ಬೆಂಗಳೂರಲ್ಲಿ ಮೋದಿ : ಕ್ಷಣ-ಕ್ಷಣದ ಮಾಹಿತಿ

ಬೆಂಗಳೂರು, ಫೆಬ್ರವರಿ 04 : ಪ್ರಧಾನಿ ನರೇಂದ್ರ ಮೋದಿ ಭಾನುವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ. ಅರಮನೆ ಮೈದಾನದಲ್ಲಿ ನಡೆಯಲಿರುವ ನವ ಕರ್ನಾಟಕ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ.

ಭಾನುವಾರ ಸಂಜೆ 4 ಗಂಟೆಗೆ ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಸುಮಾರು 2 ಲಕ್ಷಕ್ಕೂ ಅಧಿಕ ಜನರು ಸಮಾವೇಶದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಮೋದಿ ಭೇಟಿ ಹಿನ್ನಲೆಯಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ನವೆಂಬರ್ 2ರಂದು ಆರಂಭವಾಗಿದ್ದ ಕರ್ನಾಟಕ ಬಿಜೆಪಿಯ ನವ ಕರ್ನಾಟಕ ಪರಿವರ್ತನಾ ಯಾತ್ರೆ 224 ಕ್ಷೇತ್ರಗಳಲ್ಲಿ ಸಂಚಾರ ನಡೆಸಿದೆ. ಇಂದು ಸಮಾರೋಪ ಸಮಾರಂಭ ನಡೆಯುತ್ತಿದೆ.

Narendra Modi

* ಹೆಬ್ಬಾಳ ಹೆಲಿಪ್ಯಾಡ್‌ಗೆ ಆಗಮನ, ಹೆಬ್ಬಾಳದಿಂದ ರಸ್ತೆ ಮಾರ್ಗದ ಮೂಲಕ ಅರಮನೆ ಮೈದಾನಕ್ಕೆ ಆಗಮನ

* ಮೋದಿ ಸ್ವಾಗತಿಸಿದ ರಾಜ್ಯಪಾಲ ವಜುಭಾಯಿ ವಾಲಾ, ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ರಾಜು

* ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಮೋದಿ ಆಗಮನ

* ಮಧ್ಯಾಹ್ನದ ಊಟಕ್ಕೆ ಪಲಾವ್, ರೈಸ್ ಬಾತ್, ಮೊಸರನ್ನದ ವ್ಯವಸ್ಥೆ. ಸಮಾವೇಶಕ್ಕೆ ಆಗಮಿಸಿರುವ ಲಕ್ಷಾಂತರ ಕಾರ್ಯಕರ್ತರು.

* ಸಮಾರೋಪ ಸಮಾರಂಭಕ್ಕೆ ಕ್ಷಣಗಣನೆ. ಅಂತಿಮ ಹಂತದ ಭದ್ರತಾ ಪರಿಶೀಲನೆ ನಡೆಸುತ್ತಿರುವ ಪೊಲೀಸರು, ಶ್ವಾನ ದಳ, ಬಾಂಬ್ ನಿಷ್ಕ್ರಿಯ ದಳ

* ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಳ್ಳಲು ನರೇಂದ್ರ ಮೋದಿ ದೆಹಲಿಯಿಂದ ವಿಶೇಷ ವಿಮಾನದಲ್ಲಿ ಹೊರಟಿದ್ದಾರೆ.

* 'ರಾಜ್ಯದ್ದು ನಂ.1 ಭ್ರಷ್ಟ ಸರ್ಕಾರ. ಭ್ರಷ್ಟ ಸರ್ಕಾರ ಎಂದು ಸಮೀಕ್ಷೆಗಳೇ ಹೇಳಿವೆ. ನಂಬರ್ 1ರಾಜ್ಯಕ್ಕೆ ಸ್ವಾಗತ ಅಂತ ಜಾಹೀರಾತು ಹಾಕುವುದು ಹಾಸ್ಯಸ್ಪದ' ಮಾಜಿ ಸಚಿವ ಆರ್.ಅಶೋಕ್ ಹೇಳಿಕೆ

* ಬೆಳಗಾವಿ ಜಿಲ್ಲೆಯಿಂದ 550 ಕ್ರೂಶರ್ ವಾಹನಗಳ ಮೂಲಕ 9 ಕಾರ್ಯಕರ್ತರು ಹಾಗೂ ರೈಲಿನ ಮೂಲಕ 1 ಸಾವಿರ ಕಾರ್ಯಕರ್ತರು ಬೆಂಗಳೂರಿಗೆ ಆಗಮಿಸಿದ್ದಾರೆ. ಪ್ರತಿ ಕ್ಷೇತ್ರದಿಂದ 30 ವಾಹನದ ಮೂಲಕ 500 ಕಾರ್ಯಕರ್ತರು ಬಂದಿದ್ದಾರೆ.

* ಸಮಾವೇಶಕ್ಕೆ 16 ಜಿಲ್ಲೆಗಳಿಂದ ಜನರನ್ನು ಕರೆತರಲು ಕೆಎಸ್‌ಆರ್‌ಟಿಸಿಯ 4,000 ಬಸ್‌, 3,000 ಖಾಸಗಿ ಬಸ್‌, ಜತೆಗೆ 2,000ಕ್ಕೂ ಜತೆಗೆ ಟೆಂಪೊ ಟ್ರಾವೆಲರ್‌ ವ್ಯವಸ್ಥೆ ಮಾಡಲಾಗಿದೆ.

* ನೆಲಮಂಗಲದ ನೀಲಕಂಠ ಹಾಲ್‌ನಲ್ಲಿಯೂ ಕಾರ್ಯಕರ್ತರಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿದೆ

* ಅರಮನೆ ಮೈದಾನದಲ್ಲಿ ಮಧ್ಯಾಹ್ನ 2 ಗಂಟೆಗೆ ಸಮಾವೇಶ ಆರಂಭವಾಗಲಿದೆ. 4 ಗಂಟೆಗೆ ನರೇಂದ್ರ ಮೋದಿ ಆಗಮಿಸಲಿದ್ದಾರೆ.

* ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಕಾರ್ಯಕರ್ತರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. 1,400ಕ್ಕೂ ಹೆಚ್ಚು ಬಸ್ಸುಗಳಲ್ಲಿ ಕಾರ್ಯಕರ್ತರು ನಗರಕ್ಕೆ ಆಗಮಿಸುತ್ತಿದ್ದಾರೆ.

* ತುಮಕೂರಿನ ಸಿದ್ದಗಂಗಾಮಠದಲ್ಲಿ ಉಪಹಾರ ಮುಗಿಸಿ ಕಾರ್ಯಕರ್ತರು ಬೆಂಗಳೂರಿನತ್ತ ಹೊರಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+