MP Sports Festival: ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರಮಟ್ಟಕ್ಕೆ ತೆರಳುವ ಕ್ರೀಡಾ ಪ್ರತಿಭೆಗಳಿಗೆ ಬೆಂಬಲ: ಬೊಮ್ಮಾಯಿ
ಹಾವೇರಿ/ರಾಣೆಬೆನ್ನೂರು: ಕರ್ನಾಟಕದಲ್ಲಿ ಪ್ರತಿಭೆಗಳು ಸಾಕಷ್ಟಿದ್ದಾರೆ. ಅವರಿಗೆ ಪ್ರೋತ್ಸಾಹ ನೀಡುವ ಅಗತ್ಯವಿದೆ. ಜಿಲ್ಲಾ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡುವ ಕ್ರೀಡಾಪಟುಗಳಿಗೆ ರಾಜ್ಯ ಮತ್ತು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟಕ್ಕೆ ತೆರಳಲು ಅಗತ್ಯವಿರುವ ಎಲ್ಲ ರೀತಿಯ ವ್ಯವಸ್ಥೆಯನ್ನು ನಾನು ಮಾಡಿಕೊಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಯ ನೀಡಿದರು.
ರಾಣೆಬೆನ್ನೂರಿನಲ್ಲಿ ಆಯೋಜಿಸಿದ್ದ ಸಂಸದರ ಕ್ರೀಡಾ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಣೆಬೆನ್ನೂರಿನ ಇತಿಹಾಸದಲ್ಲಿ ಈ ಥರಾ ಕ್ರೀಡಾ ಮಹೋತ್ಸವನ್ನು ನಾನು ನೋಡಿರಲಿಲ್ಲ. ಅಷ್ಟು ಅದ್ಭುತ ಕ್ರೀಡಾ ಮಹೋತ್ಸವ ನಡೆದಿದ್ದು, ಎರಡು ಕಣ್ಣುಗಳು ಸಾಲುತ್ತಿಲ್ಲ. ಅಷ್ಟು ಅದ್ಭುತವಾಗಿದೆ ಎಂದು ಆಯೋಜಕರನ್ನು ಹೊಗಳಿದರು. ರಾಣೆಬೆನ್ನೂರು ಉತ್ತರ ಕರ್ನಾಟಕದ ಹೆಬ್ಬಾಗಿಲು, ಇಲ್ಲಿ ಏನಾಗುತ್ತದೆ. ಅದು ಉತ್ತರ ಕರ್ನಾಟಕದಲ್ಲಿ ಆಗುತ್ತದೆ. ಇಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಅದು ಇಡೀ ಉತ್ತರ ಕರ್ನಾಟಕದಲ್ಲಿ ಆಗುತ್ತದೆ ಎಂದು ಹೇಳಿದರು.

ದೈಹಿಕ ಮಾನಸಿಕ ಶಕ್ತಿ ವೃದ್ಧಿಗೆ ಕ್ರೀಡೆ ಮುಖ್ಯ
ದೈಹಿಕ ಮಾನಸಿಕ ಶಕ್ತಿ ಹೆಚ್ಚಿಸಿಕೊಳ್ಳಲು ಕ್ರೀಡೆ ಬಹಳ ಮುಖ್ಯ. ಕ್ರೀಡೆಯಿಂದ ನಮ್ಮ ಆರೋಗ್ಯ ಮತ್ತು ಚಾರಿತ್ರ್ಯವೂ ಚೆನ್ನಾಗಿರುತ್ತದೆ. ಕ್ರೀಡೆಯಿಂದ ನಮ್ಮ ಜೀವನದಲ್ಲಿ ಪಾಠ ಕಲಿಯುವುದು ಬಹಳ ಇದೆ. ನಾನು ಪುಟ್ಟ ಪುಟ್ಟ ಹೆಣ್ಣು ಮಕ್ಕಳು ಕಬಡ್ಡಿ ಆಡುವುದನ್ನು ನೋಡಿದೆ. ಅವರು ಮೈದಾನಕ್ಕೆ ಬಂದ ಮೇಲೆ ಸಿಂಹದ ಮರಿಯ ಹಾಗೆ ಆಟ ಆಡಿದರು. ರಾಣೆಬೆನ್ನೂರಿನ ಗ್ರಾಮಗಳಲ್ಲಿ ಪ್ರತಿಭೆ ಇದೆ. ಅವರಿಗೆ ತರಬೇತಿ ಕೊಟ್ಟು ಅವಕಾಶ ಕೊಟ್ಟರೆ ಅವರು ರಾಷ್ಟ್ರೀಯ ಮಟ್ಟಕ್ಕೆ ಹೋಗುತ್ತಾರೆ.
