Namma Metro: ನನಗೆ ಕಾಂಗ್ರೆಸ್ ನಾಯಕರಂತೆ ಕೆಲಸ ಮಾಡಲು ಬರಲ್ಲ: ಸಂಸದ ತೇಜಸ್ವಿ ಸೂರ್ಯ ಹಿಂಗದಿದ್ಯಾಕೆ!
Namma Metro: ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ನನಗೆ ಕಾಂಗ್ರೆಸ್‌ನ ರೀತಿ ಕೆಲಸ ಮಾಡುವುದಕ್ಕೆ ಬರುವುದಿಲ್ಲ. ನಾನು ಹೊಸ ತಲೆಮಾರಿನ ಸಂಸದ ಹಾಗೂ ಹೊಸ ತಲೆಮಾರಿನ ರಾಜಕಾರಣಿ ಎಂದು ಹೇಳಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಅವರು ಈ ರೀತಿ ಹೇಳಿರುವುದು ಅಚ್ಚರಿ ಮೂಡಿಸಿದೆ. ಆದರೆ, ಇದನ್ನು ಕಾಂಗ್ರೆಸ್ ರಾಜಕೀಯ ಹಾಗೂ ಅಭಿವೃದ್ಧಿ ಉತ್ತಮವಾಗಿದೆ ಎಂಬರ್ಥದಲ್ಲಿ ಹೇಳಿಲ್ಲ. ಇಷ್ಟಕ್ಕೂ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಕಾಂಗ್ರೆಸ್ ಪಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ಗುರಿಯಾಗಿಸಿಕೊಂಡು ಹೇಳಿದ್ದೇನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಮೆಟ್ರೋ ಯೆಲ್ಲೋ ಲೈನ್ ಉದ್ಘಾಟನೆಗೆ ಸಂಬಂಧಿಸಿದಂತೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹಾಗೂ ರಾಜ್ಯ ಸರ್ಕಾರದ ನಡುವೆ ವಾಕ್ಸಮರ ಮುಂದುವರಿದಿದೆ. ಈ ಭಾಗದಲ್ಲಿ ಮೆಟ್ರೋ ಕಾಮಗಾರಿಗಳು ಪೂರ್ಣಗೊಂಡಿದ್ದರೂ. ಸಂಚಾರಕ್ಕೆ ಅನುವು ಮಾಡಿಕೊಡುತ್ತಿಲ್ಲ ಎನ್ನುವ ಗಂಭೀರ ಆರೋಪವನ್ನು ಸಂಸದ ತೇಜಸ್ವಿ ಸೂರ್ಯ ಅವರು ಮಾಡಿದ್ದರು. ಅಲ್ಲದೇ ಈ ಬಗ್ಗೆ ಸಂಸತ್‌ನಲ್ಲಿಯೂ ಸೂರ್ಯ ಅವರು ಪ್ರಸ್ತಾಪಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಬೆಂಗಳೂರು ಮೆಟ್ರೋ ಯೆಲ್ಲೋ ಲೈನ್ ಉದ್ಧಾಟನೆಗೆ ಸಿದ್ಧವಾಗಿದೆ. ಇದರ ನಡುವೆ ಕಾಂಗ್ರೆಸ್‌ನವರಂತೆ ನನಗೆ ಕೆಲಸ ಮಾಡುವುದಕ್ಕೆ ಬರಲ್ಲ ಎಂದು ತೇಜಸ್ವಿ ಸೂರ್ಯ ಅವರು ಕಾಂಗ್ರೆಸ್ ನಾಯಕರ ಕಾಲೆಳೆದಿದ್ದಾರೆ.

ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ನಮ್ಮ ಮೆಟ್ರೋ ಯೆಲ್ಲೋ ಪರಿಶೀಲನೆ ಮಾಡಿದ್ದು. ಇದಾದ ಮೇಲೆ ನನ್ನ ಬಗ್ಗೆ ಮಾತನಾಡಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಚಿಕ್ಕ ಹುಡುಗ ಅವನಿಗೆ ತುಂಬಾ ಅವಸರ ಅಂತಾ ಹೇಳಿದ್ದಾರೆ. ನಾನು ವಿನಯಪೂರ್ವಕವಾಗಿ ಹೇಳಲು ಇಚ್ಛಿಸುತ್ತೇನೆ ನಾನು ಹೊಸ ತಲೆಮಾರಿನವನು. ಅದಕ್ಕೆ ನನಗೆ ಅರ್ಜೆಂಟ್ ಆಗಿ ಕೆಲಸ ಆಗಬೇಕು ಅಂತಿದೆ. ಅದಕ್ಕೆ ನಾನು ಅರ್ಜೆಂಟ್ ಮಾಡ್ತಾ ಇದ್ದೀನಿ. ಬೆಂಗಳೂರಿನಲ್ಲಿ 2 ಕಿ.ಮೀ ಈಜಿಪುರ ಮೇಲ್ಸೇತುವೆ ಕಟ್ಟುವುದಕ್ಕೆ 8 ವರ್ಷದ ಮೇಲಾಯ್ತು. ಇದು ನಮ್ಮ ತಲೆಮಾರಿನವರಿಗೆ ಸರಿ ಅನಿಸುವುದಿಲ್ಲ. ಮೆಟ್ರೋ ಕಾಮಗಾರಿ ಪೂರ್ಣಗೊಂಡು 3ರಿಂದ 4 ವರ್ಷವಾದ ಮೇಲೂ ಪ್ರಾರಂಭವಾಗಲಿಲ್ಲ ಎಂದಾದರೆ ಜನಕ್ಕೆ ನಾವು ಇನ್ಯಾವ ವಿಷಯದಲ್ಲಿ ಅರ್ಜೆಂಟ್ ಮಾಡಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಅವರು ಪ್ರಶ್ನೆ ಮಾಡಿದ್ದಾರೆ.
ಕಾಂಗ್ರೆಸ್ ಪಾರ್ಟಿ ನಿಧಾನ ಮಾಡುವುದೇ ಅವರ ರಾಜಕೀಯ ಆಲಮಟ್ಟಿ ಜಲಾಶಯದ ಸ್ಟೋರಿ ಎಲ್ಲರಿಗೂ ಗೊತ್ತಿದೆ. ಅವರು ಯಾವ ಕಾಮಗಾರಿಯನ್ನೂ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿಲ್ಲ. ಈ ರೀತಿ ಕೆಲಸ ಮಾಡುವುದಕ್ಕೆ ನನಗೆ ಬರುವುದಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications