Mumbai-Mangalore Special Train: ದೀಪಾವಳಿ ಹಬ್ಬಕ್ಕಾಗಿ ಮುಂಬೈ- ಮಂಗಳೂರು ವಿಶೇಷ ರೈಲು- ದಿನಾಂಕ, ಸಮಯ, ವಿವರ

ಬೆಂಗಳೂರು, ಅಕ್ಟೋಬರ್‌ 14: ದೀಪಾವಳಿ ಹಬ್ಬದ ಜನಸಂದಣಿ ಕಡಿಮೆ ಮಾಡಲು ಮುಂಬೈ ಮತ್ತು ಮಂಗಳೂರು ನಡುವೆ ವಿಶೇಷ ರೈಲು ಸೇವೆಗಳನ್ನು ಘೋಷಿಸಲಾಗಿದೆ. 2023 ರ ದೀಪಾವಳಿ ಹಬ್ಬದ ಸಮಯದಲ್ಲಿ ಪ್ರಯಾಣಿಕರ ಬೇಡಿಕೆಯನ್ನು ಪೂರೈಸಲು ಭಾರತೀಯ ರೈಲ್ವೆ ಇಲಾಖೆ ಈ ನಿರ್ಧಾರವನ್ನು ಕೈಗೊಂಡಿದೆ.

ಕೇಂದ್ರ ರೈಲ್ವೇ ಮತ್ತು ದಕ್ಷಿಣ ರೈಲ್ವೆಯ ಜಂಟಿಯಾಗಿ ಈ ಈ ವಿಶೇಷ ರೈಲುಗಳನ್ನು ಬಿಡಲಾಗುತ್ತಿದೆ ಎಂದು ರೈಲ್ವೇ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Mumbai-Mangaluru Special Train for Diwali Festival - Date, Time, Details

ಮುಂಬೈ-ಮಂಗಳೂರು ರೈಲು- ವಿವರ ಪಡೆಯಿರಿ

ರೈಲು ಸಂಖ್ಯೆ 01185 / 01186 ಲೋಕಮಾನ್ಯ ತಿಲಕ್ ರೈಲ್ವೆ ನಿಲ್ದಾಣ ಮುಂಬೈ - ಮಂಗಳೂರು ಜಂಕ್ಷನ್‌ - ಲೋಕಮಾನ್ಯ ತಿಲಕ್ ರೈಲ್ವೆ ನಿಲ್ದಾಣ ಸಾಪ್ತಾಹಿಕ ವಿಶೇಷ

ರೈಲು ಸಂಖ್ಯೆ. 01185: ಲೋಕಮಾನ್ಯ ತಿಲಕ್ ರೈಲ್ವೆ ನಿಲ್ದಾಣ ಮುಂಬೈ - ಮಂಗಳೂರು ಜಂಕ್ಷನ್ ಸಾಪ್ತಾಹಿಕ ವಿಶೇಷ

ಅಕ್ಟೋಬರ್ 20, 2023 ಮತ್ತು ಡಿಸೆಂಬರ್ 1, 2023 ರ ನಡುವೆ ಪ್ರತಿ ಶುಕ್ರವಾರ 22:15 ಕ್ಕೆ ಲೋಕಮಾನ್ಯ ತಿಲಕ್ ರೈಲ್ವೆ ನಿಲ್ದಾಣ ಮುಂಬೈನಿಂದ ಹೊರಡಲಿದೆ. ರೈಲು ಮಂಗಳೂರು ಜಂಕ್ಷನ್‌ಗೆ ಮರುದಿನ 17:05 ಗಂಟೆಗೆ ಆಗಮಿಸಲಿದೆ.

Mumbai-Mangaluru Special Train for Diwali Festival - Date, Time, Details

ರೈಲು ಸಂಖ್ಯೆ 01186: ಮಂಗಳೂರು ಜಂಕ್ಷಣ್‌ - ಲೋಕಮಾನ್ಯ ತಿಲಕ್ ರೈಲ್ವೆ ನಿಲ್ದಾಣ ಮುಂಬೈ ವಾರದ ವಿಶೇಷ

ಅಕ್ಟೋಬರ್ 21, 2023 ರಿಂದ ಡಿಸೆಂಬರ್ 2, 2023 ರ ವರೆಗೆ ಪ್ರತಿ ಶನಿವಾರ 18:45 ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಡಲಿದೆ. ಇದು ಮರುದಿನ 14:25 ಗಂಟೆಗೆ ಲೋಕಮಾನ್ಯ ತಿಲಕ್ ನಿಲ್ದಾಣಕ್ಕೆ ಆಗಮಿಸಲಿದೆ.

