ದಸರಾ 2026 ಉದ್ಘಾಟಕರಾದ ಗವಿಮಠದ ಶ್ರೀಗಳ ಬಗ್ಗೆ ಸುಳ್ಳು ಸುದ್ದಿ: ಪೊಲೀಸರಿಂದ FIR

ಕೊಪ್ಪಳ: ಪ್ರಸಕ್ತ ವರ್ಷ ದಸರಾ ಉದ್ಘಾಟನೆಯನ್ನು ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಸ್ವಾಮೀಜಿ ಅವರು ನೆರವೇರಿಸಲಿದ್ದಾರೆ ಎಂದು ಖುದ್ದು ರಾಜ್ಯದ ಸಿಎಂ ಡಿಕೆ ಶಿವಕುಮಾರ್ ಅವರು ಹೇಳಿದ್ದರು. ಇದರ ಹೊರತಾಗಿಯೂ ಪರಿಸರ ಕಾರಣ ಹಾಗೂ ಷರತ್ತು ವಿಧಿಸಿ ಈ ಬಾರಿಯ ದಸರಾ ಉದ್ಘಾಟನೆಯನ್ನು ಗವಿಸಿದ್ಧೇಶ್ವರ ಶ್ರೀಗಳು ತಿರಸ್ಕೃರಿಸಿದ್ದಾರೆ ಎಂದು ಆನ್‌ಲೈನ್‌ನಲ್ಲಿ ಸುಳ್ಳು ಸುದ್ದಿ (ವದಂತಿ) ಹಬ್ಬಿಸಲಾಗಿತ್ತು. ಇದೀಗ ಪೊಲೀಸರು ಡಿಜಿಟಲ್ ಸುದ್ದಿ ವಾಹಿನಿವೊಂದರ ವಿರುದ್ಧ ಕೇಸ್ ದಾಖಲಿಸಿದ್ದಾರೆ.

ಇನ್ನೂ ಇದೇ ವಿಚಾರವಾಗಿ ಶ್ರೀ ಗವಿಮಠದಿಂದಲೂ ಸ್ಪಷ್ಟನೆ ಸಿಕ್ಕಿದ್ದು, ಶ್ರೀಗಳು ದಸರಾ ಆಹ್ವಾನ ತಿರಸ್ಕಾರ ಸುಳ್ಳು ಎಂದು ಹೇಳಿದ್ದಾರೆ. ಅಲ್ಲದೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರೂ ಆಗಿರುವ ಕೊಪ್ಪಳ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರು ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಶನಿವಾರವಷ್ಟೇ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೆ ಡಿಜಿಟಲ್ ಚಾನೆಲ್ ವೊಂದರ ಮೇಲೆ ಎಫ್‌ಐಆರ್ ದಾಖಲಾಗಿದೆ. ಇನ್ನೂ ಕೊಪ್ಪಳ ಪೊಲೀಸ್ ಇಂತಹ ಬೆಳವಣಿಗೆ ಆಗದಂತೆ ಕಟ್ಟೆಚ್ಚರ ವಹಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಟ್ಟಿದ್ದಾರೆ..

Mysuru Dasara 2026 dp

ಕೊಪ್ಪಳ ನಗರ ಠಾಣೆ ಪ್ರಕರಣ ದಾಖಲು

ಕೊಪ್ಪಳ ಎಸ್‌ಪಿ ಸಾಹಿಲ್ ಬಾಗ್ಲಾ ಅವರು ಸಾರ್ವಜನಿಕವಾಗಿ ಶಾಂತಿ ಕದಡುವ, ಶ್ರೀಗಳು, ಗಣ್ಯರ ವಿಚಾರದಲ್ಲಿ ವದಂತಿ, ಸುಳ್ಳು ಸಿದ್ದಿಗಳನ್ನು ಪಸರಿಸುವವರ ವಿರುದ್ಧ ಕಾನೂನು ರಿತ್ಯಾ ಕ್ರಮ ಜರುಗಿಸಲಾಗುವುದು. ದಸರಾ ಉದ್ಘಾಟನೆಗೆ ಸಂಬಂಧಿಸಿದಂತೆ ಸುಳ್ಳು ಮಾಹಿತಿ ಹರಡಿದವರ ಕುರಿತು ಕೊಪ್ಪಳ ನಗರ ಠಾಣೆಯಲ್ಲಿ ಡಿಜಿಟಲ್ ಸುದ್ದಿ ವಾಹಿನಿ ಮೇಲೆ ಸ್ವಯಂ ಪ್ರೇರಿತ ದೂರು ದಾಖಲಾಗಿದೆ.

ಸೆಪ್ಟೆಂಬರ್ 25ರಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ತಾವು ಗವಿಸಿದ್ಧೇಶ್ವರ ಶ್ರೀಗಳನ್ನು ಸಂಪರ್ಕಿಸಿದ್ದಾಗಿ, ಅವರು ಈ ಬಾರಿಯ ದಸರಾ ಉದ್ಘಾಟನೆಗೆ ಒಪ್ಪಿದ್ದಾರೆಂದು ತಿಳಿಸಿದ್ದರು. ಈ ಮೂಲಕ ಅವರ ಹೆಸರು ಸರ್ಕಾರದಿಂದ ಅಂತಿಮಗೊಂಡಿದೆ. ಅವರು ಒಪ್ಪಿದ್ದಾರೆ ಎಂಬುದು ರಾಜ್ಯದ ಜನರಿಗೆ ಸಷ್ಟವಾಗಿತ್ತು.

ಸೋಮವಾರ ಗವಿಮಠಕ್ಕೆ ತಂಗಡಗಿ ಭೇಟಿ, ಶ್ರೀಗಳಿಗೆ ಆಹ್ವಾನ

ಈ ನಡುವೆ ಗವಿಸಿದ್ಧೇಶ್ವರ ಶ್ರೀಗಳು ದರಸಾ ಉದ್ಘಾಟನೆಗೆ ಕಾರ್ಖಾನೆ, ಪರಿಸರ ಕಾರಣ ಹೇಳಿ ತಿರಸ್ಕಾರ ಮಾಡಿದ್ದಾರೆ ಎಂಬ ವದಂತಿ ಹಬ್ಬಿತು. ಕೂಡಲೆ ಸಚಿವ ಶಿವರಾಜ್ ತಂಗಡಿ ಅವರು ಸ್ಪಷ್ಟನೆ ನೀಡಿದರು. ಶ್ರೀಗಳು ದಸರಾ ಉದ್ಘಾಟನೆಗೆ ಒಪ್ಪಿದ್ದಾರೆ. ಈ ಬಗ್ಗೆ ಗೊಂದಲ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ. ಅಂಥವರು ಯಾರೇ ಆದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದಿದ್ದರು.

ಅಲ್ಲದೇ ಸರ್ಕಾರದ ವತಿಯಿಂದ ಸೋಮವಾರ ಸೆಪ್ಟಂಬರ್ 28ರಂದು ಸರ್ಕಾರದ ಪ್ರತಿನಿಧಿಗಳು ಮತ್ತು ತಾವು ಗವಿಮಠದಲ್ಲಿ ಶ್ರೀಗಳನ್ನು ಭೇಟಿ ಮಾಡಲಿದ್ದೇನೆ. ದಸರಾ ಕುರಿತು ಖುದ್ದು ಅಹ್ವಾನ ನೀಡಲು ಸಮಯ ನಿಗದಿ ಆಗಿದೆ ಎಂದು ತಂಗಡಗಿ ತಿಳಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+