ನರೇಂದ್ರ ಮೋದಿ ಅವರು ನನಗೆ ಆ ಸ್ಥಾನ ನೀಡುವ ಭರವಸೆ ನೀಡಿದ್ರು: ಹಿಂದಿನ ರಹಸ್ಯ ಚರ್ಚೆ ಬಿಚ್ಚಿಟ್ಟ ಕೆ ಎಸ್‌ ಈಶ್ವರಪ್ಪ

ಹುಬ್ಬಳ್ಳಿ, ಸೆಪ್ಟೆಂಬರ್‌ 13: ಪ್ರಧಾನಿ ನರೇಂದ್ರ ಮೋದಿ ಅವರು ನನ್ನನ್ನು ಯಾವುದಾದರೂ ರಾಜ್ಯಕ್ಕೆ ರಾಜ್ಯಪಾಲರನ್ನಾಗಿ ನೇಮಿಸುವ ಭರವಸೆ ನೀಡಿದ್ದರು. ಆದರೆ, ಪ್ರಧಾನಿಯವರ ಆಹ್ವಾನ ನಿರಾಕರಿಸಿದ್ದೆ. ಮೊದಲು ಯಡಿಯೂರಪ್ಪ ಕುಟುಂಬ ರಾಜಕಾರಣ ತಡೆಯುವಂತೆ ಪ್ರಧಾನಿಯವರಲ್ಲಿ ಮನವಿ ಮಾಡಿದ್ದೆ ಎಂದು ಹಿಂದಿನ ರಹಸ್ಯ ಮಾತುಕತೆಯನ್ನ ಮಾಜಿ ಡಿಸಿಎಂ ಕೆ ಎಸ್‌ ಈಶ್ವರಪ್ಪ ಅವರು ಬಿಚ್ಚಿಟ್ಟಿದ್ದಾರೆ.

ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಸ್ವೀಕರಿಸುವುದಕ್ಕಾಗಿ ಗುರುವಾರದಂದು ಹುಬ್ಬಳ್ಳಿಗೆ ಆಗಮಿಸಿದ್ದ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ಅವರು, ಹಲವಾರು ಮುಖಂಡ ರೊಂದಿಗೆ ನಗರದ ಹೊರಭಾಗದ ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಸಿ, ಬ್ರಿಗೇಡ್‌ಗೆ ಮತ್ತೆ ಚಾಲನೆ ನೀಡುವ ಬಗ್ಗೆ ಚರ್ಚೆ ನಡೆಸಿದ್ದಾರೆ.

Narendra Modi Promised To Appoint Me As Governor Former Minister KS Eshwarappa Said

ಕಳೆದ ನಾಲ್ಕೋವರೆ ವರ್ಷಗಳಿಂದ ಸಂಪೂರ್ಣ ತಟಸ್ಥಗೊಂಡಿದ್ದ ಕೆ.ಎಸ್‌. ಈಶ್ವರಪ್ಪ ನೇತೃತ್ವದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ಗೆ ಹುಬ್ಬಳ್ಳಿಯಿಂದ ಮತ್ತೆ ಚಾಲನೆ ಸಿಕ್ಕಿದ್ದು ಈ ಸಲ ಸಂಘಟನೆ ಅತ್ಯಂತ ಬಲಾಢ್ಯವಾಗಿ ನಡೆಸಲು ಅಭಿಪ್ರಾಯ ಕೇಳಿಬಂದವು.ಈ ಬಾರಿ ಸಂಘಟನೆಗೆ ಈ ಮೊದಲಿನ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಹೆಸರನ್ನೇ ಮುಂದುವರೆಸಬೇಕೊ ಅಥವಾ ಹೊಸತಾಗಿ 'ಹಿಂದ್' ಎಂಬ ಹೆಸರು ಇಡಬೇಕೊ ಎಂಬುದರ ಕುರಿತು ಸಭೆಯಲ್ಲಿ ರ್ಚಚಿಸಲಾಯಿತು.