ಮುಂಬೈ- ಮಂಗಳೂರು ವಿಶೇಷ ರೈಲು ಥಾಣೆ, ಪನ್ವೇಲ್, ರೋಹಾ, ಮಂಗಾಂವ್, ಖೇಡ್, ಚಿಪ್ಲೂನ್, ಸಂಗಮೇಶ್ವರ ರಸ್ತೆ, ರತ್ನಗಿರಿ, ಕಂಕಾವಲಿ, ಸಿಂಧುದುರ್ಗ, ಕುಡಾಲ್, ಸಾವಂತವಾಡಿ ರಸ್ತೆ, ಥಿವಿಂ, ಕರ್ಮಾಲಿ, ಮಡಗಾಂವ್ ಜಂ., ಕಾರವಾರ, ಗೋಕರ್ಣ ಸೇರಿದಂತೆ ವಿವಿಧ ನಿಲ್ದಾಣಗಳಲ್ಲಿ ನಿಲುಗಡೆ ಮಾಡುತ್ತದೆ. ಕುಮಟಾ, ಮುರ್ಡೇಶ್ವರ, ಭಟ್ಕಳ, ಮೂಕಾಂಬಿಕಾ ರಸ್ತೆ ಬೈಂದೂರು, ಕುಂದಾಪುರ, ಉಡುಪಿ, ಮುಲ್ಕಿ, ಮತ್ತು ಸುರತ್ಕಲ್ ನಿಲ್ದಾಣಗಳಲ್ಲಿಯೂ ಈ ವಿಶೇಷ ರೈಲಿನ ನಿಲುಗಡೆ ಇರಲಿದೆ.

Mumbai-Mangaluru Special Train for Diwali Festival - Date, Time, Details

ಕೋಚ್ ಸಂಯೋಜನೆ

ಈ ರೈಲುಗಳ ಒಟ್ಟು ಸಂಯೋಜನೆಯು 21 ಕೋಚ್‌ಗಳನ್ನು ಒಳಗೊಂಡಿದೆ. 2 ಟೈರ್ ಎಸಿ - 01 ಕೋಚ್, 3 ಟೈರ್ ಎಸಿ - 05 ಕೋಚ್‌ಗಳು, ಸ್ಲೀಪರ್ - 08 ಕೋಚ್‌ಗಳು, ಜನರಲ್ - 05 ಕೋಚ್‌ಗಳು, ಎಸ್‌ಎಲ್‌ಆರ್ - 02 ಕೋಚ್‌ಗಳನ್ನು ಒಳಗೊಂಡಿರುತ್ತದೆ.

ರೈಲಿನ ನಿಲುಗಡೆಗಳು ಮತ್ತು ಸಮಯದ ಬಗ್ಗೆ ನಿರ್ದಿಷ್ಟ ವಿವರಗಳಿಗಾಗಿ, ಪ್ರಯಾಣಿಕರು ಭಾರತೀಯ ರೈಲ್ವೇಯ ಅಧಿಕೃತ ವಿಚಾರಣೆ ವೆಬ್‌ಸೈಟ್‌ಗೆ ಭೇಟಿ ನೀಡಬೇಕೆಂದು ಅಧಿಕಾರಿಗಳು ಹೇಳಿದ್ದಾರೆ. ಅನುಕೂಲಕರ ವಿವರಗಳನ್ನು ಪಡೆಯಲು ಎನ್‌ಟಿಇಎಸ್‌ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಲು ತಿಳಿಸಲಾಗಿದೆ.

ದೀಪಾವಳಿ ಹಬ್ಬದ ಸಮಯದಲ್ಲಿ ಸುಗಮ ಮತ್ತು ಆರಾಮದಾಯಕ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಈ ವಿಶೇಷ ರೈಲು ಸೇವೆಗಳನ್ನು ಬಳಸಿಕೊಳ್ಳುವಂತೆ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+