Mysuru Dasara: ಮೈಸೂರು ದಸರಾ ಸಂಭ್ರಮದ ನಡುವೆ ಮತ್ತೊಂದು ಗುಡ್ ನ್ಯೂಸ್!
ಕನ್ನಡ ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಇಡೀ ಜಗತ್ತಿಗೆ ತಿಳಿಸುವ ಸಮಯ ಮತ್ತೆ ಬಂದಿದೆ. ನಾಡಹಬ್ಬ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲು ಕ್ಷಣಗಣನೆ ಆರಂಭವಾಗಿದೆ. ಶತ ಶತಮಾನದಿಂದ ಅದ್ಧೂರಿ & ಸಂಭ್ರಮದ ಹಬ್ಬವಾಗಿ ಆಚರಣೆಯಲ್ಲಿ ಇರುವ ಮೈಸೂರು ದಸರಾ-2024ರ ಸಂಭ್ರಮ ಕಣ್ತುಂಬಿಕೊಳ್ಳಲು ಕೋಟಿ ಕೋಟಿ ಜನ ಕಾಯುತ್ತಿದ್ದಾರೆ. ಈಗಾಗಲೇ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಹಬ್ಬದ ಸಂಭ್ರಮ ಕಳೆಗಟ್ಟಿದ್ದು, ಭದ್ರತೆಗೆ ಈಗ ಏನೆಲ್ಲಾ ಕ್ರಮ ಕೈಗೊಳ್ಳಲಾಗಿದೆ? ನೀವು ದಸರಾಗೆ ಹೋದರೆ ಏನು ಮಾಡಬೇಕು? ಮುಂದೆ ಓದಿ
ಮೈಸೂರು ದಸರಾ ಆಚರಿಸಲು ಇದೀಗ ಇಡೀ ಕರ್ನಾಟಕ ಸಜ್ಜಾಗಿದೆ. ನಾಡಹಬ್ಬ ದಸರಾ ಮಹೋತ್ಸವಕ್ಕೆ ಇನ್ನೇನು ಚಾಲನೆ ಸಿಗಲಿದೆ. ದಸರಾ ಮಹೋತ್ಸವದ ಹಿನ್ನೆಲೆ ಚಾಮುಂಡಿ ಬೆಟ್ಟ ಸೇರಿದಂತೆ ವಿವಿಧೆಡೆ 5 ಸಾವಿರ ಪೊಲೀಸರು ಭದ್ರತೆ ವ್ಯವಸ್ಥೆ ಕೈಗೊಳ್ಳಲಿದ್ದಾರೆ. ಈ ಬಗ್ಗೆ ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಮಾಹಿತಿ ನಿಡಿದ್ದು, ಅಹಿತಕರ ಘಟನೆ ನಡೆಯದಂತೆ ಒಟ್ಟು 2 ಹಂತದಲ್ಲಿ ಭದ್ರತೆ ಕಲ್ಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಮೂಲಕ ಮೈಸೂರು ದಸರಾ ಆಚರಣೆಗೆ ಇದೀಗ ಸಕಲ ಸಿದ್ಧತೆ ನಡೆಸಲಾಗುತ್ತಿದೆ.

13,140 ಕಾಯಂ ಸಿಸಿ ಕ್ಯಾಮೆರಾ ಜೊತೆಗೆ...
ಮೈಸೂರಿಗೆ ದಸರಾ ಸಮಯದಲ್ಲಿ ಬೇರೆ ಬೇರೆ ಊರುಗಳಿಂದ ಕೂಡ ಲಕ್ಷಾಂತರ ಜನಗಳು ಬರುತ್ತಾರೆ. ಹೀಗಿದ್ದಾಗ ಎಲ್ಲೆಲ್ಲೂ ಭದ್ರತೆಗಾಗಿ ಕಣ್ಗಾವಲು ಇಡಬೇಕಾದ ಅನಿರ್ಯಾತೆ ಇದೆ. 2024ರ ಮೈಸೂರು ದಸರಾ ಮಹೋತ್ಸವಕ್ಕೆ ಬರೋಬ್ಬರಿ 4999 ಪೊಲೀಸ್ ಅಧಿಕಾರಿಗಳನ್ನು ಮತ್ತು ಸಿಬ್ಬಂದಿಯನ್ನ ಭದ್ರತೆ ಕಾರಣಕ್ಕೆ ನಿಯೋಜನೆ ಮಾಡಲಾಗಿದೆ. ದಸರಾದ ಭದ್ರತೆಗಾಗಿ ಮೈಸೂರು ನಗರದಲ್ಲಿ ಈಗಾಗಲೇ ಅಳವಡಿಸಿರುವ 13,140 ಕಾಯಂ ಸಿಸಿ ಕ್ಯಾಮೆರಾದ ಜೊತೆಗೆ ಅರಮನೆ, ಬನ್ನಿ ಮಂಟಪ ಮೈದಾನ, ಮೆರವಣಿಗೆ ಮಾರ್ಗ ಮತ್ತು ಇತರೆ ಪ್ರಮುಖ ಸ್ಥಳಗಳಲ್ಲಿ ಹೆಚ್ಚುವರಿ 150 ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ, ಎಂದು ಮಾಹಿತಿ ನೀಡಿದ್ದಾರೆ ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಅವರು.
