Get Updates
Get notified of breaking news, exclusive insights, and must-see stories!

ಆಂಧ್ರ ಮೂಲದ ಮುನಿರತ್ನ ನಾಯ್ಡು ಆಂಧ್ರಗೆ ಎಸ್ಕೇಪ್ ಆಗುವಾಗ ಕರ್ನಾಟಕ ಪೊಲೀಸರ ಬಲೆಯಲ್ಲಿ ಲಾಕ್!

ಮುನಿರತ್ನ ನಾಯ್ಡು ಈಗ ದಲಿತರು & ಮಹಿಳೆಯರ ಬಗ್ಗೆ ಹಾಗೂ ಒಕ್ಕಲಿಗ ಸಮುದಾಯದ ವಿರುದ್ಧ ಕೆಟ್ಟ ಕೆಟ್ಟದಾಗಿ ಮಾತನಾಡಿದ ಆರೋಪದ ಕಾರಣಕ್ಕೆ ಪೊಲೀಸರ ಅತಿಥಿ ಆಗಿದ್ದಾರೆ. ಆಂಧ್ರದ ಚಿತ್ತೂರು ಮೂಲದಿಂದ ಬಂದು ಬೆಂಗಳೂರಲ್ಲಿ ಕೋಟೆ ಕಟ್ಟಿಕೊಂಡಿದ್ದ ಮುನಿರತ್ನ ನಾಯ್ಡು ವಿರುದ್ಧ ಕನ್ನಡಿಗರು ನಿನ್ನೆಯಿಂದಲೂ ಆಕ್ರೋಶ ಹೊರ ಹಾಕುತ್ತಿದ್ದರು. ದಲಿತರ ಕುರಿತು ಕೆಟ್ಟ ಕೆಟ್ಟ ಪದ ಬಳಕೆ ಮಾಡಿ, ನಿಂದನೆ ಮಾಡಿದ್ದ ಆಂಧ್ರ ಮೂಲದ ಮುನಿರತ್ನ ನಾಯ್ಡುಗೆ ಪೊಲೀಸರು ಬುದ್ಧಿ ಕಲಿಸಬೇಕು ಎಂದು ಕನ್ನಡಿಗರು ಆಗ್ರಹಿಸಿದ್ದರು. ಹೀಗಿದ್ದಾಗಲೇ ದಿಢೀರ್ ಮುನಿರತ್ನ ನಾಯ್ಡು...

ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ನಾಯ್ಡು ಇದೀಗ ಪೊಲೀಸರ ಅತಿಥಿ ಆಗಿದ್ದಾರೆ. ಮುನಿರತ್ನ ನಾಯ್ಡು ಲಂಚದ ಬೇಡಿಕೆ ಇಟ್ಟು, ನನಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನುವ ಆರೋಪ ಮಾಡಿದ್ದಾರೆ ಬಿಬಿಎಂಪಿ ಗುತ್ತಿಗೆದಾರ ಚಲುವರಾಜು. ಮುನಿರತ್ನ ನಾಯ್ಡು ಹೀಗೆ ಬೆದರಿಕೆ ಹಾಕುವ ಸಮಯದಲ್ಲಿ, ಕರ್ನಾಟಕದ ದಲಿತರು & ಒಕ್ಕಲಿಗರು, ಮಹಿಳೆಯರ ಬಗ್ಗೆ ನಿಂದನೆ ಮಾಡಿರುವ ಆರೋಪ ಇರುವ ಆಡಿಯೋ ಕೂಡ ಬಯಲು ಮಾಡಿದ್ದಾರೆ ಬಿಬಿಎಂಪಿ ಗುತ್ತಿಗೆದಾರ ಚಲುವರಾಜು. ಹೀಗಿದ್ದಾಗ ಸೋಷಿಯಲ್ ಮೀಡಿಯಾದಲ್ಲಿ ಕನ್ನಡಿಗರು ಇದೀಗ ರೊಚ್ಚಿಗೆದ್ದಿದ್ದು, ಮುನಿರತ್ನ ನಾಯ್ಡು ವಿರುದ್ಧ ಕ್ರಮಕ್ಕೆ ಆಗ್ರಹ ಮಾಡುತ್ತಿದ್ದಾರೆ. ಈ ಹಿನ್ನೆಲೆ ಮುನಿರತ್ನ ನಾಯ್ಡು ಬಂಧನಕ್ಕೆ ಬಲೆ ಬೀಸಿದ್ದ ಪೊಲೀಸರಿಗೆ ಏನಾಯ್ತು ಗೊತ್ತ? ಮುಂದೆ ಓದಿ.

