ನಕ್ಸಲರ ಶರಣಾಗತಿ: ಶಸ್ತ್ರಾಸ್ತ ಸಲ್ಲಿಸಿಲ್ಲ, ಇನ್ನೂ ನಕ್ಸಲ್ ಮುಕ್ತವಾಗದ ಕರ್ನಾಟಕ ಕಾರಣವೇನು ?
ರಾಜ್ಯದಲ್ಲಿ ಆರು ಜನ ನಕ್ಸಲರು ಶರಣಾಗುವುದರ ಮೂಲಕ ಕರ್ನಾಟಕದಲ್ಲಿ ನಕ್ಸಲಿಸಂಗೆ ಕಡಿವಾಣ ಬಿದ್ದಿದೆ ಎಂದು ಹೇಳಲಾಗುತ್ತಿದೆ. ಆದರೆ ಮೋಸ್ಟ್ ವಾಂಟೆಡ್ ನಕ್ಸಲರು ಶರಣಾಗತರಾದರೂ ಅವರ ಬಳಿ ಇದ್ದ ಶಸ್ತ್ರಾಸ್ತ್ರಗಳು ಎಲ್ಲಿ ಇಟ್ಟಿದ್ದಾರೆ. ಶರಣಾಗುವಾಗ ಯಾವ ಕಾರಣಕ್ಕೆ ಶಸ್ತ್ರಾಸ್ತ್ರ ಸಲ್ಲಿಕೆ ಮಾಡಿಲ್ಲ ಎನ್ನುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಕರ್ನಾಟಕದಲ್ಲಿ ಆರು ಜನ ನಕ್ಸಲರು ಶರಣಾಗುವ ಮೂಲಕ ಹೊಸ ಅಧ್ಯಾಯ ಹಾಗೂ ನಕ್ಸಲರ ಹಾವಳಿ ಮುಕ್ತಾಯವಾಗುತ್ತಿದೆ ಎಂದು ಹೇಳಲಾಗುತ್ತಿದ್ದರೂ. ಹಲವು ಪ್ರಶ್ನೆಗಳು ಇನ್ನೂ ಉಳಿದಿವೆ. ಅದರಲ್ಲಿ ಮುಖ್ಯವಾಗಿ ನಕ್ಸಲರ ಬಳಿ ಇದ್ದ ಶಸ್ತ್ರಾಸ್ತ್ರ ಎಲ್ಲಿ ಎನ್ನುವುದು ಒಂದು ಹಾಗೂ ಇನ್ನೊಬ್ಬ ಮೋಸ್ಟ್ ವಾಂಟೆಡ್ ನಕ್ಸಲ್ ಇನ್ನೂ ಶರಣಾಗದೆ ಇರುವುದು ಸೇರಿದಂತೆ ಹಲವು ವಿಷಯಗಳು ಚರ್ಚೆಯಾಗುತ್ತಿವೆ.
ಶಸ್ತ್ರಾಸ್ತ ಸಲ್ಲಿಕೆ ಮಾಡಿಲ್ಲ: ಇನ್ನು ನಕ್ಸಲರು ಶರಣಾದರೂ ಸಹ ಅವರ ಬಳಿ ಇರಿಸಿಕೊಂಡಿದ್ದ ಶಸ್ತ್ರಾಸ್ತಗಳನ್ನು ಸಲ್ಲಿಕೆ ಮಾಡದೆ ಇರುವುದು ಹಲವು ಅನುಮಾನಗಳನ್ನು ಸೃಷ್ಟಿ ಮಾಡಿದೆ. ವಾಂಟೆಡ್ ನಕ್ಸಲರಾದ ಶೃಂಗೇರಿ ತಾಲ್ಲೂಕಿನ ಮುಂಡುಗಾರು ಗ್ರಾಮದ ಲತಾ, ಕಳಸ ತಾಲ್ಲೂಕಿನ ಬಾಳೆಹೊಳೆ ಗ್ರಾಮದ ವನಜಾಕ್ಷಿ, ದಕ್ಷಿಣ ಕನ್ನಡ ಜಿಲ್ಲೆ ಕುಂತಲೂರು ಮೂಲದ ಸುಂದರಿ, ರಾಯಚೂರಿನ ಮಾರಪ್ಪ ಅರೋಳಿ, ವಸಂತ ಹಾಗೂ ಎನ್.ಜೀಶಾ ಅವರು ನಕ್ಸಲ್ ಹೋರಟಕ್ಕೆ ವಿದಾಯ ಹೇಳಿ ಶರಣಾಗಿದ್ದರು. ಈ ಬೆಳವಣಿಗೆ ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ನಕ್ಸಲರು ಶರಣಾಗಿ ಹೊಸ ಜೀವನ ಕಟ್ಟಿಕೊಳ್ಳಲು ಮುಂದಾಗಿರುವುದಕ್ಕೆ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದ್ದರೂ, ಅವರ ಬಳಿ ಇರಿಸಿಕೊಂಡಿದ್ದ ಶಸ್ತ್ರಾಸ್ತ ಎಲ್ಲಿ ಹೋಗಿದೆ ಏನಾಯಿತು ಎನ್ನುವ ವಿಷಯ ಗಂಭೀರ ಚರ್ಚೆಗೆ ಒಳಪಟ್ಟಿದ್ದು. ಈ ನಿಟ್ಟಿನಲ್ಲಿ ಕರ್ನಾಟಕ ಪೊಲೀಸರು ಅಲರ್ಟ್ ಆಗಿದ್ದಾರೆ.

