ಕರ್ನಾಟಕದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಶೇ 79ರಷ್ಟು ಕಡಿಮೆ!
ಬೆಂಗಳೂರು, ಜುಲೈ 12; ಕರ್ನಾಟಕದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಸರ್ಕಾರ ಅನ್‌ಲಾಕ್ ಘೋಷಣೆ ಮಾಡಿದೆ. ಕಳೆದ 4 ವಾರದಲ್ಲಿ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಶೇ 79ರಷ್ಟು ಕಡಿಮೆಯಾಗಿದೆ.
ಭಾನುವಾರದ ಹೆಲ್ತ್ ಬುಲೆಟಿನ್ ಪ್ರಕಾರ 1978 ಹೊಸ ಪ್ರಕರಣಗಳು ರಾಜ್ಯದಲ್ಲಿ ದಾಖಲಾಗಿವೆ. ಇವುಗಳಲ್ಲಿ 433 ಪ್ರಕರಣಗಳು ಬೆಂಗಳೂರು ನಗರದಲ್ಲಿ ದಾಖಲಾಗಿದೆ. ನಾಲ್ಕು ವಾರದ ಹಿಂದೆ ರಾಜ್ಯದಲ್ಲಿ ಪ್ರತಿದಿನ ಸರಾಸರಿ 5,900 ಪ್ರಕರಣ ದಾಖಲಾಗುತ್ತಿತ್ತು.
ಕಳೆದ ಒಂದು ವಾರಕ್ಕೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ಪ್ರತಿದಿನ ಸರಾಸರಿ 2,552 ಹೊಸ ಪ್ರಕರಣ ದಾಖಲಾಗುತ್ತಿದೆ. ಹೊಸ ಪ್ರಕರಣ ಮಾತ್ರವಲ್ಲ ಕೋವಿಡ್ ಪರೀಕ್ಷೆ ಸಂಖ್ಯೆಯೂ ಕಡಿಮೆ ಆಗುತ್ತಿದೆ. ಕಳೆದ ವಾರ ಸರಾಸರಿ 1.49 ಲಕ್ಷ ಪರೀಕ್ಷೆಗಳನ್ನು ಮಾಡಲಾಗಿದೆ.
ಭಾನುವಾರದ ಹೆಲ್ತ್ ಬುಲೆಟಿನ್ ಪ್ರಕಾರ ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 36737. ಒಟ್ಟು ಗುಣಮುಖಗೊಂಡವರು 2798703. ರಾಜ್ಯದಲ್ಲಿನ ಒಟ್ಟು ಪ್ರಕರಣಗಳ ಸಂಖ್ಯೆ 2871298. ಒಟ್ಟು ಮೃತಪಟ್ಟವರು 35835.

ಯಾವ-ಯಾವ ಜಿಲ್ಲೆಗಳು
ಹೆಲ್ತ್ ಬುಲೆಟಿನ್ ಪ್ರಕಾರ ಬೆಂಗಳೂರು ಹೊರತುಪಡಿಸಿದರೆ ಮೈಸೂರು (261), ದಕ್ಷಿಣ ಕನ್ನಡ (195), ಹಾಸನ (132), ಶಿವಮೊಗ್ಗ (124) ಹೊಸ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಹೊಸದಾಗಿ 2,326 ಜನರು ಡಿಸ್ಚಾರ್ಜ್ ಆಗಿದ್ದಾರೆ.

ಸಾವಿನ ಸಂಖ್ಯೆಯೂ ಇಳಿಮುಖ
ಭಾನುವಾರದ ಹೆಲ್ತ್ ಬುಲೆಟಿನ್ ಪ್ರಕಾರ ರಾಜ್ಯದಲ್ಲಿ 56 ಜನರು ಮೃತಪಟ್ಟಿದ್ದಾರೆ. ಇವುಗಳಲ್ಲಿ 6 ಸಾವು ಮೇ ತಿಂಗಳ ಕೊನೆ ಮತ್ತು ಜೂನ್ 8ರ ನಡುವೆ ಮೃತಪಟ್ಟವರು. ರಾಜ್ಯದಲ್ಲಿ ಹೊಸ ಕೋವಿಡ್ ಪ್ರಕರಣ ಮಾತ್ರವಲ್ಲ ಸಾವಿನ ಸಂಖ್ಯೆ ಸಹ ಕಡಿಮೆಯಾಗಿದೆ.

ಕಡಿಮೆಯಾದ ಯುವಕರ ಸಾವು
ಕೋವಿಡ್ 2ನೇ ಅಲೆಯಲ್ಲಿ ಯುವ ಜನರೇ ಹೆಚ್ಚಾಗಿ ಸಾವನ್ನಪ್ಪುತ್ತಿದ್ದರು. ಇದು ಆತಂಕಕ್ಕೆ ಸಹ ಕಾರಣವಾಗಿತ್ತು. ಭಾನುವಾರ ಮೃತಪಟ್ಟವರಲ್ಲಿ 18 ವರ್ಷದ ಯುವತಿಯೊಬ್ಬಳು ಕೋಲಾರದಲ್ಲಿ ಮೃತಪಟ್ಟಿದ್ದರೆ. 88 ವರ್ಷದ ಮಹಿಳೆ ಬೆಂಗಳೂರು ಗ್ರಾಮಾಂತರದಲ್ಲಿ ಮೃತಪಟ್ಟಿದ್ದಾರೆ.
Recommended Video

ಕೋವಿಡ್ ಲಸಿಕೆ ಮಾಹಿತಿ
ಭಾನುವಾರ ರಾಜ್ಯದಲ್ಲಿ 1.34 ಲಕ್ಷ ಡೋಸ್ ಲಸಿಕೆಯನ್ನು ನೀಡಲಾಗಿದೆ. ಇವುಗಳಲ್ಲಿ 85,779 ಮೊದಲ ಡೋಸ್ ಮತ್ತು 48,953 2ನೇ ಡೋಸ್. ಮೊದಲ ಡೋಸ್ ಲಸಿಕೆ ನೀಡುವ ಸಂಖ್ಯೆ ರಾಜ್ಯದಲ್ಲಿ ಏರಿಕೆಯಾಗಿದೆ. ಲಸಿಕೆ ನೀಡುವುದರಲ್ಲಿಯೂ ಬೆಂಗಳೂರು ನಗರ ಜಿಲ್ಲೆ ಮೊದಲ ಸ್ಥಾನದಲ್ಲಿದೆ.












Click it and Unblock the Notifications