ಕರ್ನಾಟಕದಲ್ಲಿ ನರೇಂದ್ರ ಮೋದಿ ಸಮಾವೇಶದ ಸ್ಥಳ, ದಿನಾಂಕಗಳು
Recommended Video

ಬೆಂಗಳೂರು, ಏಪ್ರಿಲ್ 7 : ಕರ್ನಾಟಕದಲ್ಲಿ ನರೇಂದ್ರ ಮೋದಿ ಅವರ ಚುನಾವಣಾ ಸಮಾವೇಶಗಳ ದಿನಾಂಕಗಳು ಅಂತಿಮಗೊಂಡಿವೆ. ರಾಜ್ಯದಲ್ಲಿ ಎರಡು ಹಂತದಲ್ಲಿ ಏಪ್ರಿಲ್ 18 ಮತ್ತು 23ರಂದು ಚುನಾವಣೆಗಳು ನಡೆಯಲಿವೆ.
ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ ಅವರು ನರೇಂದ್ರ ಮೋದಿ ಅವರ ಸಮಾವೇಶದ ಕುರಿತು ಮಾಹಿತಿ ನೀಡಿದರು. ಏಪ್ರಿಲ್ 13ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಸಮಾವೇಶಕ್ಕೆ ಗುದ್ದಲಿ ಪೂಜೆಯನ್ನು ಅವರು ನೆರವೇರಿಸಿದರು.

ಏಪ್ರಿಲ್ 13ರಂದು ಬೆಂಗಳೂರಿಗೆ ಆಗಮಿಸುವ ನರೇಂದ್ರ ಮೋದಿ ಅವರು ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿಗಳ ಪರವಾಗಿ ಪ್ರಚಾರವನ್ನು ನಡೆಸಲಿದ್ದಾರೆ.
ಸಮಾವೇಶದ ಸ್ಥಳ, ದಿನಾಂಕ
* ಏಪ್ರಿಲ್ 9 : ಚಿತ್ರದುರ್ಗ, ಮೈಸೂರು
* ಏಪ್ರಿಲ್ 12 : ಗಂಗಾವತಿ
* ಏಪ್ರಿಲ್ 13 : ಬೆಂಗಳೂರು
* ಏಪ್ರಿಲ್ 18 : ಚಿಕ್ಕೋಡಿ, ಬಾಗಲಕೋಟೆ
ನರೇಂದ್ರ ಮೋದಿ ಅವರು ಈಗಾಗಲೇ ಚುನಾವಣೆ ದಿನಾಂಕ ಘೋಷಣೆಯಾಗುವ ಮೊದಲು ಹುಬ್ಬಳ್ಳಿ, ಕಲಬುರಗಿಯಲ್ಲಿ 2 ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಬೆಂಗಳೂರಿನಲ್ಲಿ ರೋಡ್ ಶೋ ನಡೆಸಿ ಮತ ಯಾಚನೆ ಮಾಡಿದ್ದಾರೆ.












Click it and Unblock the Notifications