ದಲಿತರು, ಹಿಂದುಳಿದವರ ಅಭಿವೃದ್ಧಿಯನ್ನು ಗಮನದಲ್ಲಿ ಇಟ್ಟುಕೊಂಡು ಈ ಸಂಘಟನೆಗೆ ಹಿಂದ್ ಎಂದುಮರುನಾಮಕರಣಗೊಳಿಸಬೇಕು ಎಂಬ ಸಲಹೆಗಳು ಸಭೆಯಲ್ಲಿ ಕೇಳಿಬಂದವು. ಇನ್ನು ಅಹಿಂದಂತೆ ಸಂಘಟನೆ ಆಗಿ ಅದು ಕೇಲವರೇ ಅಧಿಕಾರ ಅನುಭವಿಸಬೇಕಾಯಿತು. ‌ಆದ್ದರಿಂದ ಅದರಂತೆ ತಮ್ಮ ಸಂಘಟನೆ ಆಗಬಾರದು. ಈ ಸಲ ರಾಯಣ್ಣ ಬ್ರಿಗೇಡ್ ಸಂಘಟನೆ ರಾಜ್ಯಾದ್ಯಂತ ಮಾಡಬೇಕು ಕುರಿತು ಚರ್ಚೆ ನಡೆಸಲಾಗಿದೆ.

ಯಾವುದೇ ರೀತಿಯ ಭಿನ್ನಾಭಿಪ್ರಾಯ ಅಧಿಕಾರದ ಲಾಲಸೆಗೆ ಒಳಗಾಗದಂತೆ ಸಂಘಟನೆಗೆ ಸಲಹೆ ಸೂಚನೆಗಳನ್ನು ಕೇಲವರು ನೀಡಿದ್ದುಯುವ ನಾಯಕತ್ಬ, ನಾಯಕತ್ವದಿಂದ ವಂಚಿತರಿಗೆ ಅವಕಾಶ ಕಲ್ಪಿಸಿ ಕೊಡಬೇಕು ಕೆ.ಎಸ್ ಈಶ್ವರಪ್ಪ ನವರು ಬ್ರಿಗೇಡ್ ಸಂಘಟನೆಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳಲು ಪದಾಧಿಕಾರಿಗಳ ಒತ್ತಾಯ ಮಾಡಿದರು.

ಈಶ್ವರಪ್ಪನವರಿಗೆ ಬಿಜೆಪಿಯಿಂದ ಸೇರ್ಪಡೆಗೆ ಮರು ಅವಕಾಶ ಬಂದರೆ ವಿಚಾರಿಸಿ ಸೇರ್ಪಡೆಗೆ ಅವಕಾಶ ಬಂದರೆ ಗಂಭೀರವಾಗಿ ಚಿಂತನೆ ಆಗಬೇಕು.ಈ ಸಲ ಬಿಜೆಪಿ ಸೇರ್ಪಡೆಗೆ ಆಹ್ವಾನ ಬಂದರೆ ತಂದೆ‌ ಮಕ್ಕಳಿಂದ ಮುಕ್ತಿ ನೀಡಬೇಕುಸಂಪೂರ್ಣ ಮುಕ್ತವಾದ ಸಂಘಟನೆಗೆ ನಾಯಕತ್ವ ಕ್ಕೆ ಅವಕಾಶ ಕೊಡಬೇಕು

