ಮೈಸೂರು ಅರಮನೆ ಫೋಟೋಶೂಟ್ ಸಾಧ್ಯವಾಗಿದ್ದು ಹೀಗೆ!

Written By:
Subscribe to Oneindia Kannada

ಮೈಸೂರು, ಮೇ 27: ವಿವಾದಕ್ಕೆ ಕಾರಣವಾಗಿದ್ದ ಮೈಸೂರು ಅರಮನೆಯ ಫೋಟೋಶೂಟ್ ನ ಹಿಂದಿನ ಸತ್ಯಇದೀಗ ಬಹಿರಂಗವಾಗಿದೆ. ಫೋಟೋ ಶೂಟ್ ನಲ್ಲಿ ಇದ್ದವರು ನಿವೃತ್ತ ಐಎಎಸ್ ಅಧಿಕಾರಿ ನಂದಕುಮಾರ್ ಅವರ ಪುತ್ರ ಆದಿತ್ಯ ಬಿಎನ್ ಎಂಬುದಕ್ಕೆ ಮತ್ತಟ್ಟು ಪುರಾವೆ ಸಿಕ್ಕಿದೆ.

ಮಗನ ಮದುವೆ ವೇಳೆ ನಂದಕುಮಾರ್ ಐಎಎಸ್ ಅಧಿಕಾರಿಯಾಗಿದ್ದರು. ನಂದಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿಯಾಗಿದ್ದರು. ಈ ಹುದ್ದೆಯಿಂದಲೇ ನಂದಕುಮಾರ್ ನಿವೃತ್ತರಾರಾದರು.[ಮೈಸೂರು ಅರಮನೆ ಫೋಟೋಶೂಟ್ ವಿವಾದ : ಏನು, ಎತ್ತ?]


mysuru

ಇಂಗ್ಲೆಂಡಿನ ನಾಟಿಂಗ್ಯಾಮ್ ವಿವಿಯಲ್ಲಿ ಓದಿರುವ ಆದಿತ್ಯ ಬಿಎನ್ ಮತ್ತು ನವ್ಯತಾ ಪೆಂಜುರಿ ವಿವಾಹ ಕಳೆದ ಫೆಬ್ರವರಿಯಲ್ಲಿ ನಡೆದಿತ್ತು. ಮದುವೆಗೆ ಮುನ್ನ ಮೈಸೂರು ಅರಮನೆಯಲ್ಲಿ ಈ ಫೋಟೋ ಶೂಟ್ ಮಾಡಲಾಗಿದೆ ಎಂಬ ಸಂಗತಿ ಇದೀಗ ಬಹಿರಂಗವಾಗಿದೆ.

ನಂದಕುಮಾರ್ ತಮ್ಮ ಅಧಿಕಾರ ದುರ್ಬಳಕೆ ಮಾಡಿ ಮಗನ ಫೋಟೋಶೂಟ್ ಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂಬ ಸಂಗತಿ ಮೇಲ್ನೋಟಕ್ಕೆ ಸತ್ಯವಾದಂತೆ ಕಂಡುಬರುತ್ತಿದೆ. ಫೋಟೋ ಶೂಟ್ ಬಗ್ಗೆ ತನಿಖೆ ಮಾಡುವಂತೆ ಮೈಸೂರು ಜಿಲ್ಲಾಧಿಕಾರಿ ಸಿ. ಶಿಖಾ ಆದೇಶ ನೀಡಿದ್ದಾರೆ.[ಜೂನ್ 27ಕ್ಕೆ ಯದುವೀರ್ ಒಡೆಯರ್ ವಿವಾಹ]

ವಿಡಿಯೋ ಡಿಲೀಟ್
ಇನ್ನೊಂದೆಡೆ ಯು ಟ್ಯೂಬ್ ಗೆ ಅಪ್ ಲೋಡ್ ಮಾಡಲಾಗಿದ್ದ ವಿಡಿಯೋವನ್ನು ಡಿಲೀಟ್ ಮಾಡಲಾಗಿದೆ. ಯೂಟ್ಯೂಬ್ ನಲ್ಲಿ ಹಂಚಿದ್ದ ವಿಡಿಯೋ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಫೇಸ್ ಬುಕ್ ಮತ್ತು ಟ್ವಿಟರ್ ನಲ್ಲಿ ಕನ್ನಡಿಗರು ತರಾಟೆಗೆ ತೆಗೆದುಕೊಂಡಿದ್ದರು. ಇದರ ಪರಿಣಾಮ ಶುಕ್ರವಾರ ಮುಂಜಾನೆ ಯೂ ಟ್ಯೂಬ್ ನಿಂದ ವಿಡಿಯೋವನ್ನು ತೆಗೆದು ಹಾಕಲಾಗಿದೆ.[ಯದುವೀರ ಒಡೆಯರ್ ಭಾವಿ ಪತ್ನಿ ರಾಜಸ್ಥಾನಿ ಕುವರಿ]

ಕಾನೂನು ಏನು ಹೇಳುತ್ತದೆ?
ಅರಮನೆಯೊಳಗೆ ಚಿತ್ರೀಕರಣ ಸಾಧ್ಯವಿಲ್ಲದ ಮಾತು, ಅದರಲ್ಲೂ ದರ್ಬಾರ್ ಹಾಲ್ ನಲ್ಲಿ ಫೋಟೋ ತೆಗೆಯುವುದನ್ನು ನಿಷೇಧ ಮಾಡಲಾಗಿದೆ. ಕೆಲವೊಂದು ಕಡೆ ಇದು ಗ್ರಾಫಿಕ್ ಬಳಸಿ ತಯಾರಿಸಿದ ವಿಡಿಯೋ ಎಂಬ ಮಾತು ಕೇಳಿಬಂದರೂ ಅಂತಿಮವಾಗಿ ಸತ್ಯಾಸತ್ಯತೆ ತನಿಖೆಯ ನಂತರ ತಿಳಿದು ಬರಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The secret is out! Controversial marriage photo shoot at Mysuru Palace of Aditya BN and Navyatha is real and done using influence of Nandakumar, father of Aditya. The photo shoot was done when Nandakumar was secretary of Kannada and Culture department. Will govt take action against these culprits?
Please Wait while comments are loading...