ಗದಗದಲ್ಲಿ ಅನ್ಯಗ್ರಹ ಜೀವಿಗಳ ಸುದ್ದಿ, ಸದ್ದು

Posted By:
Subscribe to Oneindia Kannada

ಗದಗ, ಜುಲೈ 11: ಇಲ್ಲಿನ ಅಂತೂರುಬೆಂತೂರಿನಲ್ಲಿ ಸೋಮವಾರ ರಾತ್ರಿ ನಿಗೂಢವಾದ ಶಬ್ದವನ್ನು ಕೇಳಿ ಜನರು ಗಾಬರಿ ಆಗಿದ್ದಾರೆ. ಬರೀ ಶಬ್ದ ಆಗಿದ್ದರೆ ಮಾರನೇ ದಿನ ಅಂದರೆ ಮಂಗಳವಾರ ಆ ಶಬ್ದವನ್ನು ಮರೆತು ಬಿಡುತ್ತಿದ್ದರೇನೋ! ಆದರೆ ಗ್ರಾಮದ ಹೊರ ವಲಯದ ಜಮೀನಿನಲ್ಲಿ ವಿಚಿತ್ರ ಹೆಜ್ಜೆ ಗುರುತುಗಳು ಕಾಣಿಸಿಕೊಂಡಿವೆ.

ಚಿಕನ್ ತಿನ್ನೋದಿಕ್ಕೆ ಒಂದು ವಾರ ರಜಾ ಕೇಳಿ ಪಡೆದ ರೈಲ್ವೆ ನೌಕರ

ಸೋಮವಾರ ರಾತ್ರಿ ಗ್ರಾಮದ ಕೆಲವರಿಗೆ ವಿಚಿತ್ರ ಶಬ್ದಗಳು ಕೇಳಿಸಿವೆ. ಮನೆಗಳಿಂದ ಹೊರಬಂದು ನೋಡಿದವರಿಗೆ ಏನೂ ಕಾಣಿಸಿಲ್ಲ. ಆದರೆ ಮಂಗಳವಾರ ಬೆಳಗ್ಗೆ ಶೌಚಕ್ಕೆ ತೆರಳಿದ ವೇಳೆ ಗ್ರಾಮದ ಹೊರವಲಯದ ಜಮೀನಿನಲ್ಲಿ ಅರ್ಧ ಅಡಿ ಅಗಲ ಹಾಗೂ ಒಂದು ಅಡಿ ಉದ್ದದ ಹೆಜ್ಜೆ ಗುರುತು ಕಾಣಿಸಿಕೊಂಡು, ವಿಪರೀತ ಚರ್ಚೆಗೆ ಕಾರಣವಾಗಿದೆ.

Mysterious sound in Gadag, suspicion of aliens

ಅಂದಹಾಗೆ, ಈ ರೀತಿಯ ಹೆಜ್ಜೆ ಯಾವುದರದು ಇರಬಹುದು ಎಂಬುದು ಸದ್ಯಕ್ಕೆ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿಗೂ ಗ್ರಾಮಸ್ಥರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇನ್ನೊಂದು ಕಡೆ, ಇದು ಅನ್ಯಗ್ರಹ ಜೀವಿಗಳ ಹೆಜ್ಜೆ ಗುರುತು ಎಂಬ ಗುಸುಗುಸು ಶುರುವಾಗಿದೆ. ಇಂಥ ಗೊಂದಲವನ್ನೆಲ್ಲ ವಿಜ್ಞಾನಿಗಳೇ ಬಗೆಹರಿಸಬೇಕು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mysterious sound heard in Anthur Benthur village, Gadag district on Monday night. Also big foot marks found on Tuesday morning. Villagers suspecting of aliens.
Please Wait while comments are loading...