Munirathna Naidu: ಮುನಿರತ್ನಂ ನಾಯ್ಡುಗೆ ಜೈಲು ಫಿಕ್ಸ್?
ದಲಿತ ಸಮುದಾಯದ ಬಗ್ಗೆ & ಒಕ್ಕಲಿಗ ಸಮುದಾಯದ ಕುರಿತು ಅಶ್ಲೀಲ ಪದ ಬಳಕೆ ಮಾಡಿ. ಬಿಬಿಎಂಪಿ ಗುತ್ತಿಗೆದಾರ & ಒಕ್ಕಲಿಗ ಸಮುದಾಯದ ವ್ಯಕ್ತಿಯ ಹೆಂಡತಿ & ತಾಯಿನ ಮಂಚಕ್ಕೆ ಕಳುಹಿಸು ಎಂದು ಕೆಟ್ಟದಾಗಿ ಮಾತನಾಡಿರುವ ಆರೋಪ, ಮುನಿರತ್ನಂ ನಾಯ್ಡು ವಿರುದ್ಧ ಕೇಳಿಬಂದಿದೆ. ಹೀಗೆ ಮುನಿರತ್ನಂ ನಾಯ್ಡು ವಿರುದ್ಧ ಇದೀಗ ಜಾತಿ ನಿಂದನೆ ಮತ್ತು ಕೊಲೆ ಬೆದರಿಕೆ ಕೇಸ್ ದಾಖಲು ಮಾಡಲಾಗಿದೆ. ಈ ನಡುವೆ ಪೊಲೀಸರು ದಾಖಲು ಮಾಡಿರುವ ಕೇಸ್ ನೋಡಿದರೆ, ಶಾಸಕ ಮುನಿರತ್ನಂ ನಾಯ್ಡುಗೆ ಜೈಲು ಫಿಕ್ಸ್?...
ಮುನಿರತ್ನಂ ನಾಯ್ಡು ದಲಿತರು & ಒಕ್ಕಲಿಗರನ್ನ ನಿಂದಿಸಿದ್ದಾರೆ ಎಂಬ ಆರೋಪ ದೇಶಾದ್ಯಂತ ಸಂಚಲನ ಸೃಷ್ಟಿ ಮಾಡಿದೆ. ಅಲ್ಲದೆ ಮುನಿರತ್ನಂ ನಾಯ್ಡು ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಮುನಿರತ್ನಂ ನಾಯ್ಡು ಮೊದಲಿನಿಂದ ಕೂಡ ತಮ್ಮ ಕೆಟ್ಟ ಕೆಟ್ಟ ಭಾಷೆಗೆ ಫೇಮಸ್, ಹೀಗೆ ಅವರ ಮನೆ ಮುಂದೆ ಒಕ್ಕಲಿಗರು & ದಲಿತರು ಹೋದ್ರೆ ಅವರನ್ನ ಶಾಸಕ ಮುನಿರತ್ನಂ ನಾಯ್ಡು ಕೆಟ್ಟದಾಗಿ ಬೈಯುತ್ತಾರೆ ಅನ್ನೋದು ಮಾಜಿ ಕಾರ್ಪೋರೇಟರ್ & ಸ್ವತಃ ಮುನಿರತ್ನ ಅವರ ಆಪ್ತನಾಗಿದ್ದ ವೇಲು ನಾಯ್ಕರ್ ಆರೋಪ. ಹೀಗಿದ್ದಾಗಲೇ ಮುನಿರತ್ನಂ ನಾಯ್ಡು ಆಂಧ್ರಗೆ ಎಸ್ಕೇಪ್ ಆಗುತ್ತಿದ್ದರು ಎನ್ನುವಾಗ ಕರ್ನಾಟಕದ ಪೊಲೀಸರು ಚೇಸ್ ಮಾಡಿ ಸಿನಿಮೀಯ ರೀತಿ ಲಾಕ್ ಮಾಡಿದ್ದರು. ಪರಿಸ್ಥಿತಿ ಹೀಗಿದ್ದಾಗಲೇ ಇದೀಗ, ಶಾಸಕ ಮುನಿರತ್ನಂ ನಾಯ್ಡುಗೆ ಜೈಲು ಫಿಕ್ಸ್?...

ಮುನಿರತ್ನಂ ನಾಯ್ಡುಗೆ ಜೈಲು ಫಿಕ್ಸ್?
