ರಾಜ್ಯಕ್ಕೆ ಬರುತ್ತಿದ್ದಾರೆ ಬಿಜೆಪಿ ರಾಷ್ಟ್ರನಾಯಕರು, ಚುರುಕಾಗಲಿದೆ ರಾಜಕೀಯ

ಬೆಂಗಳೂರು, ಸೆಪ್ಟೆಂಬರ್ 18: ಬಿಜೆಪಿ ರಾಷ್ಟ್ರನಾಯಕರು ಕೆಲವರು ಇಂದು ಸಂಜೆ ವೇಳೆಗೆ ನಗರಕ್ಕೆ ಬರಲಿದ್ದು, ಮಹತ್ತರವಾದ ರಾಜಕೀಯ ಘಟನೆಯೊಂದು ಘಟಿಸುವ ಮುನ್ಸೂಚನೆ ದೊರೆತಂತಾಗಿದೆ.

ರಾಜ್ಯ ಬಿಜೆಪಿ ಉಸ್ತುವಾರಿ ಮುರಳಿಧರ ರಾವ್, ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಬೆಂಗಳೂರಿಗೆ ಇಂದು ಸಂಜೆ ಆಗಮಿಸಲಿದ್ದು. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೂಚನೆ ಮೇರೆಗೆ ಅವರು ಇಲ್ಲಿಗೆ ಬರುತ್ತಿದ್ದಾರೆ ಎನ್ನಲಾಗಿದೆ.

ರಾಜ್ಯದಲ್ಲಿ ನಡೆಯುತ್ತಿರುವ ಕ್ಷಿಪ್ರ ರಾಜಕೀಯ ಬೆಳವಣಿಗೆಗಳ ಬಗ್ಗೆ ಅವಲೋಕನ ನಡೆಸಲು ರಾಷ್ಟ್ರ ನಾಯಕರು ನಗರಕ್ಕೆ ಬರುತ್ತಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳಿವೆ. ಮುರಳಿಧರ ರಾವ್ ಹಾಗೂ ಜಾವಡ್ಕೇರ್ ಆಗಮನದಿಂದಾಗಿ ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ.

ಶಾಸಕರನ್ನು ಸ್ವಾಗತಿಸಲು ಬಂದರೇ?

ಶಾಸಕರನ್ನು ಸ್ವಾಗತಿಸಲು ಬಂದರೇ?

ಮುರಳಿಧರ ರಾವ್ ಅವರು ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಮುಗಿದಾಗ ಕೆಲವು ಶಾಸಕರನ್ನು ಬಿಜೆಪಿಯತ್ತ ಸೆಳೆಯಲು ಯತ್ನಿಸಿದ್ದರು. ಬಿ.ಸಿ.ಪಾಟೀಲ್ ಸೇರಿದಂತೆ ಕೆಲವು ಶಾಸಕರೊಡನೆ ಮುರಳಿಧರ ರಾವ್ ಅವರು ಮಾತನಾಡಿದ್ದರು. ಹಾಗಾಗಿ ಈಗ ಮತ್ತೆ ಮುರಳಿಧರ ರಾವ್ ಅವರು ಇದೇ ಕಾರಣಕ್ಕೆ ರಾಜ್ಯಕ್ಕೆ ಬರುತ್ತಿದ್ದಾರೆ ಎಂಬ ಅನುಮಾನವಿದೆ.

ಶಾಸಕರನ್ನು ಬರಮಾಡಿಕೊಳ್ಳಲು ಬರುತ್ತಿದ್ದಾರಾ?

ಶಾಸಕರನ್ನು ಬರಮಾಡಿಕೊಳ್ಳಲು ಬರುತ್ತಿದ್ದಾರಾ?

ಕೆಲವು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಸೆಪ್ಟೆಂಬರ್ 18ರಂದು ಬಿಜೆಪಿಗೆ ಬರಲಿದ್ದಾರೆ ಎಂಬ ಸುದ್ದಿ ಹರಡಿತ್ತು. ಪಕ್ಷಾಂತರಿ ಶಾಸಕರನ್ನು ತಮ್ಮ ಪಕ್ಷಕ್ಕೆ ಕರೆದುಕೊಳ್ಳಲು ಈ ಇಬ್ಬರು ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದಾರೆಯೇ ಎಂಬ ಅನುಮಾನವೂ ಇದೆ.

