ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜಯಪುರದಲ್ಲಿ ಆಗಸ್ಟ್ 16ರಿಂದ ರಾಷ್ಟ್ರೀಯ ಜಲ ಸಮಾವೇಶ

By Sachhidananda Acharya
|
Google Oneindia Kannada News

ವಿಜಯಪುರ, ಆಗಸ್ಟ್ 10: ವಿಜಯಪುರದಲ್ಲಿ ಆಗಸ್ಟ್ 16 ರಿಂದ ಮೂರು ದಿನಗಳ ಕಾಲ ರಾಷ್ಟ್ರೀಯ ಜಲ ಸಮಾವೇಶ ನಡೆಯಲಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಒಣಗಿದ್ದ ವಿಜಯಪುರ ಕೆರೆಗಳಿಗೀಗ ಜೀವ ಬಂದಿದ್ದು ಹೇಗೆ?ಒಣಗಿದ್ದ ವಿಜಯಪುರ ಕೆರೆಗಳಿಗೀಗ ಜೀವ ಬಂದಿದ್ದು ಹೇಗೆ?

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, 'ಹೊಸದಿಲ್ಲಿಯಲ್ಲಿ ನಡೆಯಬೇಕಿದ್ದ ಸಮಾವೇಶ ವಿಜಯಪುರಕ್ಕೆ ಸ್ಥಳಾಂತರಗೊಂಡಿದೆ' ಎಂದು ಮಾಹಿತಿ ನೀಡಿದರು.

National Water Convention in Vijayapura from August 16th

ಆಗಸ್ಟ್ 16 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾವೇಶ ಉದ್ಘಾಟಿಸಲಿದ್ದಾರೆ. ಅಣ್ಣಾ ಹಜಾರೆ ಸೇರಿ 500ಕ್ಕೂ ಹೆಚ್ಚು ಗಣ್ಯರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದ ನೇತೃತ್ವವನ್ನು ರಾಜಸ್ಥಾನದ ಜಲ ತಜ್ಞರು ವಹಿಸಲಿದ್ದು, ಜಲತಜ್ಞ ರಾಜೇಂದರ್ ಸಿಂಗ್ ಸೇರಿದಂತೆ ನೂರಾರು ಜಲ ತಜ್ಞರು ಇದರಲ್ಲಿ ಭಾಗಿಯಾಗಲಿದ್ದಾರೆ.

ಮಹದಾಯಿ, ಕಾವೇರಿ ಇತ್ಯರ್ಥಕ್ಕೆ ಆ.14ರಂದು ಸರ್ವಪಕ್ಷ ಸಭೆಮಹದಾಯಿ, ಕಾವೇರಿ ಇತ್ಯರ್ಥಕ್ಕೆ ಆ.14ರಂದು ಸರ್ವಪಕ್ಷ ಸಭೆ

"ಜಲ ಸಂರಕ್ಷಣೆ ಮತ್ತು ಹನಿ ನೀರಾವರಿ ಮಹತ್ವದ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸಲು ಈ ಸಮಾವೇಶವು ನೆರವಾಗಲಿದೆ," ಎಂದು ಎಂಬಿ ಪಾಟೀಲ್ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಅವರು, "ವಿಜಯಪುರದಲ್ಲಿ ಷಾಹಿ ಕಾಲದ ಸುರಂಗ ಕಾಲುವೆಗಳನ್ನು ಪುನರುಜ್ಜೀವನಗೊಳಿಸಲಾಗಿದೆ. ವಿಜಯಪುರ ಜಿಲ್ಲೆಗೆ ಈ ಸುರಂಗ ಕಾಲುವೆಗಳಿಂದ ನಿತ್ಯ 5 ದಶಲಕ್ಷ ಲೀಟರ್‌ ನೀರು ಪೂರೈಸಬಹುದು. ಆದಿಲ್ ಷಾಹಿ ಕಾಲದ ಈ ಕಾಲುವೆಗಳು ಐತಿಹಾಸಿಕ ಮಹತ್ವ ಹೊಂದಿವೆ. ಅವುಗಳ ರಕ್ಷಣೆ ಸರ್ಕಾರ ಹಾಗೂ ಜನರ ಜವಾಬ್ದಾರಿಯಾಗಿದೆ," ಎಂದು ಪಾಟೀಲ್ ಅಭಿಪ್ರಾಯಟ್ಟರು.

ಇಸಲ್ಲದೆ ಗ್ರಾಮೀಣ ಭಾಗದಲ್ಲಿ ಇನ್ನೂ 15 ಸುರಂಗ ಕಾಲುವೆಗಳ ಪುನರುಜ್ಜೀವನ ಕೈಗೊಳ್ಳಲಾಗುವುದು ಎಂದೂ ಅವರು ಹೇಳಿದ್ದಾರೆ.

English summary
Water Resources Minister MB Patil said that the National Water Conference will be held in Vijayapura for three days from August 16.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X