ನಕ್ಸಲರ ಬಳಿ ಶಸ್ತ್ರಾಸ್ತ್ರ ಇರುವುದು ಹಾಗೂ ಅವರು ಶಸ್ತ್ರಾಸ್ತವನ್ನು ಇರಿಸಿಕೊಂಡು ಓಡಾಡುತ್ತಿರುವುದು ಚರ್ಚೆಗೆ ಕಾರಣವಾಗಿತ್ತು. ಅಷ್ಟೇ ಅಲ್ಲ ರಾಜ್ಯ ಗುಪ್ತಚರ ದಳವೂ ಈ ವಿಷಯವನ್ನು ದೃಢಪಡಿಸಿತ್ತು. ಆದರೆ, ಅವರು ಶರಣಾಗುವಾಗ ಯಾರೊಬ್ಬರೂ ಶಸ್ತ್ರಾಸ್ತ್ರವನ್ನು ಒಪ್ಪಿಸಿಲ್ಲ ಎನ್ನಲಾಗಿದೆ. ಹೀಗಾಗಿ ಈ ವಿಚಾರ ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದೆ.
ರವೀಂದ್ರ ಶರಣಾಗಿಲ್ಲ: ಇನ್ನು ನಕ್ಸಲರಲ್ಲಿ ಆರು ಜನ ಶರಣಾದರೂ ರವೀಂದ್ರ ಎನ್ನುವ ನಕ್ಸಲರೊಬ್ಬರು ಇಲ್ಲಿಯ ವರೆಗೆ ಶರಣಾಗದೆ ಇರುವುದು ಹಾಗೂ ಅವರು ಯಾರ ಸಂಪರ್ಕಕ್ಕೂ ಸಿಗದೆ ಇರುವುದು ಸಹ ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ. ರವೀಂದ್ರ ಅವರ ಮೇಲೆ ಬರೋಬ್ಬರಿ 14 ಕೇಸ್‌ಗಳು ದಾಖಲಾಗಿವೆ ಎಂದು ಹೇಳಲಾಗುತ್ತಿದೆ. ಈತ ನಕ್ಸಲ್ ಶರಣಾಗತಿ ಕಮಿಟಿಗೂ ಸಿಕ್ಕಿಲ್ಲ. ಈ ಮೂಲಕ ನಕ್ಸಲ ಮುಕ್ತ ಎನ್ನುವಂತಿಲ್ಲ. ಅಲ್ಲದೆ ನಕ್ಸಲರ ಪಟ್ಟಿಯಲ್ಲಿ ಇನ್ನೊಬ್ಬರ ಹೆಸರು ಉಳಿದುಕೊಂಡಿದೆ ಎಂದು ಹೇಳಲಾಗುತ್ತಿದೆ.

ನಕ್ಸಲರ ಶರಣಾಗತಿ ಆದರೂ ಶಸ್ತ್ರಾಸ್ತ್ರ ಸಲ್ಲಿಕೆ ಮಾಡದೆ ಇರುವುದು ಹಾಗೂ ಒಬ್ಬ ನಕ್ಸಲ್ ಇನ್ನೂ ಶರಣಾಗದೆ ಇರುವುದು ಸೇರಿದಂತೆ ಹಲವು ವಿಷಯಗಳು ಇದೀಗ ಚರ್ಚೆಯಾಗುತ್ತಿದೆ. ಈ ನಡುವೆ ಬಿಜೆಪಿ ನಕ್ಸಲರ ಶರಣಾಗತಿಗೆ ಸಂಬಂಧಿಸಿದ ಪ್ರಕ್ರಿಯೆಯ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.












Click it and Unblock the Notifications