Munirathna Naidu Is Tried To Go Andhra Pradesh From Kolar

ಗುತ್ತಿಗೆದಾರರಿಗೆ ಬೆದರಿಕೆ ಹಾಕುತ್ತಿದ್ರಾ?

ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ನಾಯ್ಡು ಸಾಲು ಸಾಲು ಆರೋಪ ಎದುರಿಸ್ತಿದ್ದಾರೆ. ಮುನಿರತ್ನ ನಾಯ್ಡು ವಿರುದ್ಧ ಹಲವು ತಿಂಗಳಿಂದ ಸಾಲು ಸಾಲು ಆರೋಪ ಕೇಳಿಬಂದಿವೆ. ಅದರಲ್ಲೂ ಮುನಿರತ್ನ ನಾಯ್ಡು ಪದೇ ಪದೇ ಲಂಚಕ್ಕೆ ಬೇಡಿಕೆ ಇಡುತ್ತಾರೆ ಎಂದು BBMP ಗುತ್ತಿಗೆದಾರರು ಆರೋಪ ಮಾಡುತ್ತಿದ್ದಾರೆ. ಹೀಗಿದ್ದಾಗಲೇ ಕಸದ ಟೆಂಡರ್ ಪಡೆದು BBMPಗೆ ಗುತ್ತಿಗೆ ಸೇವೆ ನೀಡುತ್ತಿದ್ದ ಮಾಗಡಿ ಮೂಲದ & ಹಲವು ವರ್ಷಗಳಿಂದ ಆರ್‌ಆರ್ ನಗರದಲ್ಲಿ ನೆಲೆಸಿರುವ ಚಲುವರಾಜುಗೆ ಕೊಲೆ ಬೆದರಿಕೆ ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.

30 ಲಕ್ಷ ರೂಪಾಯಿಗೆ ಡಿಮ್ಯಾಂಡ್?

ಅಷ್ಟಕ್ಕೂ ಶಾಸಕ ಮುನಿರತ್ನ ನಾಯ್ಡು & ಜೊತೆಗಾರರು ಚಲುವರಾಜುಗೆ ಸುಮಾರು 30 ಲಕ್ಷ ರೂಪಾಯಿಗೂ ಹೆಚ್ಚು ಹಣಕ್ಕೆ ಬೇಡಿಕೆ ಇಟ್ಟಿದ್ದಾರಂತೆ, ಎಂಬ ಆರೋಪ ಮಾಡಲಾಗಿತ್ತು. ಇದರ ಜೊತೆ ಚಲುವರಾಜು ಮನೆಯ ಹೆಣ್ಣು ಮಕ್ಕಳ ಬಗ್ಗೆ ಕೂಡ ಕೆಟ್ಟ ಕೆಟ್ಟ ಪದಗಳನ್ನು ಬಳಕೆ ಮಾಡಿರುವ ಆರೋಪ ಕೇಳಿಬಂದಿತ್ತು. ಹೀಗಾಗಿ ಆರ್‌ಆರ್ ನಗರ ಶಾಸಕ ಮುನಿರತ್ನ ನಾಯ್ಡು ಬಗ್ಗೆ ಆಕ್ರೋಶ ಮೊಳಗುತ್ತಿದೆ. ಮತ್ತೊಂದು ಕಡೆ ದಲಿತ ಸಂಘಟನೆಗಳು ಕೂಡಲೇ ಬೃಹತ್ ಹೋರಾಟ ಮಾಡಬೇಕು ಎಂಬ ಆಗ್ರಹ ಮಾಡುತ್ತಿದ್ದರು ನೆಟ್ಟಿಗರು. ಹೀಗೆಲ್ಲಾ ಕಿಚ್ಚು ಹೊತ್ತಿಕೊಂಡ ಹಿನ್ನೆಲೆ ಇದೀಗ ಆಂಧ್ರ ಮೂಲದ ಮುನಿರತ್ನ ನಾಯ್ಡು ಪೊಲೀಸರಿಗೆ ಲಾಕ್ ಆಗಿದ್ದಾರೆ.

