• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೇಶವನ್ನು ಕಟ್ಟುವಲ್ಲಿ ನೆಹರೂ ಅವರ ಪಾತ್ರ ಹಿರಿದು: ಸಿಎಂ ಬೊಮ್ಮಾಯಿ

|
Google Oneindia Kannada News

ಬೆಂಗಳೂರು ನವೆಂಬರ್ 14: ದೇಶವನ್ನು ಕಟ್ಟುವಲ್ಲಿ ನೆಹರೂ ಅವರ ಪಾತ್ರ ಹಿರಿದಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಇಂದು ಮಾಜಿ ಪ್ರಧಾನಿ ದಿವಂಗತ ಪಂಡಿತ್ ಜವಾಹರಲಾಲ್ ನೆಹರು ಅವರ 132ನೇ ವರ್ಷದ ಜನ್ಮದಿನಾಚರಣೆ ಅಂಗವಾಗಿ ನೆಹರು ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ಅವರು ಸ್ವತಂತ್ರ ಹೋರಾಟದಲ್ಲಿ ಹಾಗೂ ಸ್ವಾತಂತ್ರ್ಯದ ನಂತರ ದೇಶವನ್ನು ಕಟ್ಟುವಲ್ಲಿ ಜವಾಹರ್ ಲಾಲ್ ನೆಹರೂ ಅವರ ಪಾತ್ರ ಹಿರಿದು ಎಂದು ಹೇಳಿದರು.

ಇಂದು ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಜನ್ಮ ದಿನಾಚರಣೆ ಅಂಗವಾಗಿ ಪ್ರತಿಮೆಗೆ ನಮನ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಮೊದಲನೇ ಪ್ರಧಾನಮಂತ್ರಿಯಾಗಿ ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೆ ತರುವ ಮುಖಾಂತರ ಭಾರತ ಸ್ವಾತಂತ್ರ್ಯದ ನಂತರದ ತನ್ನ ಗುರಿಗಳನ್ನು ಮುಟ್ಟಲು ಭದ್ರ ಅಡಿಪಾಯ ಹಾಕಿದ ಒಬ್ಬ ಶ್ರೇಷ್ಠ ನಾಯಕ. ವಿಶೇಷವಾಗಿ ಭಾರತವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವಲ್ಲಿಯೂ ಅವರ ಪಾತ್ರ ಮಹತ್ವದ್ದು ಎಂದರು. ಮಕ್ಕಳ ಮೇಲಿನ ಅವರ ವಿಶೇಷ ಪ್ರೀತಿಯಿಂದಾಗಿ ಚಾಚಾ ನೆಹರೂ ಎಂಬ ಬಿರಿದು ಬಂದಿದೆ. ಅವರ ಹೆಸರಿನ ಹಲವಾರು ಸಂಸ್ಥೆಗಳು ಭಾರತದ ಉನ್ನತೀಕರಣಕ್ಕೆ ಕಾರಣವಾಗಿದ್ದು, ದೇಶದ ಅಭಿವೃದ್ಧಿಗೆ ಕೆಲಸ ಮಾಡುತ್ತಿರುವುದು ಗಮನಾರ್ಹ ಎಂದರು. ಅವರಿಗೆ ನಮನ ಸಲ್ಲಿಸುವ ಮೂಲಕ ಮತ್ತೊಮ್ಮೆ ದೇಶ ಕಟ್ಟುವ ಕಾರ್ಯಕ್ಕೆ ನಮ್ಮನ್ನು ಸಜ್ಜುಗೊಳಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಉಪಸ್ಥಿತರಿದ್ದರು.

ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನದಂದು ಅವರಿಗೆ ಗೌರವ ಸಲ್ಲಿಸಲು ನವೆಂಬರ್ 14 ಅನ್ನು ಮಕ್ಕಳ ದಿನಾಚರಣೆ ಎಂದು ಆಚರಿಸಲಾಗುತ್ತದೆ. 1889 ರಲ್ಲಿ ಜನಿಸಿದ ಜವಹರಲಾಲ್ ನೆಹರೂ ಅವರನ್ನು ಮಕ್ಕಳು ಪ್ರೀತಿಯಿಂದ ಚಾಚಾ ನೆಹರು ಎಂದು ಕರೆಯುತ್ತಿದ್ದರು. ಮಕ್ಕಳ ಮೇಲೆ ಅವರಿಗೆ ವಿಶೇಷವಾದ ಪ್ರೀತಿ, ಕಾಳಜಿ. ಮಕ್ಕಳಿಗಾಗಿಯೇ ಸ್ಥಳೀಯ ಸಿನಿಮಾ ಮಾಡಲು ಮತ್ತು ಪ್ರತಿ ಮಕ್ಕಳ ಮನರಂಜನೆಯ ಹಕ್ಕನ್ನು ಉತ್ತೇಜಿಸಲು ನೆಹರು 1955 ರಲ್ಲಿ ಚಿಲ್ಡ್ರನ್ಸ್ ಫಿಲ್ಮ್ ಸೊಸೈಟಿ ಆಫ್ ಇಂಡಿಯಾವನ್ನು ಸ್ಥಾಪಿಸಿದರು.