ಪೊಲೀಸರು ಇದೀಗ ಶಾಸಕ ಮುನಿರತ್ನಂ ನಾಯ್ಡು ವಿರುದ್ಧ, ಕಠಿಣ ಸೆಕ್ಷೆನ್‌ಗಳ ಅಡಿಯಲ್ಲಿ ಕೇಸ್ ದಾಖಲಿಸಿ ಎಫ್‌ಐಆರ್ ಮಾಡಿದ್ದಾರೆ. ಹಾಗೇ ಪೊಲೀಸರು ಹಾಕಿರುವ ಬಹುತೇಕ ಸೆಕ್ಷನ್ ನೋಡಿದರೆ ಜಾಮೀನು ಸಿಗುವುದು ಅನುಮಾನ. ಮತ್ತೊಂದು ಕಡೆ ಜಾತಿ ನಿಂದನೆ ಆರೋಪ ದಿನದಿಂದ ದಿನಕ್ಕೆ ಮುನಿರತ್ನಂ ನಾಯ್ಡು ವಿರುದ್ಧ ಸುತ್ತಿಕೊಳ್ಳುತ್ತಿದೆ. ಈ ಪರಿಸ್ಥಿತಿಯಲ್ಲಿ ಈಗ ಮುನಿರತ್ನಂ ನಾಯ್ಡು ಹಾಗೂ ಬಿಬಿಎಂಪಿ ಗುತ್ತಿಗೆದಾರ ಚಲುವರಾಜು ಆಡಿಯೋ ಸ್ಯಾಂಪಲ್ ಪಡೆದು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದಾರೆ. ಅಕಸ್ಮಾತ್ ಈ ಪರೀಕ್ಷೆಯಲ್ಲಿ ಮುನಿರತ್ನಂ ನಾಯ್ಡು ಆಡಿಯೋ ಮ್ಯಾಚ್ ಆಗಿ, ಜಾತಿ ನಿಂದನೆ ಮಾಡಿದ್ದು ಸತ್ಯ ಎಂಬುದು...
ಜಾತಿ ನಿಂದನೆ ಕೇಸ್ ಸಂಕಷ್ಟ?
ಮುನಿರತ್ನಂ ನಾಯ್ಡು ಹಾಗೂ ಚಲುವರಾಜು ನಡುವೆ ನಡೆದ ಸಂಭಾಷಣೆ ಒಂದರಲ್ಲಿ, ಈ ಪ್ರಕರಣದ ಪ್ರಮುಖ ಆರೋಪಿ ಮುನಿರತ್ನಂ ನಾಯ್ಡು ದಲಿತರ ಬಗ್ಗೆ ಕೆಟ್ಟ ಕೆಟ್ಟ ಪದಗಳನ್ನ ಬಳಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದರ ಜೊತೆಗೆ ಒಕ್ಕಲಿಗರ ಮನೆ ಮಹಿಳೆ & ತಾಯಿ ಬಗ್ಗೆ ಕೂಡ ಕೆಟ್ಟದಾಗಿ ಮಾತನಾಡಿದ್ದಾರೆ ಮುನಿರತ್ನಂ ನಾಯ್ಡು, ಎಂಬ ಆರೋಪ ಕೂಡ ಕೇಳಿ ಬಂದಿದೆ. ಕರ್ನಾಟಕದ ಮೂಲೆ ಮೂಲೆಯಲ್ಲೂ ಮುನಿರತ್ನಂ ನಾಯ್ಡು ಬಗ್ಗೆ ಆಕ್ರೋಶ ಮೊಳಗಿ, ಪ್ರತಿಭಟನೆ ಆರಂಭ ಆಗಿವೆ.
ಪರಿಸ್ಥಿತಿ ಹೀಗಿದ್ದಾಗ ಇದೀಗ ಎಫ್‌ಎಸ್‌ಎಲ್ (FSL) ಪರೀಕ್ಷೆ ನಂತರ ಮುನಿರತ್ನಂ ನಾಯ್ಡು ದಲಿತ ಸಮುದಾಯದ ಬಗ್ಗೆ ಜಾತಿ ನಿಂದನೆ ಮಾಡಿರುವುದು ಸತ್ಯ & ಈ ಆಡಿಯೋ ಅಸಲಿ ಎಂಬುದು ಸಾಬೀತು ಆದರೆ ಸಂಕಷ್ಟ ಗ್ಯಾರಂಟಿ. ಹೀಗೆ ಮುನಿರತ್ನಂ ನಾಯ್ಡುಗೆ ಜೈಲು ಶಿಕ್ಷೆ ಆಗುವುದು ಕೂಡ ಗ್ಯಾರಂಟಿ ಎನ್ನಲಾಗಿದೆ. ಮತ್ತೊಂದು ಕಡೆಯಲ್ಲಿ ಮುನಿರತ್ನಂ ನಾಯ್ಡು ಶಾಸಕ ಸ್ಥಾನ ಕೂಡ ತೂಗುಯ್ಯಾಲೆ ಆಗಿದ್ದು, ಬಿಜೆಪಿ ಪಕ್ಷದಿಂದ ಉಚ್ಛಾಟನೆ ಮಾಡುತ್ತಾರಾ? ಎಂಬ ಪ್ರಶ್ನೆ ಮೂಡಿದೆ.












Click it and Unblock the Notifications