Munirathna Naidu: ಆಂಧ್ರ ಮೂಲದ ಮುನಿರತ್ನಂ ನಾಯ್ಡುಗೆ ಕನ್ನಡಿಗ ಮಹಿಳೆಯರು ಅಂದ್ರೆ ಎಲ್ಲಿಲ್ಲದ ದ್ವೇಷವಂತೆ?
ಆಂಧ್ರ ಪ್ರದೇಶದ ಚಿತ್ತೂರು ಮೂಲದ ಮುನಿರತ್ನಂ ನಾಯ್ಡು ವಿರುದ್ಧ ಒಂದೊಂದೇ ಭಾರಿ ಗಂಭೀರ ಆರೋಪ ಕೇಳಿ ಬರುತ್ತಿದೆ. ಅದ್ರಲ್ಲೂ ಮುನಿರತ್ನಂ ನಾಯ್ಡು ವಿರುದ್ಧ 'ಹನಿಟ್ರ್ಯಾಪ್' ಆರೋಪ ಕೇಳಿಬಂದ ನಂತರ, ಇದೀಗ ಮುನಿರತ್ನಂ ನಾಯ್ಡು ವಿರುದ್ಧ ಮತ್ತೊಂದು ಭಾರಿ ಗಂಭೀರ ಆರೋಪ ಕೇಳಿ ಬಂದಿದೆ. ಹಾಗಿದ್ರೆ, ಆಂಧ್ರ ಮೂಲದ ಮುನಿರತ್ನಂ ನಾಯ್ಡುಗೆ ಕನ್ನಡಿಗ ಮಹಿಳೆಯರು ಅಂದ್ರೆ ಎಲ್ಲಿಲ್ಲದ ದ್ವೇಷವಂತೆ? ಹೀಗೆ ಆರೋಪ ಮಾಡಿದ್ದು ಯಾರು? ಬನ್ನಿ ಸಂಪೂರ್ಣ ಮಾಹಿತಿ ತಿಳಿಯೋಣ.
ಮುನಿರತ್ನಂ ನಾಯ್ಡು ಅವರ ಕುಟುಂಬ ಹತ್ತಾರು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಸೆಟಲ್ ಆಗಿತ್ತು. ಹೀಗೆ ಆಂಧ್ರ ಪ್ರದೇಶದ ಚಿತ್ತೂರು ಮೂಲದ ಮುನಿರತ್ನಂ ನಾಯ್ಡು ಅವರಿಗೆ ಕನ್ನಡಿಗರನ್ನು ಕಂಡರೆ ಅದರಲ್ಲೂ ಕನ್ನಡಿಗ ಮಹಿಳೆಯರ ಮೇಲೆ ಕೋಪ ಎಂಬ ಗಂಭೀರ ಆರೋಪವನ್ನ ಮಾಡಲಾಗಿದೆ. ಅತ್ಯಾಚಾರ ಸಂಬಂಧ ಸಂತ್ರಸ್ತೆ ಒಬ್ಬರು ದೂರು ದಾಖಲಿಸಿ ಮುನಿರತ್ನಂ ನಾಯ್ಡು ವಿರುದ್ಧ ಗಂಭೀರ ಆರೋಪಗಳ ಪಟ್ಟಿಯನ್ನೇ ನೀಡಿದ್ದು, ಒಕ್ಕಲಿಗರು & ದಲಿತರ ಬಗ್ಗೆ ಬಾಯಿಗೆ ಬಂದ ರೀತಿ ಮಾತನಾಡಿರುವ ಮುನಿರತ್ನಂ ನಾಯ್ಡು ಅವರಿಗೆ ಕನ್ನಡದ ಹೆಣ್ಣುಮಕ್ಕಳ ಮೇಲೆ ಕೂಡ ಕೋಪ ಎಂಬ ಆರೋಪ ಮಾಡಿದ್ದಾರೆ!

ಕುಸುಮಾ ವಿರುದ್ಧ 'ಏಡ್ಸ್' ಅಸ್ತ್ರ?
ರಾಜರಾಜೇಶ್ವರಿ ನಗರದ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದ ಕುಸುಮಾ ಹನುಮಂತರಾಯಪ್ಪ ಬಗ್ಗೆ ಕೂಡ, ಮುನಿರತ್ನಂ ನಾಯ್ಡು ಕೆಟ್ಟ ಕೆಟ್ಟ ಪದಗಳನ್ನ ಬಳಸಿ ಬೈದಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಆರೋಪದ ನಡುವೆ ಕುಸುಮಾ ಹನುಮಂತರಾಯಪ್ಪ ಅವರಿಗೆ 'ಏಡ್ಸ್' ರೋಗಿಗಳ ರಕ್ತ ಚುಚ್ಚಿಸುವ ಪ್ರಯತ್ನ ಕೂಡ ಮಾಡಿದ್ದರು ಎಂಬ ಗಂಭೀರ ಆರೋಪ ಕೂಡ ಹೊರಿಸಲಾಗಿದೆ. ಇಷ್ಟೆಲ್ಲಾ ಆರೋಪ & ಆಕ್ರೋಶದ ನಡುವೆ ಇದೀಗ ಕನ್ನಡದವರ ಮೇಲೆ ಮುನಿರತ್ನಂ ನಾಯ್ಡು ಅಟ್ಟಹಾಸ ತೋರಿದ್ದರು ಎಂಬ ಆರೋಪ ಕೂಡ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಆಕ್ರೋಶ ಕೂಡ ಡಬಲ್ ಆಗುತ್ತಿದೆ.
ಮುನಿರತ್ನಂ ನಾಯ್ಡುಗೆ ಭಾರಿ ಸಂಕಷ್ಟ!
ಒಟ್ನಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ಇದೀಗ ಮುನಿರತ್ನಂ ನಾಯ್ಡು ವಿರುದ್ಧ ಆರೋಪದ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚನೆ ಮಾಡಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಕರಣಗಳು ಶಾಸಕ ಮುನಿರತ್ನಂ ನಾಯ್ಡು ವಿರುದ್ಧ ದಾಖಲಾಗುವ ಸಾಧ್ಯತೆ ದಟ್ಟವಾಗಿದೆ. ಅದರಲ್ಲೂ ಮುನಿರತ್ನಂ ನಾಯ್ಡು ಶಾಸಕರಾಗಿರುವ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಅಕ್ರಮವಾಗಿ ಬಿಲ್‌ಗಳನ್ನ ಮಾಡಿ, ಕೋಟಿ ಕೋಟಿ ವಂಚನೆ ಮಾಡಿದ್ದಾರೆ ಎಂಬ ಗಂಭೀರ ಆರೋಪವೂ ಇದೆ. ಹೀಗಾಗಿ ಮುಂದಿನ ದಿನಗಳಲ್ಲಿ ಮುನಿರತ್ನಂ ನಾಯ್ಡು ಎಲ್ಲಾ ಸಂಕಷ್ಟ ಒಟ್ಟಿಗೆ ಎದುರಿಸಬೇಕಾದ ಅನಿವಾರ್ಯತೆ ಎದುರಾದರೂ ಅಚ್ಚರಿ ಇಲ್ಲ.












Click it and Unblock the Notifications