ಡಿ-ಬಾಸ್ ಸೈಲೆಂಟ್ ಆಗಿದ್ದು ಏಕೆ?

ದರ್ಶನ್ ತೂಗುದೀಪ್‌ಗೆ ಅಹಂಕಾರ & ಕೋಪವೇ ಮುಳ್ಳಾಗಿ ಪರಿಣಮಿಸಿದೆ ಎನ್ನುವ ಆರೋಪ ಇದೆ. ರೇಣುಕಾಸ್ವಾಮಿ ಕಿಡ್ನಾಪ್ ಮಾಡಲು ಸ್ವತಃ ದರ್ಶನ್ ತೂಗುದೀಪ್ ಸುಪಾರಿ ಕೊಟ್ಟು, ನಂತರ ಬೆಂಗಳೂರಿನ ಪಟ್ಟಣಗೆರೆ ಶೆಡ್‌ಗೆ ಕರೆದುಕೊಂಡು ಬಂದು ಮರ್ಮಾಂಗಕ್ಕೆ ಒದ್ದಿದ್ದೂ ಇದೆ ಎಂಬ ಆರೋಪ ಇದೆ. ಅದರಲ್ಲೂ ದರ್ಶನ್ ತೂಗುದೀಪ್ ಈ ರೀತಿ ರೇಣುಕಾಸ್ವಾಮಿಗೆ ಹಿಂಸೆ ಕೊಟ್ಟಿರುವುದಕ್ಕೆ & ಕಿಡ್ನಾಪ್ ಮಾಡಿಕೊಂಡು ಚಿತ್ರದುರ್ಗದಿಂದ ಕರೆದುಕೊಂಡು ಬರಲು ಆರ್ಡರ್ ಮಾಡಿದ್ದಕ್ಕೂ ಸಾಕ್ಷ್ಯಗಳು ಸಿಕ್ಕಿವೆ. ಪರಿಸ್ಥಿತಿ ಹೀಗಿದ್ದಾಗ ರೇಣುಕಾಸ್ವಾಮಿಯ ಬರ್ಬರ ಕೊಲೆ ಕೇಸ್‌ನಲ್ಲಿ ದರ್ಶನ್ ತೂಗುದೀಪ್ ಪ್ರಮುಖ ಆರೋಪಿ ಆಗಿದ್ದಾನೆ. ಇಷ್ಟಾದರೂ ಈಗ ಮೀಡಿಯಾಗಳಿಗೆ ಬೆರಳು ತೋರಿಸಿ ತನ್ನ ಬುಡಕ್ಕೆ ತಾನೆ ಬೆಂಕಿ ಹಚ್ಚಿಕೊಂಡಿದ್ದಾನೆ ಎನ್ನುವ ಅಭಿಪ್ರಾಯ ದರ್ಶನ್ ವಿರೋಧಿಗಳದ್ದು. ಹೀಗಿದ್ದಾಗಲೇ ಬಳ್ಳಾರಿ ಜೈಲಿನ ಅಧಿಕಾರಿಗಳಿಂದ ಕೂಡ ಎಚ್ಚರಿಕೆ ಪಡೆದಿದ್ದಾನೆ ಕೊಲೆ ಆರೋಪಿ ದರ್ಶನ್ ತೂಗುದೀಪ!

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+