ನಾಳೆ ಕಾಂಗ್ರೆಸ್ ಶಾಸಕರ ಪತ್ರಿಕಾಗೋಷ್ಠಿ

ನಾಳೆ ಕಾಂಗ್ರೆಸ್ ಶಾಸಕರ ಪತ್ರಿಕಾಗೋಷ್ಠಿ

ನಾಳೆ (ಸೆಪ್ಟೆಂಬರ್ 19)ರಂದು ಕಾಂಗ್ರೆಸ್ ಶಾಸಕ ಎಂಟಿಬಿ ನಾಗರಾಜು ಅವರು ಪತ್ರಿಕಾಗೋಷ್ಠಿ ಕರೆದಿದ್ದಾರೆ. ಮಹತ್ವದ ನಿರ್ಣಯದ ಬಗ್ಗೆ ನಾಳೆ ಪ್ರಕಟಿಸುವುದಾಗಿ ಅವರು ಹೇಳಿದ್ದಾರೆ. ಅವರ ಜೊತೆ ಇನ್ನೂ ಕೆಲವು ಕಾಂಗ್ರೆಸ್ ಶಾಸಕರು ಸೇರಿಕೊಳ್ಳಲಿದ್ದಾರೆ. ಈಗಾಗಲೇ ಅವರು ಬಿಜೆಪಿ ಜೊತೆ ಮಾತುಕತೆ ಆಡಿದ್ದು ನಾಳೆ ಪಕ್ಷ ಬಿಡುವ ನಿರ್ಣಯ ಪ್ರಕಟಿಸಲಿದ್ದಾರೆ ಎಂಬ ಸುದ್ದಿಯೂ ಇದೆ. ರಾಷ್ಟ್ರ ನಾಯಕರು ಬಿಜೆಪಿಗೆ ಬಂದಿರುವುದು ಇದಕ್ಕೆ ಪುಷ್ಠಿ ನೀಡಿದೆ.

ಸೆಪ್ಟೆಂಬರ್‌ 25ರಂದು ಅಮಿತ್ ಶಾ

ಸೆಪ್ಟೆಂಬರ್‌ 25ರಂದು ಅಮಿತ್ ಶಾ

ಸೆಪ್ಟೆಂಬರ್ 25ರಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಬೆಂಗಳೂರಿಗೆ ಬರಲಿದ್ದಾರೆ. ಅಂದು ರಾಜ್ಯ ರಾಜಕಾರಣ ಒಂದು ಮಗ್ಗುಲು ಬದಲಿಸಲಿದೆ ಎನ್ನಲಾಗಿದೆ. ಅಂದಿಗೆ ವೇದಿಕೆ ಸಜ್ಜುಗೊಳಿಸಲು ಪ್ರಕಾಶ್ ಜಾವಡೇಕರ್, ಮುರಳೀಧರ ರಾವ್ ಅವರು ಇಂದು ಬಂದಿದ್ದಾರೆ ಎನ್ನಲಾಗಿದೆ.

ಯಡಿಯೂರಪ್ಪ ಜತೆ ಮಹತ್ವದ ಚರ್ಚೆ

ಯಡಿಯೂರಪ್ಪ ಜತೆ ಮಹತ್ವದ ಚರ್ಚೆ

ಬಿಜೆಪಿಗೆ ಬರುವ ಶಾಸಕರ ಪಟ್ಟಿಯನ್ನು ಮೊನ್ನೆಯೇ ಯಡಿಯೂರಪ್ಪ ಅವರು ಹೈಕಮಾಂಡ್‌ಗೆ ಕಳುಹಿಸಿದ್ದರು ಎಂಬ ಗುಸು-ಗುಸು ಇತ್ತು. ಅದರ ಬಗ್ಗೆ ವಿಸ್ತೃತ ಚರ್ಚೆಗೆಂದು ಈ ಇಬ್ಬರು ನಾಯಕರು ರಾಜ್ಯಕ್ಕೆ ಬಂದಿದ್ದಾರೆ. ಬಂದ ಕೂಡಲೇ ಯಡಿಯೂರಪ್ಪ ಅವರ ಜೊತೆ ಮಹತ್ವದ ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+