ಸುಮಲತಾ 'ಗಂಡುಮಗಳು', ಧೈರ್ಯ ಜಾಸ್ತಿ: ಶೋಭಾ ಕರಂದ್ಲಾಜೆ
Recommended Video

ಬೆಂಗಳೂರು, ಮಾರ್ಚ್ 25: ಸುಮಲತಾ ಅಂಬರೀಷ್ ಅವರ ಧೈರ್ಯವನ್ನು ಮೆಚ್ಚುವಂಥದ್ದು. ಅವರು ಒಬ್ಬ 'ಗಂಡುಮಗಳು' ಎಂದು ಸಂಸದೆ ಶೋಭಾ ಕರಂದ್ಲಾಜೆ ಬಣ್ಣಿಸಿದರು.
ಕರ್ನಾಟಕ ಲೋಕಸಭಾ ಕ್ಷೇತ್ರಗಳ 'ಎ ಟು ಜೆಡ್' ಮಾಹಿತಿ
ಮಂಡ್ಯ ಲೋಕಷಭೆ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ತಮಗೆ ಬೇಷರತ್ ಬೆಂಬಲ ಘೋಷಿಸಿರುವ ಬಿಜೆಪಿಗೆ ಧನ್ಯವಾದ ಹೇಳಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್, ಯಡಿಯೂರಪ್ಪ ಅವರನ್ನು ಸುಮಲತಾ ಭೇಟಿ ಮಾಡಿದ ಬಳಿಕ ಶೋಭಾ ಮಾತನಾಡಿದರು.
ಮಾಜಿ ಸಚಿವ, ನಟ ಅಂಬರೀಷ್ ಅವರು ನಿಧನರಾದ ಸಂದರ್ಭದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಪ್ರದರ್ಶಿಸಿದ ಅಭಿಮಾನ ನಿಜವೇ ಆಗಿದ್ದರೆ, ತಮ್ಮ ಮಗ ನಿಖಿಲ್ ಸಲ್ಲಿಸುವ ನಾಮಪತ್ರವನ್ನು ಹಿಂದಕ್ಕೆ ಪಡೆಯುವಂತೆ ಹೇಳಲಿ. ಮಗನನ್ನು ಸುಮಲತಾ ಅವರ ಎದುರು ಕಣಕ್ಕೆ ಇಳಿಸದೆಯೇ ಇರುವುದು ನಿಜವಾದ ಅಭಿಮಾನ ಎಂದರು.

ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಮಗನ ಎದುರಾಳಿಯಾಗಿರುವ ಸುಮಲತಾ ಅಂಬರೀಷ್ ಅವರಿಗೆ ಬೆಂಬಲ ನೀಡಿರುವ ನಟರ ಬಗ್ಗೆ ಹಗುರವಾದ ಮಾತನಾಡುತ್ತಿದ್ದಾರೆ. ಇದು ಅವರ ಹತಾಶೆಯ ಮನೋಭಾವವನ್ನು ತೋರಿಸುತ್ತದೆ ಎಂದು ಟೀಕಿಸಿದರು.
ಈ ರೀತಿನ ನಡೆ ಮುಖ್ಯಮಂತ್ರಿ ಅವರಿಗೆ ಶೋಭೆ ತರುವುದಿಲ್ಲ. ಚುನಾವಣೆ ಒಂದು ಯುದ್ಧದಂತೆ. ಅದನ್ನು ಸಮರ್ಥವಾಗಿ ಎದುರಿಸಬೇಕು ಎಂದು ಹೇಳಿದರು.
ಸುಮಲತಾ ಅವರ ಸ್ಪರ್ಧೆಯಿಂದ ಮತ್ತು ಅವರಿಗೆ ದೊರೆತಿರುವ ಬೆಂಬಲನ್ನು ಕಂಡು ಅಪ್ಪ-ಮಕ್ಕಳಿಗೆ ಈಗಾಗಲೇ ಅತಂತ್ರ ಸ್ಥಿತಿ ಉಂಟಾಗಿದೆ. ಜನರು ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು.












Click it and Unblock the Notifications