• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಮೀನು ವಿವಾದ: ಮಂತ್ರಾಲಯ, ಉತ್ತರಾದಿ ಮಠದ ಶ್ರೀಗಳಿಗೆ ಹೈಕೋರ್ಟ್ ಉಪದೇಶ

|

ಬೆಂಗಳೂರು, ಡಿ 4: ಮಂತ್ರಾಲಯ ಮತ್ತು ಉತ್ತರಾದಿ ಮಠಗಳ ನಡುವೆ ನಡೆಯುತ್ತಿರುವ ಜಮೀನು ಮಾಲೀಕತ್ವದ ವಿವಾದಕ್ಕೆ ಪರಿಹಾರ ಸಿಗುವ ಯಾವ ಲಕ್ಷಣಗಳೂ ಸದ್ಯಕ್ಕೆ ಕಾಣಿಸುತ್ತಿಲ್ಲ. ಈ ಸಂಬಂಧ, ಕೋರ್ಟಿನಲ್ಲಿ ಮತ್ತೆ ವಿಚಾರಣೆ ಸೋಮವಾರ (ಡಿ 3) ನಡೆದಿದೆ.

ಜಮೀನು ಮಾಲೀಕತ್ವದ ವಿವಾದವನ್ನು ಕೋರ್ಟಿನಿಂದ ಹೊರಗೆ ಸಂಧಾನದ ಮೂಲಕ ಯಾಕೆ ಪರಿಹರಿಸಿಕೊಳ್ಳಬಾರದು ಎಂದು ಎರಡೂ ಮಠದ ಪರ ವಕೀಲರನ್ನು ನ್ಯಾಯಮೂರ್ತಿ ಪ್ರಶ್ನಿಸಿದ್ದಾರೆ ಮತ್ತು ವಿಚಾರಣೆಯನ್ನು ಡಿಸೆಂಬರ್ 4ಕ್ಕೆ ಮುಂದೂಡಿದ್ದಾರೆ.

ಉತ್ತರಾದಿ- ರಾಯರ ಮಠದವರು ನೀವೇ ನವವೃಂದಾವನ ಗೊಂದಲ ಬಗೆಹರಿಸಿಕೊಳ್ಳಿ

ವೃಂದಾವನಕ್ಕೆ ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಕೋರ್ಟ್ ವಿಚಾರಣೆ ಮುಗಿಯುವವರೆಗೆ, ಮೊದಲ ಪೂಜೆಗೆ ನಮಗೇ ಅವಕಾಶ ನೀಡಬೇಕು ಎನ್ನುವ ಮಂತ್ರಾಲಯ ಮಠದ ಆರ್ ಎಸ್ ಎ (Regular second appeal) ಕೈಗೆತ್ತೆಕೊಂಡ ಕೋರ್ಟ್, ಈ ಮೇಲಿನ ಸಲಹೆಯನ್ನು ನೀಡಿದೆ.

ವಿಚಾರಣೆ ನಡೆಸುತ್ತಿದ್ದ ಏಕಸದಸ್ಯ ಪೀಠದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್, ನಾನು ಎರಡೂ ಮಠದ ಭಕ್ತ. ಹಾಗಾಗಿ, ಎರಡೂ ಮಠದ ಪರ ವಕೀಲರಲ್ಲಿ ನಾನು ಕೇಳಿಕೊಳ್ಳುವುದೇನಂದರೆ, ಎರಡು ಮಠದ ಶ್ರೀಗಳು ಪರಸ್ಪರ ಭೇಟಿಯಾಗಲು ಸಾಧ್ಯವಿಲ್ಲದೇ ಇದ್ದರೆ, ಆಡಳಿತಾಧಿಕಾರಿಗಳ ಹಂತದಲ್ಲಿ ಮಾತುಕತೆ ನಡೆಯಲಿ ಎಂದಿದ್ದಾರೆ.

ನವವೃಂದಾವನ ಒಂದು ಮಠದ ಆಸ್ತಿಯಾಗಲು ಸಾಧ್ಯವೇ?

