ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

NEET PG 2022 ಕೌನ್ಸೆಲಿಂಗ್: 2ನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ

|
Google Oneindia Kannada News

ಬೆಂಗಳೂರು, ನವೆಂಬರ್ 17: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ಸ್ನಾತಕೋತ್ತರ) 2022 (ನೀಟ್‌ಪಿಜಿ 2022) ಕೌನ್ಸೆಲಿಂಗ್ ಎರಡನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಕೆಇಎ ಅಧಿಕೃತ ಸೈಟ್ kea.kar.nic.in ನಲ್ಲಿ ಸಂಪೂರ್ಣ ಮಾಹಿತಿಯನ್ನು ಪರಿಶೀಲಿಸಬಹುದು.

ಅಭ್ಯರ್ಥಿಗಳು ಸೀಟು ಹಂಚಿಕೆಗಳ ಮಾಹಿತಿ, ಫಲಿತಾಂಶಕ್ಕಾಗಿ ರಾಜ್ಯ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ ಲಾಗಿನ್ ಆಗಬೇಕು. ಅದಕ್ಕಾಗಿ ಅಭ್ಯರ್ಥಿಗಳು ನೋಂದಣಿ ಸಂಖ್ಯೆ, ಜನ್ಮದಿನಾಂಕದ ವಿವರ ನಮೂದಿಸಬೇಕು.

ಸುಪ್ರೀಂಕೋರ್ಟ್ ನೀಡಿರುವ ಆದೇಶಕ್ಕೆ ಅನುಗುಣವಾಗಿ ಕರ್ನಾಟಕ ನೀಟ್ ಪಿಜಿ 2022 ಕೌನ್ಸೆಲಿಂಗ್‌ಗೆ ಸಂಬಂಧಿಸಿದ ಮಾಹಿತಿಯನ್ನು, ಗುರುವಾರ ಸಂಜೆ 5 ಗಂಟೆಗೆ ಡಿಎಂಇ ಮೂಲಕ ಎಂಸಿಸಿಗೆ ರವಾನಿಸಲಾಗುವುದು ಎಂದು ಕರ್ನಾಟಕ ರಾಜ್ಯ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ. ಅಭ್ಯರ್ಥಿಗಳು ಒಂದು ವೇಳೆ ಎರಡನೇ ಸುತ್ತಿನ ಸೀಟು ಹಂಚಿಕೆಗಳನ್ನು ರದ್ದು ಪಡಿಸಲು ಇಚ್ಛಿಸಿದಲ್ಲಿ ದಂಡದ ಶುಲ್ಕ ಭರಿಸಿ ಮಧ್ಯಾಹ್ನ 3ಗಂಟೆಯೊಳಗೆ ರದ್ದುಗೊಳಿಸಬೇಕು.

NEET PG 2022 ಕೌನ್ಸೆಲಿಂಗ್: 2ನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ

ಇದಲ್ಲದೇ ಕರ್ನಾಟಕ ರಾಜ್ಯ ಪರೀಕ್ಷಾ ಪ್ರಾಧಿಕಾರವು ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ಪ್ರವಿಪೂರ್ವ) 2022 ನೀಟ್ ಯುಜಿ ಅಭ್ಯರ್ಥಿಗಳಿಗೆ ಮೊದಲ ಸುತ್ತಿನ ಸೀಟು ಹಂಚಿಕೆ ಮಾಹಿತಿಯನ್ನು ಶುಲ್ಕ ಸಹಿತ ನೋಡುವ ಅವಧಿ ವಿಸ್ತರಿಸಿದೆ.

ನವೆಂಬರ್ 15ರವರೆಗೆ ಮಾತ್ರ ಅವಕಾಶ ಇತ್ತು. ಅದನ್ನು ನವೆಂಬರ್ 17ರ ಸಂಜೆ 6ಗಂಟೆವರೆಗೆ ವಿಸ್ತರಿಸಿದೆ. ಅಭ್ಯರ್ಥಿಗಳು ಸೀಟು ಹಂಚಿಕೆಯ ಮಾಹಿತಿ ಪಡೆಯಲು ಇಂದು ಸಂಜೆ 4 ಗಂಟೆಯೊಳಗೆ ಶುಲ್ಕವನ್ನು ಪಾವತಿಸಿರಬೇಕು. ಶೀಘ್ರವೇ ಎರಡನೇ ಸುತ್ತಿನ ಸೀಟು ಹಂಚಿಕೆ ಬಿಡಲಾಗುವುದು ಎಂದು ಪ್ರಾಧಿಕಾರಿ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಕೆಇಎ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ಕೊಡಬಹುದು.

English summary
National Eligibility and Entrance Test Postgraduate 2022 2st Round Counselling Seat Allotment data released by Karnataka Examination Authority (KEA).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X