ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈದ್ಯಕೀಯ, ದಂತ ವೈದ್ಯಕೀಯ ಶುಲ್ಕ ನಿಗದಿಗೆ ಸಮಿತಿ ರಚನೆ

By Gururaj
|
Google Oneindia Kannada News

ಬೆಂಗಳೂರು, ಜುಲೈ 06 : ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಶುಲ್ಕಗಳನ್ನು ಹೆಚ್ಚಳ ಮಾಡುವ ಕುರಿತು ಅಂತಿಮ ನಿರ್ಧಾರಕ್ಕೆ ಬರಲು ಸರ್ಕಾರ ವಿಫಲವಾಗಿದೆ. ನಿವೃತ್ತ ನ್ಯಾಯಮೂರ್ತಿ ಡಿ.ವಿ.ಶೈಲೇಂದ್ರ ಕುಮಾರ್ ನೇತೃತ್ವದ ಸಮಿತಿ ಪ್ರತಿ ವರ್ಷ ಶೇ 8ರಷ್ಟು ಶುಲ್ಕ ಹೆಚ್ಚಳ ಮಾಡಲು ಶಿಫಾರಸು ಮಾಡಿತ್ತು.

ಖಾಸಗಿ ಕಾಲೇಜುಗಳು ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳು ಹಲವು ಸುತ್ತಿನ ಸಭೆಗಳನ್ನು ನಡೆಸಿದರೂ ಶುಲ್ಕ ಹೆಚ್ಚಳದ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿಲ್ಲ. ಆದ್ದರಿಂದ, ಸರ್ಕಾರ ಮತ್ತೊಂದು ಸಮಿತಿಯನ್ನು ರಚನೆ ಮಾಡಲಿದೆ.

ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳ ಶುಲ್ಕ ಶೇ.10ರಷ್ಟು ಹೆಚ್ಚಳಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳ ಶುಲ್ಕ ಶೇ.10ರಷ್ಟು ಹೆಚ್ಚಳ

ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗುತ್ತದೆ. ಪ್ರತಿವರ್ಷ ಶುಲ್ಕಗಳ ಪರಿಷ್ಕರಣೆ, ಸೀಟುಗಳ ಹಂಚಿಕೆ, ಹೊಸ ಪಠ್ಯಗಳ ಪರಿಚಯ ಮುಂತಾದ ವಿಚಾರಗಳ ಕುರಿತು ವರದಿ ಸಿದ್ಧಪಡಿಸಲಿದೆ.

New committee to look into fee structure of medical course

ಖಾಸಗಿ ಕಾಲೇಜುಗಳು ಮತ್ತು ಸರ್ಕಾರಿ ಕಾಲೇಜುಗಳ ಪ್ರತಿನಿಧಿಗಳು ಈ ಸಮಿತಿ ಸದಸ್ಯರಾಗಿರುತ್ತಾರೆ. ಸಮಿತಿ ಮೊದಲು ಖಾಸಗಿ ಕಾಲೇಜುಗಳ ಜೊತೆ ಮಾತುಕತೆ ನಡೆಸಲಿ ಎಂದು ಕಾಲೇಜುಗಳು ಬೇಡಿಕೆ ಮುಂದಿಟ್ಟಿವೆ.

ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಶುಲ್ಕಗಳನ್ನು ಹೆಚ್ಚಿಸುವ ಕುರಿತು ವರದಿ ನೀಡಿಲು ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಡಿ.ವಿ.ಶೈಲೇಂದ್ರ ಕುಮಾರ್ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿತ್ತು. ಸಮಿತಿ ಪ್ರತಿ ವರ್ಷ ಶೇ 8ರಷ್ಟು ಶುಲ್ಕವನ್ನು ಹೆಚ್ಚಳ ಮಾಡಬಹುದು ಎಂದು ಶಿಫಾರಸು ಮಾಡಿತ್ತು.

ಶೈಲೇಂದ್ರ ಕುಮಾರ್ ಅವರು ನೀಡಿದ ವರದಿಯನ್ನು ಖಾಸಗಿ ಕಾಲೇಜುಗಳು ಒಪ್ಪಿಕೊಂಡಿವೆ. ಪ್ರತಿ ವರ್ಷ ಶೇ 8ರಷ್ಟು ಶುಲ್ಕ ಹೆಚ್ಚಳ ಮಾಡಲು ಅವು ಸಿದ್ಧವಿದೆ. ಆದರೆ, ಸರ್ಕಾರ ರಚನೆ ಮಾಡುವ ಹೊಸ ಸಮಿತಿ ಯಾವ ಶಿಫಾರಸು ಮಾಡಲಿದೆ? ಎಂದು ಕಾದು ನೋಡಬೇಕು.

English summary
Karnataka government is all set to form another committee to look into the issue of fee fixation in medical and dental colleges across the state. A committee headed by retired high court judge D.V.Shylendra Kumar is already looking into the issue and it recommends 8 % fee hike annually.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X