ಉತ್ತರಾದಿ ಮಠದ ಸತ್ಯಾತ್ಮತೀರ್ಥ ಸ್ವಾಮೀಜಿ ಮತ್ತು ರಾಘವೇಂದ್ರ ಮಠದ ಸುಬುಧೇಂದ್ರ ತೀರ್ಥ ಸ್ವಾಮೀಜಿಗಳಿಬ್ಬರೂ, ಎಲ್ಲಾದರೂ ಮರದ ಕೆಳಗೆ ಕುಳಿತು, ಮಾತುಕತೆ ನಡೆಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಲಬಹುದಲ್ಲವೇ ಎಂದು ನ್ಯಾ. ದೀಕ್ಷಿತ್ ಪ್ರಶ್ನಿಸಿದ್ದಾರೆ. ಮಧ್ವಾಚಾರ್ಯರ ಶಿಷ್ಯರಾಗಿದ್ದ ಪದ್ಮನಾಭ ತೀರ್ಥರ ಆರಾಧನೆ ಸಂಬಂಧ ಅರ್ಜಿ ವಿಚಾರಣೆ ನಡೆಯುತ್ತಿದೆ. ಏನಿದು ವಿವಾದ? ಮುಂದೆ ಓದಿ..

ತುಂಗಭದ್ರ ನದಿ ತಟದಲ್ಲಿರುವ ಪವಿತ್ರ ಕ್ಷೇತ್ರ ನವವೃಂದಾವನ ಗಡ್ಡಿ

ತುಂಗಭದ್ರ ನದಿ ತಟದಲ್ಲಿರುವ ಪವಿತ್ರ ಕ್ಷೇತ್ರ ನವವೃಂದಾವನ ಗಡ್ಡಿ

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ತುಂಗಭದ್ರ ನದಿ ತಟದಲ್ಲಿರುವ ಪವಿತ್ರ ಕ್ಷೇತ್ರ ನವವೃಂದಾವನ ಗಡ್ಡಿ. ಇಲ್ಲಿ ಗುರುರಾಘವೇಂದ್ರರ ಗುರುಗಳಾದ ಸುದೀಂಧ್ರ ತೀರ್ಥರು, ವ್ಯಾಸರಾಜರು ಸೇರಿದಂತೆ ಒಂಬತ್ತು ಯತಿವರ್ಯರ ವೃಂದಾವನವಿದೆ. ಇದು ಉತ್ತರಾದಿ, ರಾಯರ ಅಥವಾ ವ್ಯಾಸರಾಜ ಮಠಕ್ಕೆ ಸೇರಿದ್ದೋ ಎನ್ನುವ ವಿವಾದಕ್ಕೆ ದಶಕಗಳ ಇತಿಹಾಸವಿದೆ.

ಎರಡೂ ಮಠಗಳು ಕೋರ್ಟ್ ಮೆಟ್ಟಲು ಏರಿದ್ದಾಗಿತ್ತು

ಎರಡೂ ಮಠಗಳು ಕೋರ್ಟ್ ಮೆಟ್ಟಲು ಏರಿದ್ದಾಗಿತ್ತು

ಮೂರು ಮಠದ ಪೈಕಿ ವ್ಯಾಸರಾಜ ಮಠ ಹೊರತು ಪಡಿಸಿ ಈ ಜಾಗ ಮತ್ತು ಪೂಜೆಯ ಹಕ್ಕು ತಮ್ಮದೆಂದು ಎರಡೂ ಮಠಗಳು ಕೋರ್ಟ್ ಮೆಟ್ಟಲೂ ಏರಿದ್ದಾಗಿತ್ತು. ಜಾಗಕ್ಕೆ ಸಂಬಂಧಿಸಿದಂತೆ ಇರುವ ಕಲಹ ಎರಡು ಮಠದ ಭಕ್ತರ ನಡುವೆ ವೈಷಮ್ಯಕ್ಕೂ ಕಾರಣವಾಗಿತ್ತು, ಕೆಲವೊಂದು ಹಂತದಲ್ಲಿ ಉತ್ತರಾದಿ ಮತ್ತು ರಾಯರ ಮಠದ ಭಕ್ತರ ಮತ್ತು ಸಿಬ್ಬಂದಿಗಳ ನಡುವೆ ಮಾರಾಮಾರಿಯ ಹಂತಕ್ಕೂ ಹೋಗಿತ್ತು.

