ಮೈಸೂರು ಮಿನರಲ್ಸ್ ಹಗರಣ, ಮಹೇಂದ್ರ ಜೈನ್ ಗೆ ಜಾಮೀನು
ಬೆಂಗಳೂರು, ಆ.4 : ಮೈಸೂರು ಮಿನರಲ್ಸ್ ಕಂಪನಿಗೆ ನಷ್ಟ ಉಂಟು ಮಾಡಿದ ಪ್ರಕರಣದಲ್ಲಿ ಐಎಎಸ್ ಅಧಿಕಾರಿ ಮಹೇಂದ್ರ ಜೈನ್ ಗೆ ಷರತ್ತು ಬದ್ಧ ಜಾಮೀನು ಸಿಕ್ಕಿದೆ. ಕಂಪನಿಗೆ 300ಕೋಟಿ ರೂ. ನಷ್ಟ ಉಂಟುಮಾಡಿದ ಪ್ರಕರಣವಿದಾಗಿದೆ.
ಐಎಎಸ್ ಅಧಿಕಾರಿ ಮಹೇಂದ್ರ ಜೈನ್ ಮತ್ತು ಇತರ ನಾಲ್ಕು ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ಗುರುವಾರ ಷರತ್ತುಬದ್ಧ ಜಾಮೀನು ನೀಡಿದೆ. ನಾಲ್ವರು ಆರೋಪಿಗಳು ಹೈಕೋರ್ಟ್ ಗೆ ಪ್ರತ್ಯೇಕ ಜಾಮೀನು ಅರ್ಜಿ ಸಲ್ಲಿಸಿದ್ದರು.

ಮಹೇಂದ್ರ ಜೈನ್ 2006-08ರ ಅವಧಿಯಲ್ಲಿ ಮೈಸೂರು ಮಿನರಲ್ಸ್ ವ್ಯಕವಸ್ಥಾಪಕ ನಿರ್ದೇಶಕರಾಗಿದ್ದರು. ಈ ಅವಧಿಯಲ್ಲಿ ನಡೆದ ಅದಿರು ಸಾಗಣೆ ಹಗರಣದಲ್ಲಿ ಅವರಿಂದ ಬೊಕ್ಕಸಕ್ಕೆ 300 ಕೋಟಿ ನಷ್ಟ ಉಂಟಾಗಿದೆ. ಲೋಕಾಯುಕ್ತ ಎಸ್ಐಟಿ ಈ ಹಗರಣದ ತನಿಖೆ ನಡೆಸುತ್ತಿದೆ.
ಮಹೇಂದ್ರ ಜೈನ್, ಡಾ.ಡಿ.ಎಸ್.ಅಶ್ವಥ್, ಶಂಕರಲಿಂಗಯ್ಯ ಮತ್ತು ಕೆ.ಶ್ರೀನಿವಾಸ್ ಈ ಪ್ರಕರಣದ ಆರೋಪಿಗಳು. ಕಂಪನಿಯಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟ ಉಂಟಾಗಿದೆ ಎಂಬುದಕ್ಕೆ ಗಣಿತದ ತಪ್ಪು ಲೆಕ್ಕವೇ ಕಾರಣ ಎಂದು ಜೈನ್ ಹಿಂದೊಮ್ಮೆ ಹೇಳಿದ್ದರು.












Click it and Unblock the Notifications