ತಮ್ಮ ಕರಾರುಗಳಿಗೆ ಒಪ್ಪಿದರೆ ಮಾತ್ರ ಮರು ಸೇರ್ಪಡೆಯ ಚಿಂತನೆಗೆ ಇಂಗಿತ ವ್ಯಕ್ತಪಡಿಸಿದ ಈಶ್ವರಪ್ಪನವರು ತಮ್ಮದೇ ಆದ ಅಭಿಪ್ರಾಯ ತಿಳಿಸಿದರು ಎನ್ನಲಾಗಿದೆ. ಇನ್ನು ಸೆ. 22ರಂದು ವಿಜಯಪುರದಲ್ಲಿ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಪ್ರಮುಖರ ಸಭೆ ನಡೆಸಿ, ಆ ಸಭೆಯಲ್ಲಿ ಸಂಘಟನೆಗೆ ಈ ಮೊದಲಿನ ಹೆಸರಿಡಬೇಕೊ ಅಥವಾ ಹೊಸ ಹೆಸರು ಇಡಬೇಕೊ ಎಂಬುದರ ಕುರಿತು ನಿರ್ಧರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಕೊನೆಯ ಸಭೆ ಮಾಡಿ ಎಲ್ಲ ಜಿಲ್ಲೆಗಳ ಪ್ರಮುಖರ ಸಭೆ ನಡೆಸಿ, ಮುಂದಿನ ಹೋರಾಟದ ರೂಪರೇಷೆ ರೂಪಿಸಲು ನಿರ್ಧರಿಸಲಾಯಿತು. ಗೃಹ ಸಚಿವ ಅಮಿತ್ ಷಾ ಅವರ ಸೂಚನೆ ಮೇರೆಗೆ ನಾಲೈದು ವರ್ಷಗಳ ಹಿಂದೆ ಕೆ.ಎಸ್. ಈಶ್ವರಪ್ಪ ಅವರು ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನ ಚಟುವಟಿಕೆಗಳನ್ನು ತಟಸ್ಥಗೊಳಿಸಿದ್ದರು. ಇದೀಗ ಬಿಜೆಪಿಯಿಂದ ಹೊರಬಂದಿರುವ ಕೆ.ಎಸ್. ಈಶ್ವರಪ್ಪ ಅವರಿಗೆ ಕಳೆದ ಕೆಲ ತಿಂಗಳುಗಳಿಂದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಮರಳಿ ಪ್ರಾರಂಭಿಸುವಂತೆ ಅವರ ಅಭಿಮಾನಿಗಳು ಒತ್ತಾಯಿಸುತ್ತಿದ್ದರು.

ಈ ಹಿನ್ನೆಲೆಯಲ್ಲಿ ಸಂಘಟನೆ ಮರಳಿ ಪ್ರಾರಂಭಿಸಲು ತೀರ್ವನಿಸಿದ ಕೆ.ಎಸ್. ಈಶ್ವರಪ್ಪ, ಈ ಪ್ರಕ್ರಿಯೆಗೆ ಹುಬ್ಬಳ್ಳಿಯಿಂದಲೇ ಚಾಲನೆ ನೀಡಿದರು. ಸಂದರ್ಭದಲ್ಲಿ ಮಾತನಾಡಿದ ಕೆ.ಎಸ್. ಈಶ್ವರಪ್ಪ, ಮುಖ್ಯಮಂತ್ರಿ ಆಗಬೇಕೆಂಬ ಉದ್ದೇಶದಿಂದ ಸಂಘಟನೆಯನ್ನು ಮರಳಿ ಪ್ರಾರಂಭಿಸುತ್ತಿಲ್ಲ. ಯುವಕರಿಗೆ ನಾಯಕತ್ವ ನೀಡಬೇಕೆಂಬ ಉದ್ದೇಶದಿಂದ ಈ ಸಂಘಟನೆಗೆ ಮರಳಿ ಚಾಲನೆ ನೀಡುತ್ತಿರುವುದಾಗಿ ತಿಳಿಸಿದರು.

ಇನ್ನೂ ಸಭೆಯಲ್ಲಿ ಪ್ರಮುಖರಾದ ಕೆ. ಕಾಂತೇಶ, ಕೆ. ಮುಖಡಪ್ಪ, ಸಿದ್ದಣ್ಣ ತೇಜಿ, ವೀರಭದ್ರಪ್ಪ ಹಾಲಹರವಿ, ಕಾಶಿನಾಥ ಹುಡೇದ, ವೀರಣ್ಣ ಹಳೇಗೌಡರ, ಶಿವಾನಂದ ಮುತ್ತಣ್ಣವರ, ಪಾಂಡುರಂಗ ಪಮ್ಮಾರ , ಸಂಗೊಳ್ಳಿ ರಾಯಣ್ಣ ಬ್ರೀಗೆಡ್ ಪದಾಧಿಕಾರಿಗಳು ಮುಂತಾದವರು ಪಾಲ್ಗೊಂಡಿದ್ದರು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+