ಜನರಿಗಾಗಿ ಸಹಾಯ ಕೇಂದ್ರಗಳ ಸ್ಥಾಪನೆ
ಪ್ರವಾಸಿಗರಿಗೆ ಮಾಹಿತಿ ನೀಡಲು, ಸಾರ್ವಜನಿಕರಿಗೆ, ಅಗತ್ಯವಿರುವವರಿಗೆ ಪೊಲೀಸರ ಸಹಾಯ ನೀಡಲು ಮೈಸೂರು ನಗರದ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಸಹಾಯ ಕೇಂದ್ರ ತೆರೆಯುತ್ತೇವೆ ಎಂದು ಮಾಹಿತಿ ನೀಡಲಾಗಿದೆ. ಪೊಲೀಸ್ ಸಹಾಯ ಕೇಂದ್ರಕ್ಕೆ ನಿಯೋಜಿಸಿರುವ ಪೊಲೀಸರು, ಪ್ರವಾಸಿ ಮಿತ್ರರು, ಪ್ರವಾಸಿಗರಿಗೆ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಸೇರಿ, ಏಕಮುಖ ಸಂಚಾರ, ರಕ್ಷಣಾ ವ್ಯವಸ್ಥೆ ಕುರಿತು ಮಾಹಿತಿ ನೀಡಲಿದ್ದಾರೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಅವರು ತಿಳಿಸಿದ್ದಾರೆ.
ಆಹಾರ ಮೇಳ ನಡೆಸಲು ಸಿದ್ಧತೆ
ಇದರ ಜೊತೆಗೆ, ಮೊಬೈಲ್ ಕಮಾಂಡ್ ಸೆಂಟರ್ ಬಳಕೆ ಕೂಡ ಮಾಡಲಾಗುತ್ತದೆ. ಪೊಲೀಸ್ ಅಧಿಕಾರಿಗಳಿಗೆ ಬಾಡಿ ವೋರ್ನ್ ಕ್ಯಾಮೆರಾ ವಿತರಿಸುವ ತಯಾರಿ ನಡೆದಿದೆ. ದಸರಾ ಪ್ರಯಕ್ತ ಅರಮನೆ ಸೇರಿ 45 ಕಡೆ ನಾನಾ ಕಾರ್ಯಕ್ರಮಗಳು ನಡೆಯಲಿದ್ದು, ಮೊದಲ ಹಂತದಲ್ಲಿ 2996 ಸಿಬ್ಬಂದಿ ಹಾಗೂ ಎರಡನೇ ಹಂತದಲ್ಲಿ 4999 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಈ ಬಾರಿ ದಸರಾ ಮಹೋತ್ಸವ ಪ್ರಯುಕ್ತ ಸಾಕಷ್ಟು ಕಾರ್ಯಕ್ರಮದ ಸ್ಥಳ ಬದಲಾವಣೆ ಆಗಿದೆ. ಮಹಾರಾಜ ಕಾಲೇಜು ಮೈದಾನದಿಂದ ಯುವ ದಸರಾ ಹೊರ ವಲಯದ ಉತ್ತನಹಳ್ಳಿ ಸಮೀಪ ಸ್ಥಳಾಂತರ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಈಗ ಮಹಾರಾಜ ಕಾಲೇಜು ಮೈದಾನದಲ್ಲಿ ಆಹಾರ ಮೇಳ ನಡೆಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.












Click it and Unblock the Notifications