ಕ್ರೀಡೆಯಿಂದ ಸೋಲು ಗೆಲುವು ಸಮನಾಗಿ ತೆಗೆದುಕೊಂಡು ಹೋಗುವುದು ತಿಳಿಯುತ್ತದೆ. ಸುಖ ದುಖವನ್ನು ಸಮನಾಗಿ ತೆಗೆದುಕೊಳ್ಳಬೇಕು ಅದನ್ನು ಕ್ರೀಡೆ ಕಲಿಸಿಕೊಡುತ್ತದೆ. ಇನ್ನೊಬ್ಬ ಕ್ರೀಡಾಪಟುವನ್ನು ಹಾಗೂ ಇನ್ನೊಬ್ಬ ವ್ಯಕ್ತಿಯನ್ನು ಗೌರವಿಸುವುದನ್ನು ಕೀಡೆ ಕಲಿಸಿಕೊಡುತ್ತದೆ ಎಂದರು.
ಕೊವಿಡ್ ನಂತರವೂ ದೇಶ ಆರ್ಥಿಕ ಪ್ರಗತಿಯತ್ತ..
ನಮ್ಮ ಪಧಾನಿ ನರೇಂದ್ರ ಮೋದಿಯವರು ಈ ದೇಶವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಕೊವಿಡ್ ನಂತರ ಅನೇಕ ದೇಶಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಆದರೆ, ನಮ್ಮ ದೇಶ ಕೊವಿಡ್ ನಂತರವೂ ಆರ್ಥಿಕವಾಗಿ ವೇಗವಾಗಿ ಬೆಳಯುತ್ತಿದೆ. ಶೇ 7.5 ರಷ್ಟು ವೇಗವಾಗಿ ಬೆಳೆಯುತ್ತಿದೆ. ಅಮೇರಿಕಾ ಬೆಳವಣಿಗೆ ಶೇ 4 ದಾಟಿಲ್ಲ. ಚೀನಾ ಶೇಕಡಾ 3 ದಾಟಿಲ್ಲ. ಮೋದಿಯವರು 25 ಕೋಟಿ ಜನರನ್ನು ಬಡತನದಿಂದ ಮುಕ್ತ ಮಾಡಿದ್ದಾರೆ.
ಇಂದು ಮಕ್ಕಳಿಗೆ ಪರೀಕ್ಷೆ ಎದುರಿಸುವುದನ್ನು ಹೇಳಿಕೊಟ್ಟಿದ್ದಾರೆ. ಮೋದಿಯವರು ಕ್ರೀಡೆಯ ಬಗ್ಗೆ ಮೊದಲು ಫಿಟ್ ಇಂಡಿಯಾ ಅಂದರು, ನಂತರ ಖೇಲೋ ಇಂಡಿಯಾ ಅಂದರು ನಂತರ ಜೀತೊ ಇಂಡಿಯಾ ಅಂದರು. ಅದರ ಪರಿಣಾಮ ಟೊಕಿಯೊ ಓಲಿಂಪಿಕ್ಸ್‌ನಲ್ಲಿ ಹೆಚ್ಚು ಪದಕ ಪಡೆಯಲು ಸಾಧ್ಯವಾಯಿತು. ನಾನು ಸಿಎಂ ಆಗಿದ್ದಾಗ 75 ಕ್ರೀಡಾಪಟುಗಳಿಗೆ ಪ್ರತಿ ವರ್ಷ 8 ಲಕ್ಷ ಕೊಟ್ಟು ತರಬೇತಿ ಕೊಡಿಸಿದ್ದೆ. ಕರ್ನಾಟಕದಲ್ಲಿ ಪ್ರತಿಭೆ ಇದೆ ಅದಕ್ಕೆ ಪೋತ್ಸಾಹ ನೀಡುವ ಅಗತ್ಯವಿದೆ. ಕ್ರೀಡೆಯಲ್ಲಿ ಮುಂದೆ ಬರಲು ನಮ್ಮ ಮನೋಭಾವನೆ ಬದಲಾಗಬೇಕು. ನಾವು ಸೋಲಬಾರದು ಎಂದು ಆಡುವುದು ರಕ್ಷಣಾತ್ಮಕ ಆಟ. ಗೆಲ್ಲಬೇಕು ಎನ್ನುವುದು ಅಕ್ರಮಣಕಾರಿ ಆಟ. ನಮ್ಮ ಬದುಕಿನಲ್ಲಿ ಮುಂದೆ ಬರಬೇಕಾದರೆ ಕಠಿಣ ಪರಿಶ್ರಮದಿಂದ ಮುಂದೆ ಬರಬೇಕು ಅದನ್ನು ಕ್ರೀಡೆ ಕಲಿಸಿಕೊಡುತ್ತದೆ ಎಂದು ಹೇಳಿದರು.