ಮಕ್ಕಳ ಮೇಲಿನ ಅವರ ಪ್ರೀತಿಯ ಜೊತೆಗೆ, ರಾಷ್ಟ್ರವನ್ನು ನಿರ್ಮಿಸಲು ಅವರು ನೀಡಿದ ಕೊಡುಗೆಗಾಗಿ ನೆಹರೂ ಅವರನ್ನು ಗೌರವಿಸಲು ಅವರ ಜನ್ಮ ವಾರ್ಷಿಕೋತ್ಸವದ ದಿನವನ್ನು ಸಹ ಈ ದಿನ ಆಚರಿಸಲಾಗುತ್ತದೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ನೆಹರೂ ಅವರನ್ನು ನೆನದು ಮಕ್ಕಳ ದಿನಾಚರಣೆಗೆ ಶುಭಕೋರಿದ್ದಾರೆ. ಇದಲ್ಲೆದೆ ರಾಜ್ಯದ ವಿವಿಧ ನಾಯಕರು ಟ್ವೀಟರ್ ನಲ್ಲಿ ಮಕ್ಕಳ ದಿನಾಚರಣೆ ಶುಭಾಶಯ ಕೋರಿದ್ದಾರೆ.

ದೇಶದ ಪ್ರಥಮ ಪ್ರಧಾನಮಂತ್ರಿ ಪಂಡಿತ್ ಜವಾಹರಲಾಲ್ ನೆಹರು ಅವರ ಜಯಂತಿಯಂದು ಅವರಿಗೆ ಗೌರವಪೂರ್ವಕ ಪ್ರಣಾಮಗಳು. ಅವರ ಸಂಸ್ಮರಣೆಗಳ ಜೊತೆಗೆ ನಾಡಿನ ಎಲ್ಲ ಮಕ್ಕಳಿಗೂ ಮಕ್ಕಳ ದಿನಾಚರಣೆಯ ಪ್ರೀತಿಪೂರ್ವಕ ಶುಭಕಾಮನೆಗಳು ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.

ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಂದು ನೆಹರೂ ಅವರನ್ನು ನೆನೆದಿದ್ದು ಅವರ ಜನ್ಮಜಯಂತಿಗೆ ಗೌರವ ನಮನ ಸಲ್ಲಿಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿಯವರು ನೆಹರೂ ಅವರನ್ನು ನೆನದು ಮಕ್ಕಳ ದಿನಾಚರಣೆಗೆ ಶುಭಕೋರಿದ್ದಾರೆ.

ಸ್ವಾತಂತ್ರ್ಯ ಚಳವಳಿಯ ಮುಂಚೂಣಿ ನಾಯಕ, ಪ್ರಥಮ ಪ್ರಧಾನಮಂತ್ರಿ, ಭಾರತರತ್ನ ಪಂಡಿತ್ ಜವಾಹರ್ ಲಾಲ್ ನೆಹರು ಅವರ ಜಯಂತಿಯಂದು, ಅವರ ಸಂಸ್ಮರಣೆಗಳ ಜೊತೆಗೆ ಎಲ್ಲ ಮಕ್ಕಳಿಗೆ ಮಕ್ಕಳ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಸದೃಢ, ಸಶಕ್ತ, ಸಮೃದ್ಧ ಭಾರತಕ್ಕಾಗಿ ಮಕ್ಕಳ ಸರ್ವತೋಮುಖ ಬೆಳವಣಿಗೆ ನಮ್ಮೆಲ್ಲರ ಹೊಣೆಗಾರಿಕೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಆಶಿಸಿದ್ದಾರೆ.

ಎಲ್ಲಾ ಚಿಕ್ಕ ಮಕ್ಕಳಿಗೆ ಹೃತ್ಪೂರ್ವಕ ಮಕ್ಕಳ ದಿನಾಚರಣೆಯ ಶುಭಾಶಯಗಳು! ಮಕ್ಕಳಿಗೆ ಆ ಮಾಡುವುದಕ್ಕಿಂದ ಶಿಕ್ಷಣ ನೀಡಿ ದೇಶದ ಆಸ್ತಿಯಾಗುವಂತೆ ಮಾಡೋಣ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಟ್ವೀಟ್ ಮಾಡಿದ್ದಾರೆ.

   ರೇಡಿಯೋದಿಂದ ರಾಜಕೀಯದ ವರೆಗೂ ಲಾವಣ್ಯ ನಡೆದು ಬಂದ ಹಾದಿ | Oneindia Kannada

   English summary
   Chief Minister Basavaraja Bommai said that Nehru's role in building the country was strong.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   Desktop Bottom Promotion