಿ ಯೋಜನೆ ಇದಾಗಿದ್ದು. ಇದರಿಂದ ಕರ್ನಾಟಕಕ್ಕೆ ಬಂಪರ್ ಲಾಟರಿ ಅಂತಲೇ ಹೇಳಲಾಗುತ್ತಿದೆ. ಈ ಸಂಬಂಧ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಮಹತ್ವದ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ.
ನಿತಿನ್ ಗಡ್ಕರಿ ಅವರು ದಕ್ಷಿಣ ಭಾರತ ಹಾಗೂ ಉತ್ತರ ಭಾರತವನ್ನು ಬೆಸೆಯುವ ಹೊಸ ಎಕ್ಸ್‌ಪ್ರೆಸ್‌ವೇ ಹೆದ್ದಾರಿ ನಿರ್ಮಾಣದ ಬಗ್ಗೆ ಘೋಷಣೆ ಮಾಡಿದ್ದಾರೆ. ಬೆಂಗಳೂರು - ಪುಣೆ ಹಾಗೂ ಮುಂಬೈ ಮೂರು ಪ್ರಮುಖ ನಗರಗಳನ್ನು ಈ ಎಕ್ಸ್‌ಪ್ರೆಸ್‌ವೇ ಪ್ರವೇಶಿಸಲಿದೆ. ದೇಶದಲ್ಲಿ ಎಕ್ಸ್‌ಪ್ರೆಸ್ ವೇಗಳ ವಿಚಾರದಲ್ಲಿ ಅದ್ಭುತವಾದ ಕ್ರಾಂತಿಯೇ ನಡೆದಿದೆ. ಕರ್ನಾಟಕದಲ್ಲೂ ಕೇಂದ್ರ ಸರ್ಕಾರವು ಈಗಾಗಲೇ ಹಲವು ಪ್ರಮುಖ ಯೋಜನೆಗಳನ್ನು ಘೋಷಣೆ ಮಾಡಿದೆ.

ಇದರ ಸಾಲಿಗೆ ಮತ್ತೊಂದು ಯೋಜನೆ ಸೇರ್ಪಡೆಯಾಗಿದೆ. ಅಲ್ಲದೇ ಈ ಯೋಜನೆಯನ್ನು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ನಿರ್ಮಾಣ ಮಾಡುವುದಾಗಿ ಕೇಂದ್ರ ಸರ್ಕಾರವು ಹೇಳಿದೆ. ಈ ಹೊಸ ಹೆದ್ದಾರಿಯಿಂದ ಪ್ರಮುಖ ನಗರಗಳ ನಡುವಿನ ಸಂಚಾರ ಅವಧಿಯು ಬರೋಬ್ಬರಿ ಎರಡು ಪಟ್ಟು ಕಡಿಮೆಯಾಗಲಿದೆ ಎಂದು ಹೇಳಲಾಗಿದೆ.
ಈ ಮೊದಲು ಕರ್ನಾಟಕ ರಾಜಧಾನಿ ಬೆಂಗಳೂರಿನಿಂದ ಮಹಾರಾಷ್ಟ್ರದ ಪುಣೆಗೆ ಹೋಗಬಾಕದರೆ ಬರೋಬ್ಬರಿ 15 ಗಂಟೆಗಳ ಸಂಚಾರವಿದೆ ಎಂದು ಅಂದಾಜಿಸಲಾಗಿದೆ. ಅದೇ ಹೊಸ ಎಕ್ಸ್‌ಪ್ರೆಸ್‌ವೇ ನಿರ್ಮಾಣವಾದರೆ ಕೇವಲ ಗಂಟೆಗಳಲ್ಲಿ ಸಂಚಾರ ಸಾಧ್ಯವಾಗಲಿದೆ ಎಂದು ಹೇಳಲಾಗಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರ ಸಂಪರ್ಕಿಸುವ ಈ ಹೆದ್ದಾರಿ ರಸ್ತೆ ದೇಶದ ವಾಣಿಜ್ಯ ವ್ಯವಹಾರಗಳಿಗೆ ಸಹ ಮುಖ್ಯ ರಸ್ತೆ ಆಗಿದೆ ಎಂದು ನಿತಿನ್ ಗಡ್ಕರಿ ಅವರು ಹೇಳಿದ್ದಾರೆ.
ಇನ್ನು ಈಗಾಗಲೇ ಮಹಾರಾಷ್ಟ್ರದ ಪ್ರಮುಖ ನಗರಗಳಾದ ಮುಂಬೈ ಹಾಗೂ ಪುಣೆ ಸೇರಿದಂತೆ ಎಕ್ಸ್‌ಪ್ರೆಸ್ ವೇ ಹೆದ್ದಾರಿ ಕಾಮಗಾರಿಗಳು ಭರ್ಜರಿಯಾಗಿ ಸಾಗುತ್ತಿವೆ. ಇದರೊಂದಿಗೆ ಈ ಹೆದ್ದಾರಿಯನ್ನು ಬೆಂಗಳೂರಿನ ವರೆಗೆ ವಿಸ್ತರಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಈ ಮಾರ್ಗಗಳಲ್ಲಿ ವಾಣಿಜ್ಯ ಚಟುವಟಿಕೆ ಹಾಗೂ ವಾಹನಗಳ ಸಂಚಾರ ಸೇರಿದಂತೆ ಹಲವು ಕಾರಣಗಳಿಗೆ ಈ ಹೆದ್ದಾರಿ ಮಹತ್ವ ಪಡೆದುಕೊಂಡಿದೆ. ದೇಶದಲ್ಲೇ ಬೆಂಗಳೂರು - ಪುಣೆ ಹಾಗೂ ಮುಂಬೈ ನಗರಗಳ ನಡುವೆ ಭಾರೀ ಪೈಪೋಟಿ ಇದೆ.
ಒಂದೊಂದು ನಗರವು ಮತ್ತೊಂದು ನಗರಕ್ಕೆ ದೊಡ್ಡ ಮಟ್ಟದಲ್ಲಿಯೇ ಪೈಪೋಟಿ ನೀಡುತ್ತಿದೆ. ಇನ್ನು ಕೇಂದ್ರ ಸರ್ಕಾರದ ಮಹತ್ವದ ಮತ್ತು ಬೃಹತ್ ಯೋಜನೆಗೆ ಕೇಂದ್ರ ಸರ್ಕಾರವು ಬರೋಬ್ಬರಿ 50,000 ಕೋಟಿ ರೂಪಾಯಿ ಮೊತ್ತವನ್ನು ಹೂಡಿಕೆ ಮಾಡುವುದಾಗಿ ಹೇಳಲಾಗಿದೆ.
ಮುಂಬೈನ ಅಟಲ್ ಸುರಂಗ ಮಾರ್ಗದಿಂದ ಪುಣೆಯ ರಿಂಗ್ ರೋಡ್ ಮೂಲಕ ಸಾಗುವ ಈ ಹೆದ್ದಾರಿ ರಸ್ತೆಯು ಬೆಂಗಳೂರಿನ ವರೆಗೆ ವಿಸ್ತರಣೆಗೊಳ್ಳಲಿದೆ ಎಂದು ನಿತಿನ್ ಗಡ್ಕರಿ ಅವರು ಖಚಿತಪಡಿಸಿದ್ದಾರೆ. ಇದು ಕರ್ನಾಟಕದ ಮಟ್ಟಿಗೆ ಭರ್ಜರಿ ಗುಡ್‌ನ್ಯೂಸ್ ಎಂದೇ ಪರಿಗಣಿಸಲಾಗುತ್ತಿದೆ.












Click it and Unblock the Notifications