ಹಂಪಿ ನರಹರಿತೀರ್ಥರ ವೃಂದಾವನ ಭೂಮಿ ವಿವಾದ ; ಉತ್ತರಾದಿ ಮಠಕ್ಕೆ ಜಯ

ನವವೃಂದಾವನ ಗಡ್ಡಿ, ಉತ್ತರಾದಿ ಮಠಕ್ಕೆ ಸೇರಿದ್ದು

ನವವೃಂದಾವನ ಗಡ್ಡಿ, ಉತ್ತರಾದಿ ಮಠಕ್ಕೆ ಸೇರಿದ್ದು

ಈ ಜಾಗ ಯಾವ ಮಠಕ್ಕೆ ಸೇರಿದ್ದು ಎನ್ನುವ ವಿವಾದ 23 ವರ್ಷದ ಹಿಂದೆಯೇ ಕೋರ್ಟ್ ಮೆಟ್ಟಲೇರಿತ್ತು. ಈ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಧಾರವಾಡ ಹೈಕೋರ್ಟ್ ಏಪ್ರಿಲ್ 22, 2016ರಂದು ತನ್ನ ತೀರ್ಪುನ್ನು ಪ್ರಕಟಿಸಿತ್ತು. ಹೈಕೋರ್ಟ್ ನವವೃಂದಾವನ ಗಡ್ಡಿ, ಉತ್ತರಾದಿ ಮಠಕ್ಕೆ ಸೇರಿದ್ದು ಎನ್ನುವ ಆದೇಶ ಹೊರಡಿಸಿತ್ತು. ಆದರೂ ಪೂಜಾ ವಿವಾದಕ್ಕೆ ಸಂಬಂಧಿಸಿದಂತೆ ಎರಡು ಮಠಗಳ ನಡುವೆ ವಿವಾದ ಕಮ್ಮಿಯಾಗಲೇ ಇಲ್ಲ.

ಪೂಜೆಗೆ ಸಂಬಂಧಿಸಿದಂತೆ ಕೋರ್ಟ್ ತೀರ್ಪಿನಲ್ಲಿ ಸ್ಪಷ್ಟತೆ ಇಲ್ಲ

ಪೂಜೆಗೆ ಸಂಬಂಧಿಸಿದಂತೆ ಕೋರ್ಟ್ ತೀರ್ಪಿನಲ್ಲಿ ಸ್ಪಷ್ಟತೆ ಇಲ್ಲ

ಸುಮಾರು 23 ಎಕರೆ ಜಮೀನಲ್ಲಿರುವ ಈ ಪವಿತ್ರ ವೃಂದಾವನದ ಸ್ಥಳ ಮತ್ತು ಸ್ಥಳಕ್ಕೆ ಸಂಬಂಧ ಪಟ್ಟ ಕಂದಾಯ ದಾಖಲೆಗಳು ಉತ್ತರಾದಿ ಮಠದ ಹೆಸರಿನಲ್ಲಿದೆ. ಹಾಗಾಗಿ ಈ ಜಾಗ ಉತ್ತರಾದಿ ಮಠಕ್ಕೆ ಸೇರಿದ್ದು, ರಾಯರ ಮಠದವರು ಇದಕ್ಕೆ ಅಡ್ಡಿ ಮಾಡಬಾರದು ಎನ್ನುವ ತೀರ್ಪನ್ನು ಧಾರವಾಡ ಹೈಕೋರ್ಟ್ ನೀಡಿತ್ತು. ಆದರೆ ಪೂಜೆಗೆ ಸಂಬಂಧಿಸಿದಂತೆ ಕೋರ್ಟ್ ತೀರ್ಪಿನಲ್ಲಿ ಸ್ಪಷ್ಟತೆ ಇಲ್ಲ ಎನ್ನುವುದು ರಾಯರ ಮಠದ ವಾದ.