ಕ್ರೀಡಾ ಮಹೋತ್ಸವದಲ್ಲಿ ಅದ್ಬುತ ವ್ಯವಸ್ಥೆ
ಕ್ರೀಡಾ ಮಹೋತ್ಸವದಲ್ಲಿ ವ್ಯವಸ್ಥೆ ಬಹಳ ಅದ್ಭುತವಾಗಿದೆ. ಕ್ರೀಡಾಪಟುಗಳಿಗೆ, ರೆಫರಿಗಳಿಗೆ ಪ್ರೇಕ್ಷಕರಿಗೆ ನಿರೀಕ್ಷೆಗೂ ಮೀರಿ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಗೆದ್ದವರಿಗೂ ಅಭಿನಂದನೆ, ಸೋತವರಿಗೆ ಮುಂದಿನ ಬಾರಿ ಮತ್ತೆ ಅವಕಾಶ ಸಿಗುವಂತಾಗಲಿ, ಪ್ರೇಕ್ಷಕರಿಗೆ ಮುಂದಿನ ಬಾರಿ ಆಟ ಆಡುವ ಹುಮ್ಮಸು ಬರಲಿ. ಯುವ ನಾಯಕ ಅರುಣ್ ಕುಮಾರ್ ಅವರ ಬೆನ್ನು ಚಪ್ಪರಿಸಿ ಅವರ ಜೊತೆಗೆ ನಿಲ್ಲಿ. ಸಂಸದರ ಕ್ರೀಡಾಕೂಟ ಒಂದು ದಾಖಲೆಯಾಗಿ ಮೂಡಿ ಬಂದಿದೆ. ಇದನ್ನು ಪ್ರತಿ ವರ್ಷ ಮಾಡುತ್ತೇವೆ.
ರಾಷ್ಟ್ರೀಯ ಪಟುಗಳಿಂದ ಕುಸ್ತಿ ಆಯೋಜನೆ: ಬೊಮ್ಮಾಯಿ
ಯಾರು ರಾಜ್ಯ ಮಟ್ಟಕ್ಕೆ ಹೋಗುವ ಅವಕಾಶ ಇದೆ. ಅವರಿಗೆ ಎಲ್ಲ ರೀತಿಯ ವ್ಯವಸ್ಥೆಯನ್ನು ನಾನು ಮಾಡಿಕೊಡುತ್ತೇನೆ. ಬರುವ ದಿನಗಳಲ್ಲಿ ಇಂಡಿಯನ್ ಸ್ಟಾರ್, ಕರ್ನಾಟಕ ಸ್ಟಾರ್, ಇಂಟರ್ ನ್ಯಾಷನಲ್ ಎಲ್ಲವೂ ಇಲ್ಲಿಯೇ ಆಗಬೇಕು. ಮೇ ಅಂತ್ಯದಲ್ಲಿ ದೊಡ್ಡಪ್ರಮಾಣದಲ್ಲಿ ರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ಕರೆಯಿಸಿ ಕುಸ್ತಿ ಆಯೋಜನೆ ಮಾಡಲು ತೀರ್ಮಾನಿಸಿದ್ದೇವೆ ಎಂದು ಹೇಳಿದರು.
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications