Get Updates
Get notified of breaking news, exclusive insights, and must-see stories!

ಕರ್ನಾಟಕದಾದ್ಯಂತ ವಿದೇಶಿ ಬ್ರ್ಯಾಂಡ್‌ನ ಹೈಟೆಕ್ ಮದ್ಯ ಮಳಿಗೆ ತೆರೆಯಲು ಸರ್ಕಾರದ ಚಿಂತನೆ?

ಬೆಂಗಳೂರು, ಆಗಸ್ಟ್‌ 9: ಆದಾಯವನ್ನು ಸುಧಾರಿಸುವ ನಿಟ್ಟಿನಲ್ಲಿ ಒಂದು ದೊಡ್ಡ ಹೆಜ್ಜೆಯಾಗಿ ಸರ್ಕಾರದ ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್ (MSIL) ವಿದೇಶಿ ಮದ್ಯವನ್ನು ಮಾರಾಟ ಮಾಡಲು ರಾಜ್ಯದಾದ್ಯಂತ ಹೈಟೆಕ್ ಮಳಿಗೆಗಳನ್ನು ತೆರೆಯಲು ಸಜ್ಜಾಗಿದೆ ಎಂದು ಡಿಎಚ್‌ ವರದಿ ಮಾಡಿದೆ.

ಈ ಮಳಿಗೆಗಳೊಂದಿಗೆ MSIL ವಾರ್ಷಿಕವಾಗಿ 200 ಕೋಟಿ ಹೆಚ್ಚುವರಿ ಆದಾಯವನ್ನು ಗಳಿಸುವ ನಿರೀಕ್ಷೆಯಲ್ಲಿದೆ. ಮೂಲಗಳ ಪ್ರಕಾರ, ಈ ಮಳಿಗೆಗಳು ರಾಜ್ಯದಾದ್ಯಂತ ಬಂದಿರುವ ಬೃಹತ್ ಖಾಸಗಿ ಮದ್ಯದ ಶೋರೂಂಗಳಂತೆಯೇ ಇರುತ್ತವೆ.

MSIL is planing of opening high-tech liquor stores of foreign brands across Karnataka

ಮೊದಲ ಹಂತದಲ್ಲಿ MSIL ಬೆಂಗಳೂರಿನಲ್ಲಿ 10 ಮಳಿಗೆಗಳನ್ನು, ಬೆಳಗಾವಿ, ಮೈಸೂರು, ಮಂಗಳೂರು, ದಾವಣಗೆರೆ ಮತ್ತು ಇತರ ದೊಡ್ಡ ನಗರಗಳಲ್ಲಿ ಎರಡು ಮಳಿಗೆಗಳನ್ನು ಮತ್ತು ಪ್ರತಿ ಜಿಲ್ಲಾ ಕೇಂದ್ರದಲ್ಲಿ ಒಂದು ಆಧುನಿಕ ಮಳಿಗೆಗಳನ್ನು ತೆರೆಯಲು ಯೋಜಿಸಿದೆ. ಮುಂದಿನ ಹಂತದಲ್ಲಿ ಇನ್ನೂ 40 ಮಳಿಗೆಗಳನ್ನು ತೆರೆಯಲು ಅಧಿಕಾರಿಗಳು ಯೋಜಿಸಿದ್ದಾರೆ.

ಅಧಿಕಾರಿಗಳ ಪ್ರಕಾರ ಬೆಂಗಳೂರಿನಲ್ಲಿ 1,500 ಚದರ ಅಡಿ ಪ್ರದೇಶದಲ್ಲಿ ಮತ್ತು ಇತರ ಜಿಲ್ಲಾ ಕೇಂದ್ರಗಳಲ್ಲಿ 1,000 ಚದರ ಅಡಿ ವಿಸ್ತೀರ್ಣದಲ್ಲಿ ಆಕರ್ಷಕ ಮಳಿಗೆಗಳನ್ನು ತೆರೆಯುವ ಪ್ರಸ್ತಾವನೆಯನ್ನು ಜಾರಿ ಮಾಡಲಾಗುತ್ತಿದೆ. ಇದರೊಂದಿಗೆ ಇತರ ಹಲವು ನಗರಗಳಲ್ಲಿ ಜಾಗವನ್ನು ಗುರುತಿಸಲಾಗುತ್ತಿದೆ. ಈ ಮಳಿಗೆಗಳು ಸ್ಕಾಚ್, ವಿಸ್ಕಿ, ವೋಡ್ಕಾ, ವೈನ್ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿರುವ ಇತರ ಆಲ್ಕೋಹಾಲ್‌ಗಳನ್ನು ಮಾರಾಟ ಮಾಡುತ್ತವೆ.

ದುಬಾರಿ ಮದ್ಯ ಮಾರಾಟ ಖಾಸಗಿ ಅಂಗಡಿಗಳಿಗೆ ಸೀಮಿತವಾಗಬಾರದು. ಎಂಎಸ್‌ಐಎಲ್ ಶ್ರೀಮಂತ ಗ್ರಾಹಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ. MSIL ಈ ಹೈಟೆಕ್ ಸ್ಟೋರ್‌ಗಳಿಗೆ ವಿಶಿಷ್ಟ ಮತ್ತು ಆಕರ್ಷಕ ಹೆಸರನ್ನು ನೀಡಲು ಬಯಸಿದ್ದು, ಈಗ ಸಾರ್ವಜನಿಕ ಸಲಹೆಗಳಿಗೆ ಮುಕ್ತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾಗರಿಕರು ತಮ್ಮ ಸಲಹೆಗಳನ್ನು [email protected] ಗೆ ಸಲ್ಲಿಸಬಹುದು.

2009 ರಲ್ಲಿ MRP ಗಿಂತ ಹೆಚ್ಚಿನ ಮದ್ಯ ಮಾರಾಟವನ್ನು ತಡೆಯಲು ಸರ್ಕಾರವು MSIL ಗೆ 463 ಮದ್ಯ ಮಾರಾಟ ಪರವಾನಗಿಗಳನ್ನು ವಿತರಿಸಿತ್ತು. ಈ ಮಳಿಗೆಗಳ ಯಶಸ್ಸಿನ ನಂತರ ಇನ್ನೂ 900 ಮಳಿಗೆಗಳನ್ನು ಸ್ಥಾಪಿಸಲು ಅನುಮೋದನೆ ನೀಡಲಾಯಿತು. ಪ್ರಸ್ತುತ, ರಾಜ್ಯದಾದ್ಯಂತ ಸುಮಾರು 1,023 ಎಂಎಸ್‌ಐಎಲ್ ಮದ್ಯದಂಗಡಿಗಳು ಕಾರ್ಯನಿರ್ವಹಿಸುತ್ತಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+