ಜಾಗ ಉತ್ತರಾದಿ ಮಠಕ್ಕೇ ಇರಲಿ, ನಾವು ಪೂಜೆಗೆ ಮಾತ್ರ ಹೋಗುತ್ತೇವೆ

ಜಾಗ ಉತ್ತರಾದಿ ಮಠಕ್ಕೇ ಇರಲಿ, ನಾವು ಪೂಜೆಗೆ ಮಾತ್ರ ಹೋಗುತ್ತೇವೆ

ಕೋರ್ಟ್ ಆದೇಶವನ್ನು ನಾವು ಗೌರವಿಸುತ್ತೇವೆ. ಜಾಗ ಉತ್ತರಾದಿ ಮಠಕ್ಕೇ ಇರಲಿ, ನಾವು ಪೂಜೆಗೆ ಮಾತ್ರ ಆ ಜಾಗಕ್ಕೆ ಹೋಗುತ್ತೇವೆ. ರಾಯರ ಗುರುಗಳು, ವ್ಯಾಸರಾಜರೂ ಸೇರಿದಂತೆ ಯತಿವರ್ಯರ ವೃಂದಾವನ ಇರುವ ಸ್ಥಳ. ನಾವು ಅಲ್ಲಿಗೆ ಪೂಜೆಗೆ ಮಾತ್ರ ಹೋಗುತ್ತೇವೆ. ಇದಕ್ಕೆ ಯಾರೂ ಅಡ್ಡಿ ಪಡಿಸುವಂತಿಲ್ಲ ಎನ್ನುವುದು ಮಂತ್ರಾಲಯದ ರಾಘವೇಂದ್ರ ಮಠದ ನಿಲುವು. ಕೋರ್ಟ್ ನಮ್ಮ ಪರವಾಗಿ ತೀರ್ಪು ನೀಡಿದ ಮೇಲೂ ರಾಯರ ಮಠದವರು ಸ್ಥಳಕ್ಕೆ ಆಗಮಿಸುವುದಕ್ಕೆ ನಮ್ಮ ವಿರೋಧವಿದೆ. ಇಲ್ಲಿನ ಪೂಜಾ ಕೈಂಕರ್ಯಗಳಿಗೆ ರಾಯರ ಮಠದವರು ಅಡ್ಡಿ ಪಡಿಸಬಾರದು ಎನ್ನುವುದು ಉತ್ತರಾದಿ ಮಠದ ವಾದ.

ಪದ್ಮನಾಭ ತೀರ್ಥ ಆರಾಧನೆ

ಪದ್ಮನಾಭ ತೀರ್ಥ ಆರಾಧನೆ

ಕಳೆದ ವರ್ಷ, ನವೆಂಬರ್ 16 ರಿಂದ 18ರವರೆಗೆ ಮಧ್ವಾಚಾರ್ಯರ ಶಿಷ್ಯರಾಗಿದ್ದ ಪದ್ಮನಾಭ ತೀರ್ಥ ಆರಾಧನೆಯನ್ನು, ಎರಡೂ ಮಠದವರು ತಲಾ ಒಂದೂವರೆ ದಿನದಂತೆ ಆರಾಧನೆ ಮಾಡುವಂತೆ ಕೋರ್ಟ್ ಆದೇಶ ನೀಡಿತ್ತು. ಒಂದೂವರೆ ದಿನ ಒಂದು ಮಠದವರು ಅಲಂಕಾರ, ನೈವೇದ್ಯ, ಹಸ್ತೋದಕ ಎಲ್ಲ ಮಾಡಿದ ಮೇಲೆ, ಇನ್ನೊಂದು ಮಠದವರು ಆ ಎಲ್ಲವನ್ನೂ ತೆಗೆದು ತಾವು ಆರಾಧನೆ ಮಾಡಿದ್ದರು.

English summary
Nava Vrundavana Gaddi (in Koppala district) pooja controversy: Why can't both the Mutt (Mantralaya Raghavendra Mutt and Uttaradi Mutt) off the court settle the issue, Karnataka High Court suggestion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X